Revenue Facts

ರಾಜ್ಯ ಬಜೆಟ್: ಯಾವೆಲ್ಲಾ ಯೋಜನೆಗಳಿಗೆ ಸಿಗುತ್ತಿದೆ ಅನುದಾನ..?

ಬೆಂಗಳೂರು, ಫೆ. 10 : ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ. ಫೆಬ್ರವರಿ 24ರವರೆಗೂ ಬಜೆಟ್ ಅಧಿವೇಶನ ನಡೆಯಲಿದ್ದು, ಫೆ.17 ರಂದು ಮುಖ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರಾಜ್ಯ ಸಚಿವ ಸಂಪುಟ ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆಯನ್ನು ಸಹ ನೀಡಿದೆ. ಹಾಗಾದರೆ ಬನ್ನಿ ರಾಜ್ಯ ಸಚಿವ ಸಂಪುಟ ಯಾವೆಲ್ಲಾ ಯೋಜನೆಗಳಿಗೆ ಒಪ್ಪಿಗೆ ನಿಡಿದೆ ಎಂಬ ಬಗ್ಗೆ ತಿಳೀಯೋಣ.

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ ಕೃಷಿ ಸಂಶೋಧನಾ ಕಾಲೇಜು ನಿರ್ಮಾಣ ಯೋಜನೆಗೆ ರಾಜ್ಯ ಸಂಪುಟ ಒಪ್ಪಿಗೆ ನೀಡಿದೆ. ಶಿವಮೊಗ್ಗದ ಸೊರಬದಲ್ಲಿ ವಿಸ್ತಾರಸೌಧ ನಿರ್ಮಾಣ ಮಾಡುವುದಕ್ಕಾಗಿ ಸುಮಾರು 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸಂಪುಟ ಒಪ್ಪಿಕೊಂಡಿದೆ. ಉತ್ತರಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಬುಡಕಟ್ಟು ಜನಾಂಗಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಒಪ್ಪಿದ್ದು, ಮಡಿಕೇರಿಯಲ್ಲಿ ಎಸ್ಪಿ ಕಚೇರಿಗೆ 12 ಕೋಟಿ ರೂ ಅನುದಾನ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಶಿಗ್ಗಾಂವಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಮತ್ತಿತರ ಯೋಜನೆಗಳಿಗೆ 13 ಸಾವಿರ ಕೋಟಿ ರೂ ಸಾಲದ ವ್ಯವಸ್ಥೆ ಇತ್ಯಾದಿಗೆ ಸಂಪುಟ ಸಭೆಯಲ್ಲಿ ಸಮ್ಮತಿ ಕೊಡಲಾಗಿದೆ.

ನವೀಕರಿಸಬಹುದಾದ ಇಂಧನ ನೀತಿಯ ತಿದ್ದುಪಡಿ ಆಗಲಿದೆ. ದಾವಣಗೆರೆಯ ಹೊನ್ನಾಳಿಯಲ್ಲಿರುವ 200 ಬೆಡ್ಗಳ ಸರ್ಕಾರಿ ಆಸ್ಪತ್ರೆಯನ್ನು 300 ಬೆಡ್ಗಳ ಮೇಲ್ದರ್ಜೆಗೆ ಅನುದಾನ ನೀಡಲು ಒಪ್ಪಿದೆ. ಚಿಕ್ಕಬಳ್ಳಾಪುರ, ನೆಲಮಂಗಲ ರಸ್ತೆ ಅಭಿವೃದ್ಧಿ ಯೋಜನೆ ಮೊತ್ತ 8.40 ಕೋಟಿ ಯಿಂದ 10.13 ಕೋಟಿ ರೂ ಪರಿಷ್ಕರಣೆ ಮಾಡಲು ಒಪ್ಪಿಕೊಂಡಿದೆ. ಚಾಮರಾಜನಗರದ 166 ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗೆ 26 ಕೋಟಿ ರೂ ಅನುದಾನ ಬಿಡುಗಡೆಗೆ ಅಸ್ತು ಎಂದಿದೆ. ಇದರಲ್ಲಿ 14.5 ಕೋಟಿ ರೂ ಅನುದಾನ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಲಿದೆ. ಶಿಗ್ಗಾಂವ್ನ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಕ್ಕೆ 73.75 ಕೋಟಿ ರೂ ಅನುದಾನ ಬಿಡುಗಡೆ ಮಾಡಲಿದೆ.

ಹಾವೇರಿಯ ನೆಲನೊಳು ಗ್ರಾಮದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರದ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ 37.55ಕೋಟಿ ರೂ ಅನುದಾನ ಬಿಡುಗಡೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಲಬುರ್ಗಿಯಲ್ಲಿ ಪಿಪಿಪಿ ವ್ಯವಸ್ಥೆಯಲ್ಲಿ ಬಸ್ ನಿಲ್ದಾಣ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆಗೆ ಅಸ್ತು ಎಂದಿದೆ. ಓಟ್ನಲ್ಲಿ ಈ ಬಾರಿಯ ಬಜೆಟ್ ಬಿಜೆಪಿ ಸರ್ಕಾರಕ್ಕೆ ಕೊನೆಯದಾಗುತ್ತೋ ಇಲ್ಲ ಮತ್ತೆ ಮುಂದುವರೆಯುತ್ತೋ ಎಂಬ ಟೆನ್ಷನ್ ಇದ್ದು, ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ.

Exit mobile version