Revenue Facts

ದೇಶದ ಏಳು ನಗರಗಳಲ್ಲಿ ವಸತಿ ಮಾರಾಟ ಶೇ 11ರಷ್ಟು ಏರಿಕೆ ಐಸಿಆರ್‌ಎ ವರದಿ

ದೇಶದ ಏಳು ನಗರಗಳಲ್ಲಿ ವಸತಿ ಮಾರಾಟ ಶೇ 11ರಷ್ಟು ಏರಿಕೆ ಐಸಿಆರ್‌ಎ ವರದಿ

ಬೆಂಗಳೂರು, ಮಾ. 09 : ಭಾರತ ದೇಶ ದುಪ್ಪಟ್ಟಾಗಿ ಬೆಳೆಯುತ್ತಿದ್ದು, ರಿಯಲ್‌ ಎಸ್ಟೇಟ್‌ ಕೂಡ ಬೆಳೆಯುತ್ತಿದೆ. ಭಾರತದ ಹಲವು ನಗರಗಳಲ್ಲಿ ಈಗ ವಸತಿ ಮಾರಾಟವೂ ಹೆಚ್ಚಾಗುತ್ತಿದೆ. ರೇಟಿಂಗ್ ಏಜೆನ್ಸಿಯಾದ ಐಸಿಆರ್‌ಎ ಪ್ರಕಾರ, ದೇಶದ ಏಳು ನಗರಗಳಲ್ಲಿ ವಸತಿ ಮಾರಾಟವು ಶೇ. 11ರಷ್ಟು ಏರಿಕೆಯಾಗಿದೆ. ಪ್ರಸ್ತುತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಹೆಚ್ಚಿನ ಬೆಳವಣಿಗೆಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ 149 ಮಿಲಿಯನ್ ಚದರ ಅಡಿ ಮಾರಾಟವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ದಾಖಲೆಯ ಮಟ್ಟದಲ್ಲಿ ಅತ್ಯಧಿಕ ಮಾರಾಟವಾಗಿರುವುದು ಇದೇ ಮೊದಲು ಎಂದು ಐಸಿಆರ್‌ಎ ಮಾಹಿತಿ ನೀಡಿದೆ.

ವಸತಿ ರಿಯಲ್ ಎಸ್ಟೇಟ್ ಕ್ಷೇತ್ರವು 2023 ರಲ್ಲಿ ಬೆಳೆದಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ಮಾರಾಟವಾದ ಪ್ರದೇಶವು ಹಿಂದಿನ ವರ್ಷಕ್ಕಿಂತಲೂ ಅಧಿಕವಾಗಿದೆ. ಸಾಂಕ್ರಾಮಿಕ ರೋಗ ಕೋವಿಡ್‌ ನಂತರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಸೇರಿದಂತೆ ಏಳು ನಗರಗಳಲ್ಲಿ ವಸತಿ ಮಾರಾಟ ಹೆಚ್ಚಾಗಿದೆ. ಈ ಮೂಲಕ ಐಷಾರಾಮಿ ಹಾಗೂ ಮಧ್ಯಮ ವರ್ಗಗಳಲ್ಲಿ ಕ್ರಮೇಣ ಏರಿಕೆ ಕಂಡಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪುಣೆಯಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಐಸಿಆರ್‌ಎ ಗಮನಿಸಿದೆ.

ಐಸಿಆರ್‌ಎ ನ ಕಾರ್ಪೊರೇಟ್ ರೇಟಿಂಗ್‌ಗಳ ಉಪಾಧ್ಯಕ್ಷೆ ಮತ್ತು ಸಹ-ಗುಂಪು ಮುಖ್ಯಸ್ಥರಾಗಿರುವ ಅನುಪಮಾ ರೆಡ್ಡಿ ಮಾತನಾಡಿ, ವಸತಿ ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟವಾದ ಪ್ರದೇಶದ ಮೌಲ್ಯ ಈ ವರ್ಷ ಶೇ. 8-12 ರಷ್ಟು ಏರಿಕೆಯಾಗಿದ್ದು, 2024ರಲ್ಲಿ 14-16 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದರು. ಒಟ್ಟು ಪ್ರಮುಖ 12 ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮಾದರಿಯನ್ನು ಆಧರಿಸಿ ಮಾಹಿತಿ ಕಲೆ ಹಾಕಲಾಗಿದೆ. ಇನ್ನು ಇದು ಹೀಗೆ ಮುಂದುವರಿಯುವ ನಿರೀಕ್ಷೆಯೂ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ ಹೆಚ್ಚಳದ ಹೊರತಾಗಿಯೂ, ಗೃಹ ಸಾಲದ ಬಡ್ಡಿ ದರಗಳು ಗರಿಷ್ಠ ಕೋವಿಡ್ ಪೂರ್ವ ಬಡ್ಡಿದರಗಳಿಗಿಂತ ಇನ್ನೂ ಕಡಿಮೆಯಾಗಿದೆ. ಅಲ್ಲದೇ, ಕೈಗೆಟುಕುವಂತಿದ್ದು, ಆರೋಗ್ಯಕರವಾಗಿ ಮುಂದುವರಿಯುತ್ತದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

Exit mobile version