Revenue Facts

GPA ಮಾಡಿಸಿಕೊಟ್ಟ ವ್ಯಕ್ತಿ ಸತ್ತು ಹೋದ್ರೆ ಆ ಜಿಪಿಎಗೆ ಕಾನೂನು ಮಾನ್ಯತೆ ಇರುತ್ತಾ ?

ಬೆಂಗಳೂರು: ಯಾವುದೇ ಅಸ್ತಿ ವಿಚಾರ ಪರಭಾರೆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ತನ್ನ ಅಸ್ತಿಗೆ ಸಂಬಂದಿಸಿದಂತೆ ಭೂ ಪರಿವರ್ತನೆ, ಮಾರಾಟ, ಲೀಸ್ ಗೆ ಕೊಡುವ ಸಂಬಂಧ ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ಹಸ್ತಾಂತರಿಸಿ ಮಾಡಿಕೊಡುವ ಕಾನೂನು ಬದ್ಧ ದಾಖಲೆಗೆ ಜಿಪಿಎ ಎಂದು ಕರೆಯುತ್ತೇವೆ, ಜಿಪಿಎ ಎಂದರೆ ಅಂಗ್ಲ ಭಾಷೆಯಲ್ಲಿ ಜನರಲ್ ಪವರ್ ಅಫ್ ಅಟಾರ್ನಿ. ಕನ್ನಡ ಭಾಷೆಯಲ್ಲಿ ಇದನ್ನು ಮೌಕ್ತರ ನಾಮ ಎಂದು ಕರೆಯುತ್ತೇವೆ.

ಜನರಲ್ ಪವರ್ ಅಫ್ ಅಟಾರ್ನಿಯನ್ನು ಬರೆದುಕೊಡುವರನ್ನು ಪ್ರಿನ್ಸಿಪಾಲ್ ಅಂತ ಕರೆಯುತ್ತೇವೆ. ಬರೆಸಿಕೊಂಡವರನ್ನು ಏಜೆಂಟ್ ಎಂದು ಕರೆಯಲಾಗುತ್ತದೆ. ಬರೆದುಕೊಡುವರು ಏನು ಅಧಿಕಾರ ನೀಡಿರುತ್ತಾರೋ ಬರೆಸಿಕೊಂಡವರು ಅದನ್ನು ಮಾತ್ರ ಚಲಾಯಿಸಬೇಕಾಗುತ್ತದೆ. ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಪಿಎ ಬರೆದುಕೊಟ್ಟ ಪ್ರಿನ್ಸಿಪಾಲ್ ಗೆ ಅಧಿಕಾರ ಇರುತ್ತದೆ.
ಒಂದು ವೇಳೆ ಬರೆಸಿಕೊಂಡವರು ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅಥವಾ ಬರೆಸಿಕೊಂಡವರ ಬಗ್ಗೆ ಅಸಮಾಧಾನ ಎನಿಸಿದರೆ, ಬರೆಸಿಕೊಟ್ಟವರು ಏಕ ಪಕ್ಷೀಯವಾಗಿ ಜಿಪಿಎ ನ್ನು ರದ್ದು ಪಡಿಸಬಹುದು. ಜಿಪಿಎ ರದ್ದು ಪಡಿಸಿದ ನಂತರ ಸಂಬಂಧಪಟ್ಟವರಿಗೆ ( ಬರೆಸಿಕೊಂಡವರಿಗೆ ) ರದ್ದು ಪಡಿಸಿದ ಮಾಹಿತಿಯನ್ನು ತಿಳಿಸಬೇಕು. ನೋಟಿಸ್ ಅಥವಾ ಬಹು ಮುಖ್ಯವಾಗಿ ಪತ್ರಿಕೆ ಪ್ರಕಟಣೆ ಮೂಲಕವೂ ಮಾಹಿತಿ ನೀಡಬಹುದು.
ಪವರ್ ಅಪ್‌ ಅಟಾರ್ನಿಯಲ್ಲಿ ಪಾರ್ಟಿಗಳು ಯಾರಾದರೂ ನಿಧನರಾದರೆ, ಅ ಪವರ್ ಆಫ್ ಅಟಾರ್ನಿ ಸಹ ಸತ್ತು ಹೋಗುತ್ತದೆ. ಅದು ವಂಶಾವಳಿಗೆ ಅನ್ವಯ ಅಗುವುದಿಲ್ಲ.

ಪವರ್ ಅಫ್ ಅಟಾರ್ನಿಗೂ ಸೂಕ್ತ ಮುದ್ರಾಂಕ ಶುಲ್ಕ ಕಡ್ಡಾಯವಾಗಿ ಕಟ್ಟಬೆಕಾಗಿರುತ್ತದೆ. ತದನಂತರ, ನೋಟರಿ, ಅಥವಾ ನೋಂದಣಾಧಿಕಾರಿಗಳ ಸಮಕ್ಷಮ ಜಿಪಿಎ ದೃಢೀಕರಣ, ನೊಂದಣಿ ಅಥವಾ ಅಧಿಕೃತಗೊಳಿಸಬಹುದು.
ಪವರ್ ಆಫ್ ಅಟಾರ್ನಿಯನ್ನು ಬೇರೆ ರಾಜ್ಯದವರೂ ಸಹ ಅಥವಾ ಬೇರೆ ದೇಶದವರೂ ಸಹ ಅವರ ಬೇಕಾದವರಿಗೆ ನೀಡಬಹುದು.
ಭಾರತದಲ್ಲಿ ಭಾರತೀಯ ನೋಂದಣಿ ಕಾಯ್ದೆ ಮತ್ತು ನೋಟರಿ ಕಾಯ್ದೆ ಪ್ರಕಾರ, ಅವುಗಳ ದೃಢೀಕರಣ ಅಥವಾ ನೋಂದಣಿ ಆಗಬೇಕಿರುತ್ತದೆ. ಅದರೆ, ಬೇರೆ ದೇಶಗಳಿಗೆ ಅಯಾ ದೇಶಗಳಿಗೆ ಸಂಬಂಧಿಸಿದಂತೆ ನೋಟರಿ ಪಬ್ಲಿಕ್ ಅಥವಾ ಎಂಬೆಸಿ ಸಮಕ್ಷಮ ಪವರ್ ಅಪ್ ಅಟಾರ್ನಿ ಬರೆದುಕೊಡುವರು ಅಥವಾ ಬರೆಸಿಕೊಂಡವರು ಸಹಿ ಮಾಡಿ ದೃಢೀಕರಿಸಬೇಕು. ತದನಂತರ ಅದು ಭಾರತ ದೆಶಕ್ಕೆ ಬಂದ ನಂತರ, ಬಂದ 90 ದಿನಗಳ ಒಳಗೆ ಜಿಲ್ಲಾ ನೋಂದಣಾಧಿಕಾರಿಗಳ ಸಮಕ್ಷಮ ದೃಢೀಕರಿಸಬೆಕಾಗುತ್ತದೆ.

ಜಿಪಿಎ ಮಾಡಿಸಿಕೊಟ್ಟವರಿಗೆ ಇರುವ ಅಧಿಕಾರ ಮಾಡಿಸಿಕೊಂಡವರಿಗೆ ಇರುವುದಿಲ್ಲ. ಜಿಪಿಎ ಮಾಡಿಸಿಕೊಟ್ಟವರು ನೀಡಿದ ಅಧಿಕಾರವನ್ನು ಜಿಪಿಎ ಮಾಡಿಸಿಕೊಂಡವರು ಷರತ್ತುಗಳಿಗೆ ಅನ್ವಯವಾಗಿ ಚಲಾಯಿಸಬೇಕೇ ವಿನಃ, ಉಲ್ಲಂಘನೆ ಮಾಡುವಂತಿಲ್ಲ. ಜಿಪಿಎ ಬರೆಸಿಕೊಂಡ ವ್ಯಕ್ತಿಗೆ ಯಾವುದೇ ಅಧಿಕಾರ ಇರಲ್ಲ. ಬರೆಸಿಕೊಟ್ಟ ವ್ಯಕ್ತಿಗೆ ಇಷ್ಟವಿಲ್ಲದಿದ್ದ ಪಕ್ಷದಲ್ಲಿ ಮಾಹಿತಿಯನ್ನು ಬರೆಸಿಕೊಟ್ಟವರಿಗೆ ತಿಳಿಸುವ ಮೂಲಕ ಜಿಪಿಎ ಒಡಂಬಡಿಕೆಯನ್ನು ರದ್ದು ಮಾಡಿಸಿಕೊಳ್ಳಬಹುದು.

Exit mobile version