Revenue Facts

ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಗೆ ದಂಡ ವಿಧಿಸಿದ ಸಾರಿಗೆ ಸಂಸ್ಥೆ…!

ನಿಯಮ ಉಲ್ಲಂಘಿಸಿದ  ಪ್ರಯಾಣಿಕರಿಗೆ ದಂಡ ವಿಧಿಸಿದ ಸಾರಿಗೆ ಸಂಸ್ಥೆ…!

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (BMTC) ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಪ್ರಯಾಣಿಕರ ಮೇಲೆ ದಂಡ ವಿಧಿಸಲಾಗಿದೆ. ನವೆಂಬರ್ ತಿಂಗಳಲ್ಲಿ ೩೭೬೭ ಪ್ರಯಾಣಿಕರು ನಿಯಮವನ್ನು ಉಲ್ಲಂಘಿಸಿದ್ದು, ೭ ಲಕ್ಷಕ್ಕಿಂತ ಹೆಚ್ಚು ದಂಡವನ್ನು ವಿದಿಸಿದ್ದು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ ತಿಳಿಸಿದೆ.

ಟಿಕೆಟ್ ರಹಿತ ಪ್ರಯಾಣಿಕರು ಪತ್ತೆ…!

ಟಿಕೆಟ್ ರಹಿತ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರನ್ನು ಪತ್ತೆಹಚ್ಚಲು ಬೆಂಗಳೂರು ಮಹಾನಗರ ಪಾಲಿಕೆಯ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಲು ಬಿಎಂಟಿಸಿ ಸಿಬ್ಬಂದಿಗಳನ್ನು ನೇಮಕ ಮಾಡಿದಿ ಎಂದು ಹೇಳಿದೆ. ನವೆಂಬರ್‌ ತಿಂಗಳಲ್ಲಿ 16,421 ಸಿಬ್ಬಂದಿಯ ಟ್ರಿಪ್‌ಗಳನ್ನು ಪರಿಶೀಲಿಸಿದರು ಮತ್ತು 3,329 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡವಾಗಿ 6,68,610 ರೂ.ಗಳನ್ನು ವಸೂಲಿ ಮಾಡಿದ್ದಾರೆ. ಹಾಗು ಕಂಡಕ್ಟರ್ ಗಳ ಕರ್ತವ್ಯಲೋಪ ವಿರುದ್ಧ ಪ್ರಕರಣಗಳನ್ನು ದಾಖಲುಮಾಡಲಾಗಿದೆ.

ಮಹಿಳೆಯರಿಗೆ ಮೀಸಲಿಟ್ಟ ಸೀಟಿನಲ್ಲಿ ಗಂಡಸರು…!

ಜೂನ್ ೨೦೨೩ ರ ಶಕ್ತಿ ಯೋಜನೆಯನ್ನು ಜಾರಿ ಬಂದ ನಂತರ ಮಹಿಳೆ ಪ್ರಯಾಣ ಹೆಚ್ಚಾಗಿದೆ. KKRTC ಮತ್ತುNWKRTC ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ 1,669.45 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ ಎಂದು ಹೇಳಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯ ತಪಾಸಣಾ ಸಿಬ್ಬಂದಿ ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳನ್ನು ಆಕ್ರಮಿಸಿಕೊಂಡ 438 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ. ಹಾಗು ಕರ್ನಾಟಕ ಮೋಟಾರು ವಾಹನಗಳ ನಿಯಮಗಳಿಗೆ ಅನುಗುಣವಾಗಿ 43,800 ರೂ. ದಂಡವನ್ನು ವಿಧಿಸಿದ್ದಾರೆ ಎಂದು ವರದಿಯಾಗಿದೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್

Exit mobile version