Revenue Facts

ಮದ್ಯ ಪ್ರಿಯರಿಗೆ ಶಾಕ್ : ಬಿಯರ್ ದರ ಏರಿಕೆ ಅಬಕಾರಿ ಇಲಾಖೆ ಸಿದ್ದತೆ!

ಮದ್ಯ ಪ್ರಿಯರಿಗೆ ಶಾಕ್ : ಬಿಯರ್ ದರ ಏರಿಕೆ ಅಬಕಾರಿ ಇಲಾಖೆ ಸಿದ್ದತೆ!

#Shock for alcohol lovers# Excise department #ready for #beer price hike

ಬೆಂಗಳೂರು;ರಾಜ್ಯದಲ್ಲಿ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ(Department of Excise) ಚಿಂತನೆ ನಡೆಸುತ್ತಿದೆ. ಈ ಮೂಲಕ ಮದ್ಯ(Liquor) ಪ್ರಿಯರಿಗೆ ಸರ್ಕಾರ ಶಾಕಿಂಗ್ ಸುದ್ದಿಯನ್ನು ನೀಡಿದೆ, ಪ್ರತಿ 650 ಮಿ.ಲೀ. ಬಿಯ‌ರ್ ದರ ₹8-10ಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಕರ್ನಾಟಕ ಅಬಕಾರಿ ನಿಯಮಗಳು, 1968ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ(Draft Notification) ಹೆಚ್ಚಳವನ್ನು ಸರ್ಕಾರ ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಅಬಕಾರಿ ಸುಂಕ(Excise Duty) ಹೆಚ್ಚಾಗುವ ಸಂಭವವಿದ್ದು, ಹೀಗಾಗಿ ಮುಂದಿನ ತಿಂಗಳು ದರ ಏರಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ 5 ಗ್ಯಾರೆಂಟಿಗಳನ್ನು ಸರಿದೂಗಿಸಲು ಬೆಲೆ ಹೆಚ್ಚಿಸಲಾಗುತ್ತಿದೆ ಎಂಬ ಆಪಾದನೆಗಳೂ ಕೇಳಿ ಬರುತ್ತಿವೆ.ಅಬಕಾರಿ ತೆರಿಗೆಯನ್ನು ಶೇ. 10 ರಷ್ಟು ಹೆಚ್ಚಳ ಮಾಡಲು ಇಲಾಖೆ ನಿರ್ಧರಿಸಿದೆ. ಅಬಕಾರಿ ಇಲಾಖೆಯು 650 ಮೀ.ಲಿ ಅಳತೆಯ ಪ್ರತಿ ಬಾಟಲಿ ಬಿಯರ್ ನ ದರದಲ್ಲಿ ರೂ. 8 ರಿಂದ 10 ರವರೆಗೆ ಹೆಚ್ಚಳವಾಗಲಿದೆ.ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಾಟಲಿಯ ಬಿಯರ್‌ನ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚುವರಿಯಾಗಿ ಶೇ 10 ಹೆಚ್ಚಳ ಮಾಡಲಾಗುತ್ತದೆ. ಅಂದರೆ ಈಗ ಇರುವ ಅಬಕಾರಿ ಸುಂಕ ಶೇ 185 ರಿಂದ ಶೇ 195ಕ್ಕೆ ಏರಿಕೆಯಾಗಲಿದೆ.ಹೆಚ್ಚಳವನ್ನು ಅನುಮತಿಸುವ ಹೊಸ ನಿಯಮ ಇದೇ ತಿಂಗಳು ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಯರ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ಕಾಣುತ್ತಿರುವ ಕಾರಣ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸಿತು.

Exit mobile version