Revenue Facts

ಯಶಸ್ವೀಯಾದ ರಿಯಾಯಿತಿ ಪ್ಲಾನ್, 13.81/- ಕೋಟಿ ರೂ ದಂಡ ಸಂಗ್ರಹಿಸಿದ ಟ್ರಾಫಿಕ್ ಪೊಲೀಸ್ :

ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡ ಸಂಗ್ರಹಣೆಯನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ 50% ರಿಯಾಯಿತಿ ನೀಡಿ ಫೆ 02 ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಯಲ್ಲಿ ಫೆ 03 ರಿಂದ ದಂಡ ಪಾವತಿ ಪ್ರಕ್ರಿಯೇ ಆರಂಭವಾಗಿದ್ದು ಕೇವಲ ಎರಡೇ ದಿನಗಳಲ್ಲಿ 13.81/- ಕೋಟಿ ದಂಡದ ಹಣ ಸಂಗ್ರಹವಾಗಿದ್ದು 4.17 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದು ರಿಯಾಯಿತಿ ಪ್ಲಾನ್ ಯಶ್ವಿಯಾಗಿದಂತಿದೆ.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ಒನ್ ಕೇಂದ್ರೆಗಳಲ್ಲಿ ಸಾರ್ವಜನಿಕರು ದಂಡ ಪಾವತಿಸಲು ಮುಗಿಬಿದ್ದಿದ್ದು ಹಲವೂ ಕಡೆ ಕಂಪ್ಯೂಟರ್ ಕೊರತೆ ಹಾಗೂ ನೆಟ್ ವರ್ಕ್ ಸಮಸ್ಯೆಗಳು ಸಹ ಉಂಟಾಗಿದೆ. ಆನ್ ಲೈನ್ ಮೂಲಕ ದಂಡ ಪಾವತಿಸಲು ಆಸಕ್ತಿ ತೋರುತ್ತಿರುವ ಜನರು ಪೇಟಿಎಂ ನಲ್ಲೂ ಸಹ ದಂಡ ಪಾವತಿಸುತ್ತಿದ್ದು ಪೇಟಿಎಂ ನಲ್ಲಿ ವಾಹನದ ವಿವರುಗಳು ಗೊತ್ತಾಗದೇ ಇರುವ ಕಾರಣ ವಾಹನದ ಸಂಖ್ಯೆಯನ್ನು ಒಂದೊಮ್ಮೆ ಖಚಿತ ಪಡಿಸಿಕೊಂಡು ದಂಡ ಪಾವತಿಸಬೇಕೆಂದು ಅಧಿಕಾರಿಗಳು ತಿಳಿ ಹೇಳಿದ್ದಾರೆ

ರಸ್ತೆಯಲ್ಲಿ ವಾಹನವನ್ನು ತಾಪಸಣೆ ಮಾಡುವ ಎ.ಎಸ್.ಐ ಹಾಗೂ ಪಿ.ಎಸ್.ಐ ದರ್ಜೆಯ ಅಧಿಕಾರಿಗಳ ಬಳಿಯು ದಂಡವನ್ನು ಪಾವತಿ ಮಾಡಬಹುದಾಗಿದ್ದು, ರಸ್ತೆಯಲ್ಲಿ ವಾಹನವನ್ನು ತಡೆದಾಗ ಬೈದುಕೊಳ್ಳುತ್ತಿದ್ದಾ ಜನರೇ ಈಗ ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗಿ ದಂಡ ಕಟ್ಟಲ್ಲು ಮುಂದಾಗಿದ್ದಾರೆ.

ದಂಡಕ್ಕೆ ಹೆದರಿ ಎಷ್ಟೋ ವಾಹನಗಳು ಪೊಲೀಸರ ಕಣ್ಣಿಗೆ ಕಾಣದಂತೆ ಹಾಗೂ ಮುಖ್ಯ ರಸ್ತೆಗಳಲ್ಲಿ ಬಾರದಂತೆ ಓಡಾಡುತ್ತಿದ್ದು ಈ ರಿಯಾಯಿತಿಯಿಂದ ದಂಡವನ್ನು ಪಾವತಿಸಿ ರಾಜರೋಷವಾಗಿ ಓಡಾಡಲು ಅನೂಕಲು ಮಾಡಿಕೊಟ್ಟಂತಾಗಿದೆ ಎಂದು ಸಾರ್ವಜನಿಕರು ಹರ್ಷವನ್ನು ಹೊರಹಾಕಿದ್ದಾರೆ.

Exit mobile version