sankranthi : ಬೆಂಗಳೂರು, ಜ. 14 : ಸಂಕ್ರಾಂತಿ ಹಬ್ಬದ ವಿಶೇಷತೆಗಳು, ವಿವಿಧ ರಾಜ್ಯಗಳಲ್ಲಿ ಹಬ್ಬ ಆಚರಣೆಯ ಪದ್ಧತಿಗಳು ನಾವು ಈ ಹಿಂದೆಯೇ ವಿವರಿಸಿದ್ದೇವೆ. ದಕ್ಷಿಣ ಭಾರತದಲ್ಲಿ ಅತ್ಯಂತ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುವ ಮೊದಲ ಹಿಂದೂ ಹಬ್ಬವಾಗಿದೆ. ಸಾಮಾನ್ಯವಾಗಿ ಜನವರಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಭಾರತದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಆದರೆ ವಿವಿಧ ರಾಜ್ಯಗಳು ವಿವಿಧ ಹೆಸರುಗಳು, ಸಂಪ್ರದಾಯಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಸೂರ್ಯನ ಉತ್ತರದ ಪ್ರಯಾಣದ ಕಾರಣದಿಂದಾಗಿ ದೀರ್ಘ ದಿನಗಳ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯನ್ನು ಉತ್ತರಾಯಣ ಎಂದೂ ಕರೆಯುತ್ತಾರೆ.
ಈ ಆರು ತಿಂಗಳ ಅವಧಿಯನ್ನು ಶುಭ ಎಂದೂ ಕೂಡ ಕರೆಯಲಾಗಿದೆ. ಸುಗ್ಗಿಯ ಹಬ್ಬವು ಧಾರ್ಮಿಕ ಆಚರಣೆಯಾಗಿದೆ. ಹಿಂದೂ ಸಮುದಾಯವು ಸೂರ್ಯ ದೇವರಿಗೆ ಈ ಹಬ್ಬವನ್ನು ಸಮರ್ಪಿತಸುತ್ತಾರೆ. ಮಕರ ಸಂಕ್ರಾಂತಿಯು ಸೂರ್ಯನು ಮಕರ ರಾಶಿ ಹೋಗುವುದರಿಂದ ಮಕರ ಸಂಕ್ರಮಣ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇನ್ನು ಇಷ್ಟು ವರ್ಷಗಳ ಕಾಲ ಸಂಕ್ರಾಂತಿ ಹಬ್ಬವೂ ಪ್ರತೀ ವರ್ಷ ಜನವರಿ 14ನೇ ತಾರೀಕಿನಂದು ಬರುತ್ತಿತ್ತು. ಆದರೆ ಇತ್ತೀಚೆಗೆ ಇರು ಏರುಪೇರಾಗುತ್ತಿದ್ದು, ಜನವರಿ 15 ಸಂಕ್ರಮಣ ಹಬ್ಬವನ್ನು ಆಚರಿಸುವಂತಾಗಿದೆ.
ದಿನ ಬದಲಾವಣೆ ಬಗ್ಗೆ ಸಾಕಷ್ಟು ಜನರಲ್ಲಿ ಅನುಮಾನಗಳು ಹುಟ್ಟಿಕೊಂಡಿವೆ. ಕೆಲವರಂತೂ ಕ್ಯಾಲೆಂಡರ್ ಗಳನ್ನೂ ದೂರುವುದುಂಟು. ಆದರೆ ಹೀಗೆ ಹಬ್ಬದ ಆಚರಣೆ ಬದಲಾವಣೆಗೆ ಪ್ರಮುಖ ಕಾರಣವಿದೆ. ಅದೇನು ಎಂದು ತಿಳಿಯಲು ಮುಂದೆ ಓದಿ..
ಇಸ್ವಿ 2007ಕ್ಕೂ ಮುಂಚೆ ನಾವೆಲ್ಲಾ ಜನವರಿ 14ನೇ ತಾರೀಕು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೆವು. ಇಸ್ವಿ 2008 ರಿಂದ ಜನವರಿ 15ನೇ ರಂದು ಒಮ್ಮೊಮ್ಮೆ 14 ರಂದು ಸಂಕ್ರಾಂತಿ ಹಬ್ಬ ಆಚರಣೆ ಮಾಡಲು ಶುರು ಮಾಡಿದ್ದೇವೆ. ಇದಕ್ಕೆ ಕಾರಣವೇನು ಎಂದು ಗೊತ್ತಾ? ಏಕೆಂದರೆ, ಸಾಮಾನ್ಯವಾಗಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸುವುದು ವಾಡಿಕೆ. ಇಂದಿನಿಂದ ಮಿಥುನ ರಾಶಿಯ ಪ್ರವೇಶದವರೆಗೆ ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಮತ್ತೆ ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸುಲು ತೆಗೆದು ಕೊಳ್ಳುವಕಾಲ 20 ನಿಮಿಷವಾಗುತ್ತದೆ.
ಇದರ ಆಧಾರದ ಮೇಲೆ, ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಗಂಟೆ ಮತ್ತು ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಬದಲಾಗುತ್ತದೆ. ಹಾಗಾಗಿ ಈಗ ಎಲ್ಲರೂ ಜನವರಿ 15 ರಂದು ಹಬ್ಬವನ್ನು ಆಚರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಂದರೆ 2080ರ ನಂತರ ಸಂಕ್ರಾಂತಿ ಹಬ್ಬವನ್ನು ನಾವೆಲ್ಲಾ ಜನವರಿ 16 ರಂದು ಆಚರಿಸುತ್ತೇವೆ. 1935 ರಿಂದ 2007 ರವರೆಗೆ ಹಬ್ಬವು ಜನವರಿ 14, ಇತ್ತು. 2008 ರಿಂದ 2080 ರವರೆಗೆ ಜನವರಿ 15ರಂದು ಸಂಕ್ರಾಂತಿ ಹಬ್ಬ ನಡೆಯುತ್ತೆ. ಪ್ರತಿ 72 ವರ್ಷಗಳಿಗೊಮ್ಮೆ ಹಬ್ಬವು ಒಂದು ದಿನದ ನಂತರ ಬದಲಾಗುತ್ತದೆ. 1935 ರಿಂದ 2007 ಜನವರಿ 14, ಜನವರಿ 15, 2008 ರಿಂದ 2080.
