Revenue Facts

ಬಡಾವಣೆ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ : ಸಂಘದ ಲೋಪಗಳ ಬಗ್ಗೆ 140ಪುಟಗಳ ವರದಿ ಸಿದ್ಧ

ಬಡಾವಣೆ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ : ಸಂಘದ ಲೋಪಗಳ ಬಗ್ಗೆ 140ಪುಟಗಳ ವರದಿ ಸಿದ್ಧ

ಬೆಂಗಳೂರು, ಮಾ. 17 : ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಡೆಸಿರುವ ವ್ಯವಹಾರದಲ್ಲಿ ಲೋಪಗಳು ಕಂಡು ಬಂದಿದೆ. ಮೈಸೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಲೋಪವಾಗಿದೆ. ಸಹಕಾರ ಸಂಘಗಳ ನಿಬಂಧಕರು ಸುಮಾರು 25 ಲೋಪಗಳನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ವರದಿ ಕೂಡ ಸಿದ್ಧ ಪಡಿಸಲಾಗಿದೆ.

ಈ ಸಂಘದವರು ವಸತಿ ಅಭುವೃದ್ಧಿ ಬಡಾವಣೆಯ ಪ್ರಗತಯನ್ನು ಪರಿಶೀಲನೆ ಮಾಡದೆಯೇ 189 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಎಂ ಆ್ಯಂಡ್‌ ಎಂ ಬೆಂಗಳೂರು ಪ್ರೈವೇಟ್‌ ಲಿಮಿಟೆಡ್ ಜೊತೆಗೆ ಮೂರು ವಸತಿ ಯೋಜನೆಯ ಕುರಿತು ಸಂಘ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ, ಯಅವುದೇ ಪರಿಶೀಲನೆಯನ್ನು ನಡೆಸಿಲ್ಲ. ಅಷ್ಟೇ ಅಲ್ಲದೇ, ಸಂಬಂಧ ಪಟ್ಟ ಪ್ರಾಧಿಕಾರದ ಅನುಮೋದನೆಯನ್ನೂ ಪಡೆಯದೆ ಸಂಘ ತನ್ನ ಚಟುವಟಿಕೆಯನ್ನು ಬೆಂಗಳೂರಿಗೂ ವಿಸ್ತರಣೆ ಮಾಡಿದೆ. ಜೊತೆಗೆ ಡೆವಲಪರ್‌ ಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಯಾವುದೇ ಪಾರದರ್ಶಕತೆಯನ್ನೂ ಕೂಡ ಸಂಘ ಕಾಪಾಡಿಕೊಂಡಿಲ್ಲ.

ಈ ಬಗ್ಗೆ ಕೆಲ ಸದಸ್ಯರು ಅಸಮಾಧಾನಗೊಂಡಿದ್ದು, ದೂರನ್ನು ಸಲ್ಲಿಸಿದ್ದಾರೆ. ದೂರಿನ ಅನ್ವಯ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 64ರ ಅಡಿಯಲ್ಲಿ ವಿಚಾರಣೆಯನ್ನು ನಡೆಸಲಾಗಿದೆ. ಕಳೆದ 14 ತಿಂಗಳ ಕಾಲ ವಿಚಾರಣೆಯನ್ನು ನಡೆಸಿದ್ದು, ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿಯಲ್ಲಿ 25 ಲೋಪಗಳು ಕಂಡು ಬಂದಿದ್ದು, ಒಟ್ಟು 140 ಪುಟಗಳ ವರದಿಯಲ್ಲಿ ಇವೆಲ್ಲಾ ಸಂಗತಿಗಳನ್ನು ತಿಳಿಸಲಾಗಿದೆ.

ಎಂ ಆ್ಯಂಡ್ ಎಂ ಬೆಂಗಳೂರು ಪ್ರೈವೇಟ್ ಲಿಮಿಟೆಡ್ 2012 ರಲ್ಲಿ ಸಂಘ ಮೂರು ಬಡಾವಣೆಗಳನ್ನು ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ ದೊಡ್ಡಬಳ್ಳಾಪುರ ರಸ್ತೆ ಹಾಗೂ ತಿಂಡ್ಲು ಬಳಿ ಬಡಾವಣೆ ಅಭಿವೃದ್ಧಿಗೆ ಮುಂದಾಗಿತ್ತು. ಈ ಬಗ್ಗೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಯಾವುದೇ ಅನುಮೋದನೆಯನ್ನು ಪಡೆದಿಲ್ಲ. ಜೊತೆಗೆ ಒಪ್ಪಂದದ ಪ್ರಕಾರ, ದೊಡ್ಡಬಳ್ಳಾಪುರ ರಸ್ತೆ ಬಡಾವಣೆಯಲ್ಲಿನ ನಿವೇಶನಗಳಿಗೆ ಚದರ ಅಡಿಗೆ ₹675 ಪಡೆಯಬೇಕಿತ್ತು. ಬದಲಿಗೆ ₹954 ಅನ್ನು ಪಡೆಯಲಾಗಿದೆ. ಇನ್ನು ತಿಂಡ್ಲು ಬಳಿಯ ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ ₹617 ಪಡೆಯುವ ಬದಲು ₹882 ಪಡೆಯಲಾಗಿದೆ. ಇದುವರೆಗೂ 2,781 ಸದಸ್ಯರು ಒಟ್ಟು ₹188.65 ಕೋಟಿ ಹಣವನ್ನು ಪಾವತಿ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version