Revenue Facts

RTC-Aadhaar Link: ಪಹಣಿಗೆ ಆಧಾರ್ ಲಿಂಕ್ ಮಾಡದಿದ್ದರೆ ಸಿಗೋದಿಲ್ಲ ಸರ್ಕಾರದ ಸೌಲಭ್ಯ

RTC-Aadhaar Link: ಪಹಣಿಗೆ ಆಧಾರ್ ಲಿಂಕ್ ಮಾಡದಿದ್ದರೆ ಸಿಗೋದಿಲ್ಲ ಸರ್ಕಾರದ ಸೌಲಭ್ಯ

#RTC#Aadhaar #Link Without #linking Aadhaar # Pahani# government facility

ಬೆಂಗಳೂರು;ರಾಜ್ಯದಲ್ಲಿ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸಲು ಪಹಣಿ  ಆಧಾ‌ರ್ ಸೀಡಿಂಗ್ ಮಾಡುವುನ್ನು ಕಡ್ಡಾಯವಾಗಿದೆ.ಆಧಾರ್ ಮತ್ತು ಆರ್‌ಟಿಸಿ(RTC) ಅಥವಾ ಪಹಣಿಯ ಜೋಡಣೆಯ ಮೂಲಕ ಭೂ-ಸಂಬಂಧಿತ ವಂಚನೆಗಳನ್ನು ನಿಗ್ರಹಿಸುವುದು ಸಾಧ್ಯವಾಗಲಿದೆ. ಆರ್‌ಟಿಸಿ ಎಂದರೆ Records Of Rights, Tenency And Crops. ಇದನ್ನೇ ಪಹಣಿ ಎಂದೂ ಕರೆಯುತ್ತಾರೆ. ಇದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಹೊರೆ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಗಳಿರುತ್ತವೆ. ಜಮೀನು ಮಾಲೀಕತ್ವದ ವಿಚಾರದಲ್ಲಿ ಮಾಲೀಕತ್ವವನ್ನು ಖಾತ್ರಿಪಡಿಸುವುದು ಸಾಧ್ಯವಿದೆ.ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ (RTC- Aadhaar) ವಿವರದೊಂದಿಗೆ //landrecords.karnataka.gov.in/ service4 ಇಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸ ಬಹುದಾಗಿದೆ.ಹಲವಾರು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ (Aadhaar Card) ಅನ್ನು ಲಿಂಕ್ ಮಾಡಲಾಗುತ್ತಿದೆ.ಪಹಣಿ ಹಾಗೂ ಆಧಾರ್ ದಾಖಲೆಯೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸುವ ಮೂಲಕವೂ ಲಿಂಕ್ ಮಾಡಬಹುದು.ಸರ್ಕಾರವು ಜಮೀನಿನ ಪಹಣಿ ಯಾರ ಹೆಸರಲ್ಲಿ ಇರುತ್ತದೆಯೋ ಅಂದರೆ ಜಮೀನಿನ ಒಡೆಯನ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ ಎಂದಿದೆ.ಅದೇ ರೀತಿ ರೈತರು ತಮ್ಮ ಪಹಣಿ ಹಾಗೂ ಆಧಾರ್ ದಾಖಲೆಯನ್ನು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.ನಿಮ್ಮ ಆಧಾರ್ ಸಂಖ್ಯೆಯನ್ನು ಪಹಣಿ ಜೊತೆ ಲಿಂಕ್ ಮಾಡುವುದರಿಂದ ನಿಮ್ಮ ಜಮೀನಿನ ತಿದ್ದುಪಡಿ , ನಿಮಗೆ ಕೃಷಿ ಇಲಾಖೆಯಿಂದ ಸಿಕ್ಕಂತಹ ಸೌಲಭ್ಯ, ಪರಿಹಾರ ಮೊತ್ತ, ಅಥವಾ ಪಹಣಿಯಲ್ಲಿ ಯಾವುದೇ ರೀತಿಯ ಬದಲಾವಣೆ ಆದಲ್ಲಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬರಲಿದೆ. ನಿಮ್ಮ ಪಹಣಿ ಆಧಾರ್ ಗೆ ಲಿಂಕ್ ಆಗಿದ್ದರೆ ನಿಮ್ಮ ಪಹಣಿ ಈಗಾಗಲೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ಬರಲಿದೆ.

Exit mobile version