Revenue Facts

ಬೆಸ್ಕಾಂ ಅಧಿಕಾರಿಗಳಿಗೆ ತಾತ್ಕಾಲಿಕ ವಿದ್ಯುತ್ ಮೀಟರ್ ಅಳವಡಿಕೆಗೆ ಕೊಡಬೇಕಂತೆ ಸಂಥಿಂಗ್.!?

ವಾಸಕ್ಕಾಗಿ ಅಥವಾ ವಾಣಿಜ್ಯಕ್ಕಾಗಿ ಬಳಸುವ ಉದ್ದೇಶದಿಂದ ನೂತನ ಕಟ್ಟಡ ಕಾಮಗಾರಿ ಮಾಡುವ ವೇಳೆ ಹತ್ತು ಹಲವು ವಿಚಾರಗಳು ಪ್ರಮುಖವಾಗುತ್ತವೆ, ಅದ್ರಲ್ಲಿ ಬಳಹ ಮುಖ್ಯವಾದದ್ದು ಹೊಸ ಕಟ್ಟಡ ಕಾಮಗಾರಿಗೆ ಬೇಕಾಗಿರುವ ವಿದ್ಯುತ್ ಪೂರೈಕೆಯಾಗಿದೆ. ನೀವು ಎಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಿರೋ ಆಪ್ರದೇಶ ಒಳಪಡುವ ವಿದ್ಯುತ್ ಪೂರೈಕೆ ಕಚೇರಿಗೆ ತೆರಳಿ ಹೊಸದಾಗಿ ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಅನುಮತಿ ಹಾಗೂ ಹೊಸ ವಿದ್ಯುತ್ ಮಾನಗಳಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಅದೇರೀತಿಯಲ್ಲಿ ಬೆಂಗಳೂರುನಗರ ಪ್ರದೇಶದಲ್ಲಿ ನೀವು ಮನೆಯ ಅಥವಾ ಯಾವುದೇ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದರೆ, ಅದಕ್ಕೆ ಬೇಕಾಗು ವಿದ್ಯುತ್ ಅನ್ನು ಪಡೆಯಲು ಆದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಬೆಸ್ಕಾಂ ಕಚೇರಿಗಳಿಗಾದರೂ ಭೇಟಿ ಕೊಡಬೇಕಾಗುತ್ತದೆ. ಅಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ ಅಂತೆಯೇ ನೀವು ಕಾನೂನಾತ್ಮಕವಾಗಿ ಸಲ್ಲಿಸ ಬೇಕಾಗಿರುವ ದಾಖಲೆಗಳು ಸಲ್ಲಿಸಿ ವಿದ್ಯುತ್ ಬಳಕೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ.

ತಾತ್ಕಾಲಿಕ ಮೀಟರ್ ಅವಳಡಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು

ಬಹಳ ಮುಖ್ಯವಾಗಿ ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಮೀಟರ್ ಅಳವಡಿಕೆ ಮುಂದಾದಗ ಪಾಲಿಸಬೇಕಾದ ಪ್ರಮುಖ ಅಂಶಗಳೆಂದರೆ

* ನೀವು ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರದೇಶದ ಬೆಸ್ಕಾಂ ಉಪ ಕಚೇರಿಗಳಿಗೆ ಭೇಟಿ ನೀಡಬೇಕು

* ಸ್ಥಳದ ಬಗ್ಗೆ ನಿಮ್ಮ ಬಳಿಯಿರುವ ದಾಖಲೆಗಳು, ಸೇಲ್ ಡೀಡ್ ಇತ್ಯಾದಿ

* ನಿರ್ಮಾಣವಾಗುತ್ತಿರುವ ಕಟ್ಟಡದ ಮಾಲೀಕರು ವೈಯಕ್ತಿಕ ಮಾಹಿತಿ ಉದಾ: ಫೋಟೋ, ಆಧಾರ್ ಇತ್ಯದ ಗುರುತಿನ ದಾಖಲೆಗಳು

* ನೀವು ಎಷ್ಟು ಪ್ರಮಾಣದ ವಿದ್ಯುತ್ ಪೂರೈಕೆಗೆ ಬಯಸಿದ್ದಿರಾ,ಅದಕ್ಕೆ ತಕ್ಕಂತೆ ಪೂರ್ವ ಪಾವತಿ ಮಾಡಬೇಕು

* ಮೀಟರ್ ಸೆಕ್ಯೂರಿಟಿ ಡಿಪಾಸಿಟ್ (ಎಂಎಸ್ ಡಿ)
ಮುಂಗಡಹಣ ಕಟ್ಟಬೇಕು

* ನೀವು ಯಾವ ಪ್ರಮಾಣದಲ್ಲಿ ಒನ್ ಪೇಸ್, ಅಥವಾ ತ್ರೀ ಪೇಸ್, ಕಿಲೋವ್ಯಾಟ್ ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು

* ಹಾಗೇಯೇ ತಿಂಗಳಿಗೊಮ್ಮೆ ನೀವು ಪಡೆದಿರುವ ತಾತ್ಕಾಲಿಕ ಪರವಾನಗಿ ನವೀಕರಣದ ಬಗ್ಗೆ ಸಹ ಮಾಹಿತಿ ಪಡೆಯಬೇಕು

ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಅಧಿಕಾರಿಗಳಿಗೆ ಕೂಡಲೇ ಬೇಕಂತೆ ಸಂಥಿಂಗ್.!

ನಾವು ಈ ಮೊದಲೇ ಹೇಳಿದ ಹಾಗೇ ಕಾನೂನಾತ್ಮಕವಾಗಿ ಸಾಮನ್ಯ ಜನರು ತಮಗೆ ಬೇಕಾಗಿರುವ ಸೌಕರ್ಯಗಳನ್ನು ಯಾವುದೇ ಕಚೇರಿ ಅಥವಾ ಮತ್ಯಾವುದೇ ಸರ್ಕಾರಿ ಕೆಸಲದ ಅನುಕೂಲಗಳನ್ನು ಪಡೆಯಬಹುದಾಗಿದೆ. ಆದ್ರೆ ಸಾರ್ವಜನಿಕರು ತಮ್ಮ ದಿನ ನಿತ್ಯದ ಗೊಜಲ ಗೊಂದಲಗಳು ಅಥವಾ ಸಮಯದ ಅಭಾವವನ್ನು, ಅವರ ತುರ್ತುಪರಿಸ್ಥಿತಿಯನ್ನು ಕೆಲ ಅಧಿಕಾರಿಗಳು, ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಬಹುಶಃ ತಪ್ಪಾಗಲಾರದು.

ಬೆಂಗಳೂರು ಹೊರವಲಯದ ಕೆಂಪೇಗೌಡನಗರ ನಿವಾಸಿಯೊಬ್ಬರು ಮನೆ ಕಟ್ಟುತ್ತಿದ್ದು, ಈ ತಾತ್ಕಾಲಿಕ ವಿದ್ಯುತ್ ಪೂರೈಕೆ, ವಿಚಾರದಲ್ಲಿ ಅಧಿಕಾರಿಗಳ ಹೆಸರು ಹೇಳಲು ಇಚ್ಚಿಸದೆ ತಮ್ಮ ಅನುಭವದ ಮಾತುಗಳನ್ನು ತಿಳಿಸಿದ್ದಾರೆ, ಹಾಗೇ ಬೆಸ್ಕಾಂ ಉಪಕಚೇರಿಗಳಿಗೆ ಅಲೆದಿದ್ದನ್ನು ನೆನೆಪು ಮಾಡ್ಕೊಳ್ತಾರೆ. ಅಲ್ದೆ ಅವರು ಬೆಸ್ಕಾಂ ನಿಂದ ತಾತ್ಕಾಲಿಕ ಮೀಟರ್ ಅಳವಡಿಕೆಗೆ ಸಂಥಿಂಗ್ ಕೊಡಲೇಬೇಕು ಸಾರ್, ಇಲ್ಲವಾದ್ರೆ ಕೆಲಸ ಆಗೋಲ್ಲ, ನಾನು ಸಂಥಿಂಗ್ ಕೊಟ್ಟಿಲ್ಲ ಅಂದರೆ ಏನೂ ಕೆಲಸ ನಡೆಯೋದಿಲ್ಲ ಸಾರ್ ಅಂತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ ನನಗೆ ಈ ಸಂಥಿಂಗ್ ವಿಚಾರ ಗೊತ್ತಿರಲಿಲ್ಲ ಅದಕ್ಕೆ ನನಗೆ ಸರಿಯಾದ ಕಾಲಕ್ಕೆ ವಿದ್ಯುತ್ ಪೂರೈಕೆ ಆಗಿಲ್ಲ, ವಿಳಂಬವಾಗಿ ಆಯ್ತು. ಅದ್ರಿಂದ ನನ್ನ ಮನೆ ನಿರ್ಮಾಣದ ಕೆಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಅಷ್ಟು ಜನರ ಒಂದು ದಿನದ ಕೆಲಸ ವ್ಯರ್ಥ ಆಯ್ತು ನನಗೆ ಕೂಲಿ ಹಣ ಹೊರೆ ಆಯ್ತು ಅಂತಾರೆ ಮನೆ ಮಾಲೀಕರು…

ಇದು ಅಷ್ಟೋ ಇಷ್ಟೋ ಓದಿಕೊಂಡಿದ್ದು, ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಬೆಂಗಳೂರಿನ ಕೆಂಪೇಗೌಡನಗರದ ನಿವಾಸಿಯೊಬ್ಬರ ಕಥೆ ಆದ್ರೆ, ಇನ್ನು ಓದಲು ಬರೆಯಲು ಬರದವರು ಬೆಂಗಳೂರಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾದ್ರೆ ಅವರ ಕಥೆ ಏನ್ ಆಗಿರುತ್ತದೆ ಅನ್ನೋದು ನಿಮ್ಮ ಯೋಚನೆಗೆ ಬಿಟ್ಟಿದ್ದು ಓದುಗರೆ..

ಹಾಗಂತ ಬೆಸ್ಕಾಂ ಅಧಿಕಾರಿಗಳು ಎಲ್ಲರೂ ಭ್ರಷ್ಟಾಚಾರ ಮಾಡುತ್ತಾರೆ, ಸಂಥಿಂಗ್ ಹೆಸರಲ್ಲಿ ಹಣ ಲೂಟಿ ಮಾಡುತ್ತಾರೆ ಅಂತಲ್ಲ, ಕೆಲವು ಅಧಿಕಾರಿಗಳು ಸಂಥಿಂಗ್ ಹೆಸರಲ್ಲಿ ಭ್ರಷ್ಟಾಚಾರ ಎಸಗಿ ಸಾಮಾನ್ಯ ಜನರ ಬಳಿ ಹಣ ಪೀಕುತ್ತಾರೆ ಅನ್ನೋದು ಎಷ್ಟು ಸತ್ಯವೋ ಉತ್ತಮ ನಿಷ್ಠಾವಂತ ಅಧಿಕಾರಿಗಳು ಎಲ್ಲಾ ಇಲಾಖೆಗಳಲ್ಲೂ‌ ಇರುತ್ತಾರೆ. ಹಾಗೇ ಅವರು ಕಾರ್ಯ ಕೂಡ ಇರುತ್ತದೆ. ಆದ್ದರಿಂದ ಯಾರೂ ಭ್ರಷ್ಟಾಚಾರ ಮಾಡಿ‌‌ ಅವರ ವೃತ್ತಿ ಧರ್ಮದ ಜೊತೆಗೆ ಜನರಿಗೆ ಅನ್ಯಾಯ ಮಾಡುತ್ತಾರೋ ಅಂತಹವರು ಇನ್ನಾದ್ರೂ ಬದಲಾಗಲಿ ಅನ್ನೋದು ನಮ್ಮ ಆಶಯ…

ಲಕ್ಷ್ಮೀಪತಿ, ಹಿರಿಯ ವರದಿಗಾರರು

Exit mobile version