Revenue Facts

ಸ್ಥಿರಾಸ್ತಿ ಮಾರ್ಗಸೂಚಿ ದರ ಮೌಲ್ಯ ಶೇ.30ರಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಮೌಲ್ಯ ಶೇ.30ರಷ್ಟು ಹೆಚ್ಚಿಸಲು  ಸರ್ಕಾರ ಚಿಂತನೆ

# government # thinking # increasing # guideline #value # immovable # property # 30%

ಬೆಂಗಳೂರು; ರಾಜ್ಯ ಸರ್ಕಾರ ಈಗಾಗಲೇ ಆಸ್ತಿ ಖರೀದಿಯ ನಿಯಮವನ್ನು ಜಾರಿಗೊಳಿಸಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅಕ್ಟೊಬರ್ ನಲ್ಲಿ ಏರಿಕೆಯಾಗಲಿದೆ. ಮುದ್ರಾಣಾಂಕ ಶುಲ್ಕದ ಹೆಚ್ಚಳವು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ತಿ ಖರೀದಿಯ ಬೆಲೆ ಶೇ. 30 ರಿಂದ 40 ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್‌ ಆಸ್ತಿಗಳ ಮಾರ್ಗಸೂಚಿ ದರವನ್ನು ಶೇ.30ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ.

ಆಸ್ತಿ ಖರೀದಿದಾರರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದ್ದು ಕಟ್ಟಡ,ಸೈಟ್,ಭೂಮಿ,ಸೇರಿ ಸ್ಥಿರ ಆಸ್ತಿಗಳ ಮೌಲ್ಯ ಸದ್ಯದಲ್ಲೇ ತುಟ್ಟಿಯಾಗಲಿದೆ,ರಾಜ್ಯ ಸರ್ಕಾರ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಮುಂದಾಗಿದೆ,ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ಮೌಲ್ಯದರ ನಡುವೆ ಹೆಚ್ಚಿರುವ ಅವಧಿ ತಗ್ಗಿಸಲು ಆಸ್ತಿಗಳ ಮೌಲ್ಯ ಪರಿಷ್ಕರಣೆ ಪೂರ್ವಸಿದ್ಧತಾ ಕೆಲಸ ಪೂರ್ಣಗೊಂಡಿದ್ದು, ನಾಳೆ ಅಂದರೆ ಸೆಪ್ಟೆಂಬರ್‌ 8ರಂದು ಪರಿಷ್ಕೃತ ಮಾರ್ಗಸೂಚಿ ದರ ಕರಡು ಪ್ರಕಟವಾಗಲಿದೆ.ಶೇ. 30ರಷ್ಟು ಸ್ಥಿರಾಸ್ತಿ ಮೌಲ್ಯವನ್ನು ಹೆಚ್ಚಳ ಮಾಡಲಾಗುತ್ತಿದೆ.

ವಸತಿ ಸಂಕೀರ್ಣ ಫ್ಲಾಟ್‌ಗಳ ಮೌಲ್ಯವನ್ನು ಕನಿಷ್ಠ ಪ್ರಮಾಣದಲ್ಲಿ ಅಂದರೆ, ಶೇ.5 ರಿಂದ ಶೇ. 10ರಷ್ಟು ಮಾತ್ರ ಏರಿಕೆ ಮಾಡಲಾಗುತ್ತಿದೆ. ಗರಿಷ್ಠ ಶೇ. 90 ರವರೆಗೆ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳು ಸೇರಿ ಆಯ್ದ ಕಡೆಗಳಲ್ಲಿ ಮಾರ್ಗಸೂಚಿ ದರ ಹೆಚ್ಚಳವಾಗುತ್ತಿದೆ.ಬಿಡಿಎ,ಹಾಗೂ ವಿಲ್ಲಾಗಳಲ್ಲಿ ಶೇ. 30ಕ್ಕಿಂತ ಮಾರ್ಗಸೂಚಿ ದರ ಹೆಚ್ಚಳವಾಗುತ್ತಿದೆ, ಬೆಂಗಳೂರು ಕೇಂದ್ರಭಾಗದ ಹಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ಮೂಲದರದೊಂದಿಗೆ ವಾಣಿಜ್ಯ ದರವೂ ಸೇರುವುದರಿಂದ ಭೂಮಿ ಮೌಲ್ಯ ದ್ವಿಗುಣಗೊಳ್ಳಲಿದೆ.

Exit mobile version