Revenue Facts

ಇಂದು ಸಂಜೆ 4ಕ್ಕೆ KERC’ಯಿಂದ ವಿದ್ಯುತ್ ದರ ಏರಿಕೆಯ ಶಾಕ್?

ಬೆಂಗಳೂರು;ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಇಂದು ಮತ್ತೊಂದು ಶಾಕ್ ತಟ್ಟಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಅವಧಿಗೆ ಮೊದಲೇ ದರ ಪರಿಷ್ಕರಣೆ ಮಾಡಲಿದ್ದು, ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ. ಹೊಸ ದರ ಇಂದು ಪ್ರಕಟವಾದರೂ ಮುಂಬರುವ ಏಪ್ರಿಲ್‌ನಿಂದಲೇ ಅದು ಜಾರಿಯಾಗಲಿದೆ. ಸಂಜೆ 4ಕ್ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ KERC ಮಾಹಿತಿ ನೀಡಲಿದೆ. ಹೊಸ ದರ ಇಂದು ಪ್ರಕಟವಾದರೂ ಮುಂಬರುವ ಏಪ್ರಿಲ್‌ನಿಂದಲೇ ಅದು ಜಾರಿಯಾಗಲಿದೆ. ಸಂಜೆ 4ಕ್ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ KERC ಮಾಹಿತಿ ನೀಡಲಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಯೂನಿಟ್‌ಗೆ 30 ರಿಂದ 40 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ KERC ಈಗಲೇ ವಿದ್ಯುತ್‌ ದರ ಪರಿಷ್ಕರಣೆ ಮಾಡುತ್ತಿದೆ. ಎಸ್ಕಾಂಗಳ ನಷ್ಟ ಸರಿದೂಗಿಸಲು ದರ ಪರಿಷ್ಕರಣೆಗೆ ಮುಂದಾಗಿದೆ, ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೇ ಈಗ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೊಂಡರೇ ಪರಿಷ್ಕರಣೆ (Refinement)ಮಾಡೋದಕ್ಕೆ ಸಾಧ್ಯವಾಗೋದಿಲ್ಲ ಎನ್ನುವ ಕಾರಣಕ್ಕೆ, ಇಂದು ಸಂಜೆಯೇ ಪರಿಷ್ಕೃತ ದರಪಟ್ಟಿಯನ್ನು ಕೆಇಆರ್ ಸಿ ಪ್ರಕಟಿಸಲಿದೆ.

Exit mobile version