ಬೆಂಗಳೂರು: ಮೇ12;ವಿಧಾನಸಭೆ ಚುನಾವಣೆಗೆ ಮತದಾನ ನಡೆಯುವ ಮೂಲಕ ತೆರೆಬಿದ್ದಿದ್ದು, ಆಯಾ ಕ್ಷೇತ್ರದ ಶಾಸಕರನ್ನು ಆಯ್ಕೆ ಮಾಡಲು ಉತ್ಸಾಹದಿಂದ ಮತದಾರರು ಮೇ 10 ರಂದು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿನಿಂತು ಮತಚಲಾಯಿಸುವ ಮೂಲಕ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರವಾಗಿರಿಸಿದ್ದಾರೆ.ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದ್ದು, ಮೇ 13 ರ ಮತ ಎಣಿಕೆಯಲ್ಲಿ ಬಹಿರಂಗಗೊಳ್ಳಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲ್ಲಿದ್ದು, ಮಧ್ಯಾಹ್ನದ ವೇಳೆಗೆ ಹಲವು ಕ್ಷೇತ್ರಗಳ ಫಲಿತಾಂಶ ಹೊರ ಬೀಳಲಿದೆ. 224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ.
ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಇನ್ನು ಮೇ.13ರಂದು ಫಲಿತಾಂಶ ಘೋಷಣೆ ಮಾತ್ರವೇ ಬಾಕಿ ಇದೆ.ಮೇ.13ರಂದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕ ಭವಿಷ್ಯ ನಿರ್ಧಾರವಾಗಲಿದೆ.ರಾಜ್ಯದಲ್ಲಿ ಒಟ್ಟಾರೆ 34 ಕೇಂದ್ರಗಳಲ್ಲಿ ಮತ ಎಣಿಕೆಯ ನಡೆಯಲಿದೆ. ಬಿಗಿಭದ್ರತೆಗಾಗಿ ಅರೆಸೇನಾ ಪಡೆಗಳ ನಿಯೋಜನೆ, ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.ರಾಜ್ಯದಲ್ಲಿ ಒಟ್ಟು 34 ಸೆಂಟರ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲೆಲ್ಲಿ ಮತ ಎಣಿಕೆ ನಡೆಯಲಿದೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.
ಮತ ಎಣಿಕೆ ಎಲ್ಲೆಲ್ಲಿ?
ಬೆಂಗಳೂರು ಗ್ರಾಮಾಂತರ – ಅಕಾಶ್ ಇಂಟರ್ನ್ಯಾಷನಲ್ ಸ್ಕೂಲ್, ಪ್ರಸನ್ನಹಳ್ಳಿ, ದೇವನಹಳ್ಳಿ ಟೌನ್
ಬೆಂಗಳೂರು ನಗರ – ಸೈಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮತ್ತು ಪಿಯು ಕಾಲೇಜು, ಬೆಂಗಳೂರು
ಬಿಬಿಎಂಪಿ – ದಕ್ಷಿಣ ಎಸ್‌ಎಸ್‌ಎಂಆರ್‌ವಿ ಪಿಯ ಕಾಲೇಜು, ಜಯನಗರ
ಬಿಬಿಎಂಪಿ ಉತ್ತರ – ಮೌಂಟ್ ಕಾರ್ಮೆಲ್ ಪಿಯು ಕಾಲೇಜು
ಬಿಬಿಎಂಪಿ ಸೆಂಟ್ರಲ್ – ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ
ಕೋಲಾರ – ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು
ಚಿಕ್ಕಬಳ್ಳಾಪುರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿ ರಸ್ತೆ
ತುಮಕೂರು – ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಿಎಚ್ ರಸ್ತೆ / ತುಮಕೂರು ವಿವಿ ವಿಜ್ಞಾನ ಕಾಲೇಜು / ತುಮಕೂರು ವಿವಿ ಆರ್ಟ್ ಕಾಲೇಜು
ದಾವಣಗೆರೆ – ಶಿವಗಂಗೋತ್ರಿ ದಾವಣಗೆರೆ ವಿವಿ
ಚಿತ್ರದುರ್ಗ- ಸರ್ಕಾರಿ ವಿಜ್ಞಾನ ಕಾಲೇಜು
ಬಳ್ಳಾರಿ – ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ಚಾಮರಾಜನಗರ – ಸರ್ಕಾರಿ ಇಂಜಿನಿಯರ್ ಕಾಲೇಜು
ಚಿತ್ರದುರ್ಗ- ಸರ್ಕಾರಿ ವಿಜ್ಞಾನ ಕಾಲೇಜು
ಬಳ್ಳಾರಿ – ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ವಿಜಯನಗರ – ಪ್ರೌಢದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೊಸಪೇಟೆ
ಹಾವೇರಿ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ದೇವಗಿರಿ
ಉತ್ತರ ಕನ್ನಡ – ಡಾ. ಎ.ವಿ ಬಾಳಿಗಾ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಕುಮಟಾ
ಧಾರವಾಡ – ಕೃಷಿ ವಿಜ್ಞಾನ ವಿವಿ
ಗದಗ- ಶ್ರೀ ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು, ಗದಗ
ಕೊಪ್ಪಳ- ಶ್ರೀ ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಕೊಪ್ಪಳ
ರಾಯಚೂರು – ಎಲ್ ವಿ ಡಿ ಕಾಲೇಜು
ಬೀದರ್ – ಬಿವಿಬಿ ಕಾಲೇಜು, ಬೀದರ್
ಕಲಬುರಗಿ – ಗುಲ್ಬರ್ಗ ವಿ.ವಿ
ಯಾದಗಿರಿ -ಸರ್ಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – ಸೈನಿಕ ಶಾಲೆ ಕ್ಯಾಂಪಸ್
ಬಾಗಲಕೋಟೆ – ತೋಟಗಾರಿಕಾ ವಿವಿ
ಬೆಳಗಾವಿ – ಆರ್ ಪಿ ಡಿ ಕಾಲೇಜು ಬೆಳಗಾವಿ
ಮೈಸೂರು- ಸರ್ಕಾರಿ ಮಹಾರಾಣಿ ಮಹಿಳಾ ಕಾಲೇಜು
ಕೊಡಗು – ಸೈಂಟ್ ಜೋಸೆಫ್ ಕಾನ್ವೆಂಟ್
ದಕ್ಷಿಣ ಕನ್ನಡ – ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್
ಚಿಕ್ಕಮಗಳೂರು – ಐಡಿಎಸ್‌ಜಿ ಕಾಲೇಜು
ಉಡುಪಿ – ST.CECILY’s ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಬ್ರಹ್ಮಗಿರಿ, ಉಡುಪಿ
ಹಾಸನ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಡೈರಿ ಸರ್ಕಲ್
ಮಂಡ್ಯ – ಮಂಡ್ಯ ವಿವಿ
ರಾಮನಗರ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ