ಬೆಂಗಳೂರು, ಏ. 20 : ಕತ್ರಿಗುಪ್ಪೆಯಲ್ಲಿ ಭವ್ಯವಾದ ಬಂಗಲೆಯಲ್ಲಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ಮತ್ತೊಂದು ಮನೆಯನ್ನು ಖರೀದಿಸಿದ್ದಾರೆ. ಅದೂ ಕೂಡ ಬೆಂಗಳೂರಿನಲ್ಲೇ ಖರೀದಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಸ್ಯಾಂಕಿ ಟ್ಯಾಂಕ್ ಬಳಿಯೇ ಮನೆಯನ್ನು ಖರೀದಿಸಿದ್ದಾರೆ. ದುಬಾರಿ ಏರಿಯಾದಲ್ಲಿ ಖರೀದಿಸಿದ ಮನೆಗೆ ಇತ್ತೀಚೆಗಷ್ಟೇ ಗೃಹಪ್ರವೇಶ ಮಾಡಲಾಯ್ತು. ಈ ಸಮಾರಂಭದಲ್ಲಿ ಸಿನಿಮಾ ತಾರೆಯರು, ಉದ್ಯಮಿಗಳು ಹಾಗೂ ರಾಜಕಾರಣಿಗಳು ಕೂಡ ಆಗಮಿಸಿದ್ದರು.
ಕಬ್ಜ ಚಿತ್ರದ ಸಕ್ಸಸ್ ಬಳಿಕ ಉಪೇಂದ್ರ ಅವರು ಈಗ ಪ್ರಜಾಕೀಯ ಪಕ್ದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಸದಾಶಿವನಗರದಲ್ಲೂ ಮನೆಯನ್ನು ಖರೀದಿ ಮಾಡಿದ್ದಾರೆ. ಹಲವು ಸಮಯದಿಂದ ಉಪೇಂದ್ರ ಅವರು, ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿ ಮಾಡಬೇಕು ಎಂದು ಬಯಸಿದ್ದರು. ಹಾಗಾಗಿ ಸದಾಶಿವನಗರದಲ್ಲಿ ಮನೆಯೊಂದು ಮಾರಟಕ್ಕಿದೆ ಎಂಬುದನ್ನು ತಿಳಿದ ಉಪೇಂದ್ರ ಅವರು ಪತ್ನಿ ಜೊತೆಗೆ ಬಂದು ಮನೆಯನ್ನು ನೋಡಿ ಇಷ್ಟಪಟ್ಟು ಖರೀದಿ ಮಾಡಿದ್ದಾರೆ.
ಸದಾಶಿವನಗರದಲ್ಲಿನ ಮನೆಯನ್ನು ಖರೀದಿಸಲು ಉಪೇಂದ್ರ ಅವರ ಕಾಮನ್ ಗೆಳೆಯರಿಂದ ಸಾಧ್ಯವಾಗಿದೆ. ಈನ್ನು ಕತ್ರಿಗುಪ್ಪೆಯಲ್ಲಿರುವ ಮನೆಯನ್ನು ಪ್ರಜಾಕೀಯ ಕಚೇರಿಯನ್ನಾಗಿ ಬದಲಾಯಿಸುತ್ತಾರೆ ಎಂಬ ಊಹಾಪೋಹಗಳಿಗೂ ಉಪೇಂದ್ರ ಅವರು ತೆರೆ ಎಳೆದಿದ್ದಾರೆ. ಕತ್ರಿಗುಪ್ಪೆಯಲ್ಲಿರುವ ಅವರ ಮನೆಯನ್ನು ಹಾಗೆ ಉಳಿಸಿಕೊಳ್ಳಲಿದ್ದಾರಂತೆ. ಸದ್ಯ ಸದಾಶಿವನಗರ ಮನೆಯಲ್ಲಿ ಇನ್ನೂ ಸ್ವಲ್ಪ ಕೆಲಸ ಇರುವುದರಿಂದ ಇನ್ನೂ ಮನೆಗೆ ಶಿಫ್ಟ್ ಆಗಿಲ್ಲ.
ಮನೆಯ ಕೆಲಸಗಳು ನಡೆಯುತ್ತಿರುವಾಗಲೇ ದಿನ ಚೆನ್ನಾಗಿದೆ ಎಂಬ ಕಾರಣಕ್ಕಾಗಿ ಗೃಹಪ್ರವೇಶವನ್ನು ಬೇಗ ಮಾಡಿ ಮುಗಿಸಿದ್ದಾರೆ. ಗೃಹಪ್ರವೇಶಕ್ಕೆ ಹೆಚ್ಚಿನ ಜನರನ್ನು ಕರೆದಿರಲಿಲ್ಲ. ಅತ್ಯಾಪ್ತರಿಗೆ ಮಾತ್ರವೇ ಆಹ್ವಾನ ನೀಡಿದ್ದರು. ಇನ್ನು ಮನೆಯಲ್ಲಿನ ಕೆಲಸಗಳೆಲ್ಲಾ ಮುಗಿದ ಬಳಿಕ ದಂಪತಿಗಳು ಮನೆಗೆ ಪ್ರವೇಶಿಸಲಿದ್ದಾರೆ. ಸದ್ಯ ಪ್ರಜಾಕೀಯ ಪಕ್ಷದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಅವರು, ಈ ನಡುವೆಯೇ ಕಬ್ಜ ಚಿತ್ರದ 2 ರಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.