Revenue Facts

ಮಧ್ಯಮ ವರ್ಗದ ಜನಪ್ರಿಯ ಕಾರು ʻಮಾರುತಿ 800ʼಗೆ 40ರ ಸಂಭ್ರಮ

ಮಧ್ಯಮ ವರ್ಗದ ಜನಪ್ರಿಯ ಕಾರು ʻಮಾರುತಿ 800ʼಗೆ 40ರ ಸಂಭ್ರಮ

# popular middle #class car #Maruti 800 #celebrates 40 years

ಬೆಂಗಳೂರು;1983ರ ಡಿಸೆಂಬರ್ 14 ರಂದು ಮಾರುಕಟ್ಟೆ ಪ್ರವೇಶಿಸಿದ್ದ ಮಧ್ಯಮ ವರ್ಗದವರ ಪ್ರತಿಷ್ಠೆಯ ಕಾರು ‘ಮಾರುತಿ 800’ 40ರ ಸಂಭ್ರಮದಲ್ಲಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಈ ಹ್ಯಾಚ್ ಬ್ಯಾಕ್ ಕಾರು ಪ್ರಸಿದ್ಧಿಯಲ್ಲಿದ್ದು 2004ರ ತನಕ ಭಾರತದಲ್ಲಿ ಗರಿಷ್ಠ ಮಾರಾಟವನ್ನು ದಾಖಲಿಸಿದ್ದ ಕಾರು(Car) ಎಂಬ ಹೆಗ್ಗಳಿಕೆ ಪಡೆದಿತ್ತು. ಸರ್ಕಾರಿ ಸ್ವಾಮ್ಯದ ಮಾರುತಿ ಉದ್ಯೋಗ್‌ ಲಿಮಿಟೆಡ್ ಮತ್ತು ಜಪಾನಿನ ಸುಜುಕಿ ಮೋಟಾ‌ರ್ ಕಂಪನಿ(Suzuki motor) ಸಹಯೋಗದೊಂದಿಗೆ ಭಾರತದಲ್ಲಿ ಈ ಕಾರನ್ನು ಉತ್ಪಾದನೆ ಮಾಡಲಾಗುತ್ತಿತ್ತು.31 ವರ್ಷಗಳಿಂದ ಉತ್ಪಾದಿಸಲ್ಪಟ್ಟ, ಮಾರುತಿ ಸುಜುಕಿ 800 ಭಾರತದಲ್ಲಿ ಎರಡನೇ ಅತಿ ಉದ್ದದ ಉತ್ಪಾದನಾ ಕಾರ್ ಆಗಿ ಉಳಿದಿದೆ, 40 ವರ್ಷಗಳ ಹಿಂದೆ ಇದೇ ದಿನ ಅಂದರೆ ಡಿಸೆಂಬರ್ 14ರಂದು ಐಕಾನಿಕ್ ಮಾರುತಿ 800 ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.

ಮುಂಬರುವ ದಿನಗಳಲ್ಲಿ ಅದು ಎಷ್ಟು ಜನಪ್ರಿಯವಾಯಿತೆಂದರೆ ‘ಜನರ ಕಾರು’ ಎಂದೇ ಅದನ್ನು ಉದ್ಯಮ ವಲಯ ಗುರುತಿಸಿತು.ಜಪಾನ್ ಮೂಲದ ಸುಜುಕಿ ಮೋಟಾರ್ ಹಾಗೂ ಭಾರತದ ಮಾರುತಿ ಉದ್ಯೋಗ್ ಲಿಮಿಟೆಡ್(Marutiudoyog limited) ಉದ್ಯಮ ಸಂಸ್ಥೆಗಳ . ಸುಜುಕಿ ಮತ್ತು ವಿ. ಕೃಷ್ಣಮೂರ್ತಿ ಅವರುಗಳ ಜಂಟಿಯಾಗಿ ಒಪ್ಪಂದಕ್ಕೆ ಬಂದ. ಇಂಥದ್ದೊಂದು ಜನಸಾಮಾನ್ಯರ ವಾಹನವನ್ನು ಪರಿಚಯಿಸಿದ್ದು ಸ್ಮರಣಾರ್ಹ. ಭಾರತದ ಶ್ರೇಷ್ಠ ಸಾರ್ವಜನಿಕ ವಲಯದ ವ್ಯವಸ್ಥಾಪಕರಲ್ಲಿ ಕೃಷ್ಣಮೂರ್ತಿಯವರು ಸಹ ಒಬ್ಬರು.ಕೆಲವೇ ದಿನಗಳಲ್ಲಿ ದೇಶಾದ್ಯಂತ ರಸ್ತೆಗಳನ್ನು ಆಕ್ರಮಿಸಿಕೊಂಡ ಈ ಕಾರು, ಗ್ರಾಮೀಣ ಭಾರತದ ಜನತೆಯ ನೆಚ್ಚಿನ ವಾಹನವೆನಿಸಿತು. ತೀರಾ ದುಬಾರಿ ಎನಿಸದ, ಸಾಮಾನ್ಯ ಜನರಿಗೂ ಕೈಗೆಟುಕಬಲ್ಲ ಬೆಲೆ ಈ ಕಾರಿನ ಜನಪ್ರಿಯತೆಗೆ ಒಂದು ಕಾರಣವಾದರೆ, ಅದರ ಅಚ್ಚುಕಟ್ಟು ಆಕಾರ, ಬಣ್ಣಗಳು ಹಾಗೂ ದೃಢತೆ ಇವೆಲ್ಲವೂ ಜನಮನವನ್ನು ಬಲುಬೇಗ ಬಲುಬೇಗ ಸೆಳೆಯಿತು,ಕಾರು ಉದ್ಯಮಕ್ಕೆ ಬುನಾದಿ ಹಾಕುವಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪರಿಣಾಮಕಾರಿ ಪಾತ್ರ ವಹಿಸಿದ್ದರು,ಮೊದಲ ಮಾರುತಿ-800 ಕಾರಿನ ನೋಂದಣಿ ಸಂಖ್ಯೆ DIA 6479,ಇದುವರೆಗೆ ಸುಮಾರು 27 ಲಕ್ಷ ಸಂಖ್ಯೆಯ ಮಾರುತಿ-800 ಕಾರುಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ.14 ಡಿಸೆಂಬರ್ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕೈಯಿಂದ ಮೊದಲ ಮಾರುತಿ-800 ಕಾರಿನ ಕೀಲಿಯನ್ನು ಪಡೆದವರು ನವದೆಹಲಿಯ ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿ ಹರಪಾಲ್ ಸಿಂಗ್(Harpalsingh)

Exit mobile version