Revenue Facts

ಬೆಂಗಳೂರಿನಲ್ಲಿ ಭಾರತದ ಅತಿ ಎತ್ತರದ ಸ್ಕೈಡೆಕ್ ನಿರ್ಮಾಣ

ಬೆಂಗಳೂರಿನಲ್ಲಿ ಭಾರತದ ಅತಿ ಎತ್ತರದ ಸ್ಕೈಡೆಕ್ ನಿರ್ಮಾಣ

ಬೆಂಗಳೂರ;ರಾಜ್ಯ ರಾಜಧಾನಿ ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿಯಲ್ಲಿ ದೇಶದ ಅತಿ ದೊಡ್ಡ ವೀಕ್ಷಣಾ ಗೋಪುರ (Skydock) ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ.ಒಂದು ವೇಳೆ ಇದು ನಿರ್ಮಾಣವಾದರೆ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ(Observation tower) ಎನ್ನುವ ಕೀರ್ತಿಗೆ ಭಾಜನವಾಗಿದೆ. ಆದರೆ ಸದ್ಯ ಇದು ಇನ್ನೂ ಪರಿಶೀಲನೆಯ ಹಂತದಲ್ಲಿದೆ.ಒಂದು ವೇಳೆ ಬೆಂಗಳೂರಿನಲ್ಲಿ ಸ್ಕೈಡೆಕ್‌ ನಿರ್ಮಾಣವಾದಲ್ಲಿ, ಅದು 250 ಮೀಟರ್‌ ಎತ್ತರವನ್ನು ಹೊಂದಿರಲಿದೆ,821 ಅಡಿ ಎತ್ತರದ ಈ ಕಟ್ಟಡದ ತುದಿಯಲ್ಲಿ ಸುಮಾರು 100ರಿಂದ 150 ಜನರು ನಿಂತು, ಸುತ್ತಲೂ 360 ಡಿಗ್ರಿ ಕೋನದಲ್ಲಿ ಇಡೀ ಬೆಂಗಳೂರನ್ನು ನೋಡಿ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.ಇದರ ರೂಪುರೇಷೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಆಸ್ಟ್ರಿಯಾ ಮೂಲದ ಬಿಗ್‌ ಬ್ಯಾನ್ಯನ್‌ ಸಂಸ್ಥೆಯು ಪ್ರಾತ್ಯಕ್ಷಿಕೆ ತೋರಿಸಿದೆ.ಸ್ಕೈಡೆಕ್‌ ನಿರ್ಮಾಣಕ್ಕೆ 8 ರಿಂದ 10 ಎಕರೆ ಭೂಮಿ ಬೇಕಿದೆ,ಡಿಪಿಆರ್‌ ಸಿದ್ಧಪಡಿಸುವ ಗುತ್ತಿಗೆ ಪಡೆಯುವ ಸಂಸ್ಥೆಯ ಕಾರ್ಯದ ಮೇಲೆ ನಿಗಾವಹಿಸುವುದು, ಡಿಪಿಆರ್‌ನಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಐವರು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಬಿಬಿಎಂಪಿ(BBMP) ಮುಖ್ಯ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿರಲಿದ್ದು, ಬಿಬಿಎಂಪಿ(BBMP) ಹಣಕಾಸು ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರುಗಳು, ಪ್ರಧಾನ ಎಂಜಿನಿಯರ್‌ಗಳು ಸಮಿತಿಯ ಸದಸ್ಯರಾಗಿ ರಲಿದ್ದಾರೆ. ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.

Exit mobile version