ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಮುಂದಾಗಿದೆ. ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆ ನಾಲ್ಕೂ ನಿಗಮಗಳಿಗೆ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆ ವಿನಾಯಿತಿ…!
ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಜಾರಿ ಬಂದ ನಂತರ ೫ ಗ್ಯಾರಂಟಿಯನ್ನು ಘೋಷಿಸಿತ್ತು. ಆ ಗ್ಯಾರಂಟಿಯಲ್ಲಿ ಶಕ್ತಿ ಯೋಜನೆ ಸಹ ಒಂದು . ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆದಾಯವನ್ನು ಹೆಚ್ಚು ಮಾಡಲಾಗಿದೆ. ಅದರಿಂದ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೂ, ನಾಲ್ಕೂ ನಿಗಮಗಳ ಮೇಲೆ 4 ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಹೊಣೆಗಾರಿಕೆಯಿದ್ದು, ಅದನ್ನು ತೀರಿಸಲು ನಿಗಮಗಳು ಸಾಕಷ್ಟು ಕಷ್ಟ ಪಡುತ್ತಿದೆ. ಅದರ ಜತೆಗೆ ಶಕ್ತಿ ಯೋಜನೆಗಾಗಿ ನಿಗಮಗಳಿಂದ ವ್ಯಯಿಸಲಾದ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಕಾರಣ, ಸ್ಪಲ್ಪರ ಮಟ್ಟಿಗೆ ನಿಗಮಗಳು ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿವೆ.
ಮೋಟಾರು ವಾಹನ ವಿನಾಯಿತಿಗೆ ಮುಖ್ಯ ಮಂತ್ರಿ ಪ್ರಸ್ತಾಪ..!
ಸಾರಿಗೆ ಇಲಾಖೆಯಿಂದಲೂ ಮೋಟಾರು ವಾಹನ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿವೆ . ಮುಖ್ಯ ಮಂತ್ರಿ ಸಿದ್ದರಾಮಯ್ಯ ಜತೆ ಸಾರಿಗೆ ಸಚಿವ ರಾಮಲಿಂರೆಡ್ಡಿ ಚರ್ಚಿಸಿದ್ದು ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು