Revenue Facts

ಉಪನೋಂದಣಿ ಕಛೇರಿ,ಬೆಳಗಾವಿಯಲ್ಲಿ ಶುಲ್ಕ ಸರ್ಕಾರಕ್ಕೆ ಪಾವತಿಯಾಗದೇ ವಂಚಿಸಲಾಗಿದೆಯೇ?:ಲೆಕ್ಕಪರಿಶೋಧನೆಯ ಸಮಯದಲ್ಲಿಅಕ್ರಮ ಬಯಲು!

ಮಹಾಲೇಖಪಾಲರು ಬೆಳಗಾವಿ ಉಪನೋಂದಣಿ ಕಛೇರಿಯನ್ನು 2018-19 ರಿಂದ 2021-2022ನೇ ಸಾಲಿನವರೆಗೆ ತಪಾಸಣೆ ನಡೆಸಿದ್ದು, ತಪಾಸಣೆ ವೇಳೆ ಮಹಾಲೇಖಪಾಲರಿಗೆ ದಾಖಲೆಗಳನ್ನುನೀಡದೇ ಇರುವುದು, ನೋಂದಣಿಗೆ ಹಾಜರುಪಡಿಸಿದ ಕೆ-2 ಚಲನ್ ‌ನನ್ನು ಕೆ-2 ಪೋರ್ಟಲ್ ‌ನಲ್ಲಿ Success Reportನ್ನುಪರಿಶೀಲಿಸಿದೆ ಇರುವುದು ಹಾಗೂ ಚಲನ್ ‌ನಿಗೆ ಬ್ಯಾಂಕ್ ಸೀಲ್ ಹಾಕದೇ ಇರುವುದನ್ನು ಪರಿಶೀಲಿಸದೇ ನೋಂದಣಿ ಮಾಡಿದ್ದು ವಸೂಲಾದ ಶುಲ್ಕ ಸರ್ಕಾರಕ್ಕೆ ಪಾವತಿಯಾಗದೇ ಇರುವುದು ಕಂಡುಬಂದಿರುತ್ತದೆ ಎಂದು ಆಕ್ಷೇಪಿಸಿರುತ್ತಾರೆ.

ಈಗಾಗಲೇ ಹೊರಡಿಸಿರುವ ಸುತ್ತೋಲೆ ಸಂಖ್ಯೆ:ಆರ್‌ಜಿಎನ್/126/2020-21, ದಿನಾಂಕ:06-07-2020ರಲ್ಲಿ “ರಾಜ್ಯದ ಎಲ್ಲಾ ಉಪನೋಂದಣಾಧಿಕಾರಿಗಳು ಹಾಗೂ ಜಿಲ್ಲಾನೋಂದಣಾಧಿಕಾರಿಗಳು ನೋಂದಣಿ ಸಮಯದಲ್ಲಿ ಹಾಜರುಪಡಿಸುವ ಅಧಿಕಾರಿಗಳು ಖಜಾನೆ-2 ಚಲನ್ ‌ಗಳನ್ನು ನೋಂದಣಿ ಪರಿಶೀಲಿಸಿ, ಶುಲ್ಕಗಳನ್ನು ಬ್ಯಾಂಕಿಗೆ ಭರಿಸಿರುವುದನ್ನು ಖಚಿತಪಡಿಸಿಕೊಂಡು ನೋಂದಾಯಿಸಲು ಸೂಚಿಸಿದ್ದು ಮತ್ತು ಉಪಯೋಗಿಸಿದ ಚಲನ್‌ಗಳ ಸಂಖ್ಯೆಗಳನ್ನು ಒಂದು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನಮೂದಿಸಿಕೊಂಡು ಪ್ರತಿ ಚಲನ್‌ಗಳನ್ನು ನೋಂದಣಿಗೆ ಹಾಜರುಪಡಿಸಿದಾಗ, ಅಂತಹ ಚಲನ್ ಸಂಖ್ಯೆಯನ್ನುನೋಂದಣಿಗೆ ಉಪಯೋಗಿಸದೆ ಇರುವುದನ್ನು ಉಪಯೋಗಿಸಿದ ಚಲನ್ ‌ಗಳನ್ನು ನಮೂದಿಸಿರುವ ರಿಜಿಸ್ಟರ್‌ನ ಮೂಲಕ ಪರಿಶೀಲಿಸಿ ಮರು ಉಪಯೋಗ ಆಗಿಲ್ಲದಿರುವುದನ್ನು ದೃಢಪಡಿಸಿಕೊಂಡು ದಸ್ತಾವೇಜುಗಳನ್ನು ನೋಂದಾಯಿಸಲು ರಾಜ್ಯದ ಎಲ್ಲಾ ಉಪನೋಂದಣಾಧಿಕಾರಿಗಳಿಗೆ ಸೂಚಿಸಿದೆ ಹಾಗೂ ಸುತ್ತೋಲೆಯಲ್ಲಿನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲುನಿರ್ದೇಶಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೇರ ಮತ್ತು ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ” ಎಂದುಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ.

ಅಲ್ಲದೆ ಐ.ಜಿ.ಆರ್.ರವರ ಕಛೇರಿಯ ಜ್ಞಾಪನ ಪತ್ರ ಸಂಖ್ಯೆ:1RF/07/2020-21, ದಿ:16-03-2021 ಮತ್ತು ಜ್ಞಾನ ಪತ್ರ ಸಂಖ್ಯೆ: RGN/94/2021-22, ದಿನಾಂಕ:11-06-2021ರಲ್ಲಿ ಖಜಾನೆ-2 ಚಲನ್ ‌ಗಳ ಪರಿಶೀಲನೆ ಮತ್ತು ನಿರ್ವಹಣೆಗಳ ಕುರಿತು ನಿರ್ದೇಶನಗಳನ್ನು ನೀಡಲಾಗಿದೆ.

ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪನೋಂದಣಾಧಿಕಾರಿಗಳು ಕೆ-2 ಚಲನ್ ‌ಗಳ ಕುರಿತು ಮೇಲಿನ ಸುತ್ತೋಲೆಯಲ್ಲಿ ತಿಳಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೇರ ಮತ್ತು ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ. ಎಂದು ,ನೋಂದಣಿ ಮಹಾಪರಿವೀಕ್ಷಕರು,ಮುದ್ರಾಂಕಗಳ ಆಯುಕ್ತರಾದ ಶ್ರೀಮತಿ ಮಮತರವರು ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿರುತ್ತಾರೆ.

Exit mobile version