Revenue Facts

ಪಿಂಚಣಿದಾರರಿಗೆ ಸಮಾಲೋಚನಾ ಶುಲ್ಕ ನಿಗದಿ ಮಾಡಿದ ಕೇಂದ್ರ ಸರ್ಕಾರ..!

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಮಾಲೋಚನಾ ಶುಲ್ಕವನ್ನ(consultation fee) 350 ರೂ.ಗೆ ಕೇಂದ್ರ ಸರ್ಕಾರ (central government) ನಿಗದಿಪಡಿಸಲಾಗಿದೆ.

ICU ಗೆ ಒಂದು ದಿನದ ವೆಚ್ಚ ನಿಗದಿ..!

ಆರೋಗ್ಯ ಯೋಜನೆ ಪ್ಯಾಕೇಜ್’ನ ಹೊಸ ದರಗಳನ್ನು ಜಾರಿಗೆ ಕೇಂದ್ರ ಸರ್ಕಾರ ತಂದಿದಲ್ಲದೆ, ಐಸಿಯು (ICU)ಗೆ ಒಂದು ದಿನದ ವೆಚ್ಚವನ್ನ 5,400 ರೂ.ಗೆ ನಿಗದಿಪಡಿಸಿದ. ಸರ್ಕಾರವು ಹೊಸ CGHS ದರಗಳು ಮತ್ತು ಪ್ಯಾಕೇಜ್ ಗನ್ನು ಬಿಡುಗಡೆ ಮಾಡಿದೆ. ಇದೀಗ ಸರ್ಕಾರವು ರೆಫರಲ್ ನಿಯಮಗಳನ್ನ ಮೊದಲಿಗಿಂತ ಸುಲಭಗೊಳಿಸಿದೆ.

CGHS ಫಲಾನುಭವಿಗಳಿಗೆ ICU ಶುಲ್ಕಗಳು:

* ICU ಗಾಗಿ ದರಗಳನ್ನು 5,400 ರೂ.ಗಳಿಗೆ ನಿಗದಿಪಡಿಸಲಾಗಿದೆ
* ICU ಶುಲ್ಕಗಳು NABH ಅಲ್ಲದ ಆಸ್ಪತ್ರೆಗಳಿಗೆ ರೂ 750 ಮತ್ತು NABH ಆಸ್ಪತ್ರೆಗಳಿಗೆ 862 ರೂ ಅನ್ನು ಒಳಗೊಂಡಿರುತ್ತದೆ.
* RMO ಶುಲ್ಕಗಳು, ಶುಶ್ರೂಷಾ ಆರೈಕೆ ಮತ್ತು ಕೊಠಡಿ ಬಾಡಿಗೆಯನ್ನು ಒಳಗೊಂಡಿರುತ್ತದೆ.
* CGHS ಫಲಾನುಭವಿ ವಾರ್ಡ್ ನ ಅರ್ಹತೆಗೆ ಅನುಗುಣವಾಗಿ ಕೊಠಡಿ ಬಾಡಿಗೆ ಇರುತ್ತದೆ.

RMO ಶುಲ್ಕ, ನರ್ಸಿಂಗ್ ಆರೈಕೆ ಮತ್ತು ಕೊಠಡಿ ಬಾಡಿಗೆಯನ್ನ ಒಳಗೊಂಡಿದೆ. ಕೊಠಡಿ ಬಾಡಿಗೆ CGHS ಫಲಾನುಭವಿ ವಾರ್ಡ್ ಅರ್ಹತೆಗೆ ಅನುಗುಣವಾಗಿರುತ್ತದೆ – ಸಾಮಾನ್ಯ ವಾರ್ಡ್, ಅರೆ ಖಾಸಗಿ ವಾರ್ಡ್ ಅಥವಾ ಖಾಸಗಿ ವಾರ್ಡ್.

CGHS ಫಲಾನುಭವಿಗಳಿಗೆ ಕೊಠಡಿ ಬಾಡಿಗೆ…!

* ಸಿಜಿಎಚ್ಎಸ್ (CGHS ) ಕಾರ್ಡ್ ಹೊಂದಿರುವವರಿಗೆ ಸಾಮಾನ್ಯ ವಾರ್ಡ್ ಕೊಠಡಿ ಬಾಡಿಗೆ 1,500 ರೂ.ಗೆ ನಿಗದಿಪಡಿಸಲಾಗಿದೆ.
* ಅರೆ ಖಾಸಗಿ ವಾರ್ಡ್’ನ ಕೊಠಡಿ ಬಾಡಿಗೆ 3,000 ರೂ. ನಿಗದಿಮಾಡಲಾಗಿದೆ.
* ಖಾಸಗಿ ವಾರ್ಡ್’ನ ಕೊಠಡಿ ಬಾಡಿಗೆಯನ್ನ 4500 ರೂ.ಗೆ ನಿಗದಿಮಾಡಲಾಗಿದೆ .

 

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Exit mobile version