Revenue Facts

ಮುಖ್ಯ ಕಾರ್ಯದರ್ಶಿಯಾಗಿ ಡಾ ರಜನೀಶ್ ಗೋಯೆಲ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ

ಮುಖ್ಯ ಕಾರ್ಯದರ್ಶಿಯಾಗಿ ಡಾ ರಜನೀಶ್ ಗೋಯೆಲ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ

#State Government #orders # appoint #Dr Rajneesh Goel # Chief Secretary

ಬೆಂಗಳೂರು : ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ(Chief Secretary) 1986 ಬ್ಯಾಚ್ ನ ಐಎಎಸ್(IAS) ಅಧಿಕಾರಿ ಡಾ ರಜನೀಶ್ ಗೋಯೆಲ್(Rajneesh Goel) ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ .ಹಾಲಿ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅವಧಿ ನ.30ಕ್ಕೆ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಡಾ.ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ.ಅಂದಹಾಗೇ ದಿನಾಂಕ 30-11-2023ರಂದು ಸಿಎಸ್ ವಂದಿತಾ ಶರ್ಮಾ ಅವರು ನಿವೃತ್ತರಾಗಲಿದ್ದಾರೆ. ಅವರ ಸ್ಥಾನಕ್ಕೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಡಾ.ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.ಡಾ.ರಜನೀಶ್ ಗೋಯಲ್ ಅವರು ನ. 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೆವಾಲಾ ಸಭೆಯ ನಡುವೆಯೇ ರಜನೀಶ್ ಗೋಯೆಲ್ ಸಿಎಂ ಭೇಟಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ 5-6 ಹೆಸರುಗಳ ಪಟ್ಟಿಯಲ್ಲಿ ಜ್ಯೇಷ್ಥತೆ ಆಧಾರದ ಮೇಲೆ ಹಿರಿಯ ಐಎಎಸ್(IAS) ಅಧಿಕಾರಿ ರಜನೀಶ್‌ ಗೋಯೆಲ್ ಅವರನ್ನು ಸಿಎಸ್‌(Chief Secretary) ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

Exit mobile version