ಬಿಗ್ ಬಾಸ್ ಮನೆಯಲ್ಲಿ 11ನೇ ವಾರ ಕಳೀತಾ ಬಂತು ಒಬ್ಬರ ಮೇಲೆ ಒಬ್ಬರ ದೂಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ತುಕಾಲಿ ಸ್ಟಾರ್ ಸಂತೋಷ್ ಹಾಗು ಮೈಕಲ್ ಇಬ್ಬರು ನನ್ನನೊಡನೆ ಜಗಳವಾಡಿದರು ಎಂದು ಬಾತ್ ರೂಮ್ ಒಳಗೆ ಹೋಗಿ ಸಂಗೀತ ಗಳ ಗಳನೆ ಅತ್ತರು. ಸಂಗೀತಾ ಅಳುವುದನ್ನು ಕಂಡು ಪ್ರತಾಪ್ ಸಮಾಧಾನ ಮಾಡಿದರು.
ನಾನು ಸೋತೆ ಎಂದು ನನಗೆ ಬೇಸರ ಇಲ್ಲ…!
ಈ ಆಟವನ್ನು ನಾನು ಸೋತೆ ಎಂದು ನನಗೆ ಬೇಸರ ಇಲ್ಲ. ನಾನು ಏನೂ ಮಾಡದೆ ಇದ್ದರೂ ಸಹ ಈ ಮನೆಯವರೆಲ್ಲ ನನ್ನನ್ನು ದೂಷಿಸುತ್ತಿದ್ದಾರೆ ಎಂದು ಸಂಗೀತ ಬೇಸರ ಮಾಡಿಕೊಂಡರು. ನಾನು ಈ ಮನೆ ಮಂದಿಯರ ಕಾಲು ಹಿಡಿದುಕೊಂಡು ಮಾತಾಡಿ ಮಾತಾಡಿ ಅಂತ ಬೇಡಿಕೊಳ್ಳೂಕೆ ಆಗುತ್ತಾ ಎಂದು ಸಂಗೀತಾ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಾನ್ ಏನ್ ಮಾಡಲಿ ನನಗೆ ಇತರ ಇಲ್ಲಿ ಇರೋಕೆ ಆಗ್ತಾ ಇಲ್ಲ ಎಂದು ಬೇಸರದಲ್ಲಿ ಅಳುತ್ತಾ ಕುಳಿತ್ತಿದ್ದರು.
ನಂಗೆ ಇಷ್ಟ ಇಲ್ಲದೆ ಇರೋದು ನನ್ನ ತಪ್ಪಾ?
ನನಗೆ ಜಗಳ ಆಡೋಕೆ ಇಂಟರೆಸ್ಟ್ ಇಲ್ಲ, ನನ್ನ ಜೊತೆ ಸುಮ್ಮನೆ ಕಾಲು ಕೆರೆದುಕೊಂಡು ಜಗಳ ಆಡ್ತಾರೆ. ನಾನು ಯಾರಿಗೆ ಏನ್ ಮಾಡಿದ್ದೀನಿ? ಯಾರ ಮೇಲೆ ಆದ್ರು ನಾನು ಕಿರುಚಾಡಿದಿನ..? ಯಾಕೆ ಈ ಮನೆಯವರು ಎಲ್ಲ ನನ್ನ ಜೊತೆಯಲ್ಲಿ ಜಗಳವಾಡೋಕೆ ಬರ್ತಾರೆ. ನಾನು ಇಲ್ಲಿ ಯಾರಿಗು ಬಕೆಟ್ ಹಿಡಿಯೋಕೆ ಬಂದಿಲ್ಲ, ನಾನು ಬಕೆಟ್ ಹಿಡೀತಾ ಇಲ್ಲ ಅಂತ ಅವರೆಲ್ಲ ನನ್ನ ಜೊತೆ ಜಗಳ ಮಾಡೋಕೆ ಬರ್ತಿದ್ದಾರೆ. ನಾನು ಅಂತು ಯಾವುದೇ ಕಾರಣಕ್ಕು ತುಕಾಲಿ ಸಂತೋಷ್ ಅವರಿಗೆ ಶೇಕ್ ಹ್ಯಾಂಡ್ ಮಾಡಲ್ಲ ,ಅದು ನಂಗೆ ಇಷ್ಟ ಕೂಡ ಇಲ್ಲ. ನಂಗೆ ಇಷ್ಟ ಇಲ್ಲದೆ ಇರೋದು ನನ್ನ ತಪ್ಪಾ? ಸಾಕಷ್ಟು ವಿಷಯಗಳಲ್ಲಿ ನಾನು ಬದಲಾಗುತ್ತಿದ್ದೇನೆ. ನಾನು ಬದಲಾಗುತ್ತಿದ್ದರು ಸಹ ಇವರು ನನ್ನ ಬಿಡುತ್ತಿಲ್ಲ. ಎಲ್ಲರೂ ಕುತ್ಕೊಂಡು ನನ್ನ ಗುರಾಯಿಸ್ತಾರೆ. ಮೆಂಟಲ್ ಟಾರ್ಚರ್ ಅಂದ್ರೆ ಇದು ಎಂದು ಸಂಗೀತಾ ಅವರು ಪ್ರತಾಪ್ ಮುಂದೆ ದುಃಖ ತೋಡಿಕೊಂಡಿದ್ದಾರೆ.
ಸಂಗೀತಾ-ಕಾರ್ತಿಕ್ ವಿಚಾರದಲ್ಲಿ ನಾನು ಹೇಳಿದ್ದು ಸುಳ್ಳಾದ್ರೆ ನೀನು ಹೇಳಿದಂಗೆ ಕೇಳ್ತೀನಿ’ ಎಂದು ವರ್ತೂರು ಸಂತೋಷ್ ಒಪನ್ ಚಾಲೆಂಜ್ ಮಾಡಿದ್ದಾರೆ. ಸಂಗೀತಾ ಅವರ ಆಟದ ಬಗ್ಗೆ ವೀಕ್ಷಕರಿಗೂ ಅಸಮಾಧಾನ ಇದೆ. ಸಂಗೀತಾಗೆ ದುರಹಂಕಾರ ಜಾಸ್ತಿ ಇದೆ. ಸಂಗೀತಾ ಯಾವಾಗಲು ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಾರೆ ಹಾಗು ಯೋಚನೆ ಮಾಡ್ತಾರೆ ಎಂದು ಅಂತ ಎಲ್ಲರಿಗೂ ಅನಿಸಿದೆ ಎಂದು ವರ್ತುರ್ ಸಂತೋಷ್ ಹೇಳಿದ್ದಾರೆ.