Revenue Facts

ರೆವಿನ್ಯೂ ಕಾನೂನು: ನೋಂದಣಿ ಮಾಡಿರದ ಅಗ್ರಿಮೆಂಟ್ ಗೆ ಕಾನೂನು ಮಾನ್ಯತೆ ಇದೆಯೇ ? ಅಗ್ರಿಮೆಂಟ್ ಮಾಡಿಸುವಾಗ ಈ ಅಂಶಗಳನ್ನು ಯಾವ ಕಾರಣಕ್ಕೂ ಮರೆಯಬೇಡಿ

ಬೆಂಗಳೂರು, ಸೆ. 22: ಯಾವುದೇ ಒಂದು ಆಸ್ತಿ ಖರೀದಿ ಮಾಡುವಾಗ ಕಾನೂನು ಪ್ರಕಾರ ದಾಖಲೆಗಳನ್ನು ಮಾಡಿಸುವುದು ಬಹು ಮುಖ್ಯವಾಗುತ್ತದೆ. ಕೆಲವರು ಅಸ್ತಿಗೆ ಸಂಬಂಧಿಸದಿಂತೆ ಕೇವಲ ಜಿಪಿಎ ಪಡೆದಿರುತ್ತಾರೆ. ಕರಾರು ಮಾಡಿಕೊಂಡಿರುವುದನ್ನೆ ಮರೆತಿರುತ್ತಾರೆ. ಇನ್ನೂ ಕೆಲವರು ಕರಾರು, ಜಿಪಿಎ ಎರಡು ಮಾಡಿಸಿರುತ್ತಾರೆ ಅದರೆ ನೋಂದಣಿ ಮಾಡಿಸುವುದನ್ನು ಮರೆತಿರುತ್ತಾರೆ. ಅ ನಂತರ ಸಮಸ್ಯೆಗಳು ಎದುರಾದರೆ ತಲೆ ಬಿಸಿ ಮಾಡಿಕೊಂಡು ಒದ್ದಾಡುತ್ತಾರೆ. ಹೀಗಾಗಿ ಒಂದು ಅಸ್ತಿ ಖರೀದಿ ಸಂಬಂಧ ಕರಾರುಗಳಿಗೆ, ಜಿಪಿಎಗಳನ್ನು ನೋಂದಣಿ ಮಾಡಿಸಬೇಕೇ ? ನೋಂದಣಿ ಮಾಡಿಸದ ಜಿಪಿಎ, ಕರಾರುಗಳಿಗೆ ಕಾನೂನು ಮಾನ್ಯತೆ ಇರುತ್ತದೆಯೇ ? ಈ ಅಂಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಲೇಬೇಕು.

ಯಾಕೆಂದರೆ, ಕರಾರು ಬೇರೆ, ಜನರಲ್ ಪವರ್ ಅಫ್ ಅಟಾರ್ನಿ ಬೇರೆ. ಇಬ್ಬರು ವ್ಯಕ್ತಿಗಳ ನಡುವೆ ಏರ್ಪಡುವ ಒಪ್ಪಂದವೇ ಕರಾರು ಎಂದು ಕರೆಯುತ್ತೇವೆ. ಒಬ್ಬ ವ್ಯಕ್ತಿ ತನ್ನ ಸ್ವತ್ತಿನ ಮೇಲೆ ಇರುವ ಅಧಿಕಾರವನ್ನು ಇನ್ನೊಬ್ಬ ವ್ಯಕ್ತಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಜನರಲ್ ಪವರ್ ಅಫ್ ಅಟಾರ್ನಿ ಎಂದು ಕರೆಯುತ್ತೇವೆ. ಎಷ್ಟೋ ಆಸ್ತಿಗಳಿಗೆ ಸಂಬಂಧಿಸಿದಂತೆ ಜಿಪಿಎ ದುರುಪಯೊಗ ಪಡಿಸಿಕೊಂಡು ಅಸ್ತಿಗಳನ್ನೇ ಲಪಟಾಯಿಸಿರುವ ಪ್ರಸಂಗಗಳು ನಮ್ಮ ಕಣ್ಣೆದುರು ಇದೆ. ಹೀಗಾಗಿ ಕರಾರು ಮತ್ತು ಜನರಲ್ ಪವರ್ ಅಫ್ ಅಟಾರ್ನಿ ಬಗ್ಗೆ ಈ ಕೆಳಕಿನ ಮಹತ್ವದ ಅಂಶಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರಬೇಕು. ಸಾಮಾನ್ಯವಾಗಿ ಯಾವುದೇ ಕೃಷಿ ಭೂಮಿ, ನಿವೇಶನ, ಅಪಾರ್ಟ್ಮೆಮಂಟ್ ಖರೀದಿ ವೇಳೆ ಕರಾರು, ಜಿಪಿಎ ಮಾಡಿಸುವ ಪ್ರಸಂಗ ಎದುರಾಗುತ್ತದೆ. ಮಾಡಿಸುವ ಕರಾರುಗಳಿಗೆ ( ಒಡಂಬಡಿಕೆ) ಮತ್ತು ಜನರಲ್ ಪವರ್ ಅಫ್ ಅಟಾರ್ನಿ ( ಜಿಪಿಎ – ಮೌಕ್ತರ ನಾಮ) ನೋಂದಣಿ ಮಾಡಿಸಬೇಕೇ, ಬೇಡವೇ ? ನೋಂದಣಿ ಮಾಡಿಸುವ ಮುನ್ನ ಏನೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂಬ ವಿಚಾರ ಮುಖ್ಯವಾಗುತ್ತದೆ.

ಭಾರತೀಯ ನೋಂದಣಿ ಕಾಯ್ದೆ 1908 ರ ಕಲಂ 18 , ಕರಾರು ಅದಿನಿಯಮ ಮತ್ತು ಪವರ್ ಅಫ್ ಅಟಾರ್ನಿ ಅಕ್ಟ್ ಅನ್ವಯ ಯಾವುದೆ ಕರಾರು ಅಥವಾ ಪವರ್ ಅಪ್ ಅಟಾರ್ನಿಗಗಳು ಕೊಡುವವರು ಮತ್ತು ತೆಗೆದೆಕೊಳ್ಳುವರು ಕನಿಷ್ಠ ಎರಡು ಸಾಕ್ಷಿಗಳ ಸಮಕ್ಷಮ ಮಾಡಿಕೊಳ್ಳುವ ಲಿಖಿತ ದಾಖಲೆ ಇದಾಗಿರುತ್ತದೆ. ಕರಾರು ಅಥವಾ ಪವರ್ ಅಫ್ ಅಟಾರ್ನಿಗೆ ಅನುಗುಣವಾಗಿ ಯಾವ ರೀತಿ ಕಾರ್ಯ ನಿರ್ವಹಿಸಬೆಕು ಎಂಬ ಷರತ್ತುಗಳನ್ನು ಒಳಗೊಂಡು ಬರೆದುಕೊಂಡು ಸಹಿ ಮಾಡಿಕೊಂಡಿರೆ, ಅದು ನೋಂದಣಿ ಮಾಡಿಕೊಳ್ಳದಿದ್ದರೂ ಅದಕ್ಕೆ ಕಾನೂನಿನ ಮಾನ್ಯತೆ ಇರುತ್ತದೆ.

ಕರಾರು ಬಗ್ಗೆ ತಿಳಿದುಕೊಳ್ಳಬೇಕಾದ ನಿಯಮ:
ಕರಾರು ವಿಚಾರವಾಗಿ, ಪಾರ್ಟಿಗಳ ನಡುವೆ ಪರಸ್ವರ ಒಪ್ಪಿಗೆಯಿಂದ ಬರೆಸಿರಬೇಕು. ಸಮಯ, ಹಣಕಾಸಿನ ನಿರ್ವಹಣೆ, ಹಾಗೂ ಕರಾರಿನ ಅಂಶಗಳು ಉಲ್ಲಂಘನೆಯಾದಲ್ಲಿ ದಂಡ ಎಷ್ಟು ಎಂಬುದರ ಬಗ್ಗೆ ಕರಾರಿನಲ್ಲಿ ಕಡ್ಡಾಯವಾಗಿ ನಮೂದಿಸಿ ಮಾಡಿಸಿಕೊಂಡರೆ, ಅದು ಕಾನೂನು ಪ್ರಕಾರ ಕರಾರು ಮಾನ್ಯತೆ ಪಡೆದುಕೊಳ್ಳುತ್ತದೆ. ಒಂದು ವಳೆ ಕರಾರು ನಿಯಮಗಳ ಪ್ರಕಾರ ಉಭಯ ಪಾರ್ಟಿಗಳು ನಡೆದುಕೊಳ್ಳದೇ ವಿಫಲವಾದರೆ ಕರಾರಿನಲ್ಲಿ ಉಲ್ಲೇಖಿಸಿರುವ ದಂಡದ ಮೊತ್ತವನ್ನು ಉಲ್ಲಂಘನೆ ಮಾಡಿದವರು ಕಟ್ಟಿಕೊಡಬೇಕು. ಇದಕ್ಕೆ ಒಪ್ಪದಿದ್ದ ಪಕ್ಷದಲ್ಲಿ ಕರಾರನ್ನು ಜಾರಿ ಗೊಳಿಸುವಂತೆ ಕೊರಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆಯಬಹುದು. ಕರಾರು ನೋಂದಣಿಯಾಗದಿದ್ದರೂ ಪರವಾಗಿಲ್ಲ, ಇಬ್ಬರು ಪಕ್ಷಗಾರರು ಒಪ್ಪಿ ಸಹಿ ಮಾಡಿರಬೇಕು. ಅದಕ್ಕೆ ಇಬ್ಬರು ಸಾಕ್ಷಿದಾರರು ಸಹಿ ಹಾಕಿರಬೇಕು. ಅದನ್ನು ನೋಟರಿ ಮಾಡಿಸದಿದ್ದರೂ ಸಹ ಕರಾರಿಗೆ ಕಾನೂನಿನ ಮಾನ್ಯತೆ ಇರುತ್ತದೆ.

ಕರಾರು ಪತ್ರಗಳಲ್ಲಿ ಮುಖ್ಯವಾಗಿ, ಪತ್ರ ಬರೆದು ಸಹಿ ಮಾಡಿದ ದಿನಾಂಕ ಸ್ವತ್ತುಗಳ ಲಿನಿಯೇಜ್ ಮತ್ತು ಷೆಡೂಲ್ಡ್ ಸ್ವತ್ತು ಈ ಅಂಶಗಳು ಪ್ರಮುಖವಾಗಿ ಗಮನಿಸಬೇಕು.

ಯಾವುದೆ ಕರಾರು ಅದ ನಂತರ ಬರೆದುಕೊಂಡಿರುವ ಸಮಯಕ್ಕೆ ಜಾರಿಗೆ ಬರಬೇಕು. ಒಂದು ವೇಳೆ ಜಾರಿಗೆ ಬರದಿದ್ದರೆ, ಎರಡು ವರ್ಷಗಳ ತನಕ ಕರಾರು ಇಟ್ಟುಕೊಂಡರೂ ಸಹ ತದ ನಂತರ, ಸಂಬಂಧಪಟ್ಟ ಪಾರ್ಟಿಯವರಿಗೆ ನೋಟಿಸ್ ನೀಡಿ, ಸ್ವಾಭಾವಿಕ ನ್ಯಾಯ ಪ್ರಕಾರ ಕರಾರಿನ ಅಂಶಗಳನ್ನು ಜಾರಿಗೊಳಿಸಲು ಕೋರಬಹುದು. ಕರಾರು ಜಾರಿಗೆ ಒಪ್ಪದಿದ್ದ ಪಕ್ಷದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹಾಕಿ ಪರಿಹಾರ ಕಂಡುಕೊಳ್ಳಬುದು.
ಕರಾರು ಮಾಡಿಕೊಂಡಿರುವ ವ್ಯಕ್ತಿಗಳಲ್ಲಿ ಯಾರಾದರೂ ನಿಧನರಾದರೆ, ಕರಾರಿನ ಅಂಶಗಳು ಅವರ ವಂಶಾವಳಿಗೆ ಅನ್ವಯ ಅಗುತ್ತದೆ. ಅಂದರೆ, ತಂದೆ ಕರಾರಿಗೆ ಸಹಿ ಮಾಡಿದ್ದು, ಅದು ಜಾರಿಯಾಗಿದ್ದರೆ, ಅವರು ಮೃತಪಟ್ಟರೆ, ಅವರ ಮಕ್ಕಳು ಕರಾರು ಜಾರಿಗೆ ಬಾದ್ಯರಾಗುತ್ತಾರೆ. ನಮ್ಮ ತಂದೆ ಸಾವನ್ನಪ್ಪಿದ್ದಾರೆ, ಹೀಗಾಗಿ ನಮಗೆ ಕರಾರು ಅನ್ವಯ ಆಗಲ್ಲ ಎಂದು ಹೇಳುವಂತಿಲ್ಲ.

ನ್ಯಾಯಾಲಯದಲ್ಲಿ ಕರಾರು ಮಾನ್ಯ ಅಗಬೆಕಾದರೆ, ಸೂಕ್ತ ಮುದ್ರಾಂಕ ಶುಲ್ಕ ಕಟ್ಟಬೆಕಾಗಿರುತ್ತದೆ. ಕರಾರು ಬರೆಯುವಾಗ ಮುದ್ರಾಂಕ ಶುಲ್ಕ ಕಟ್ಟದೇ ಇದ್ದಲ್ಲಿ, ಜಿಲ್ಲಾ ನೋಂದಣಾಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಿ ಮುದ್ರಾಂಕ ಶುಲ್ಕದ ಶೇ. 10 ರಷ್ಟು ದಂಡ ಪಾವತಿ ಮಾಡಿ ಕರಾರು ಪತ್ರವನ್ನು ಮಾನ್ಯ ಮಾಡಿಕೊಳ್ಳಬಹುದು. ಕರಾರು ಉಲ್ಲಂಘನೆಯಾದಲ್ಲಿ ಎರಡು ವರ್ಷದ ಬಳಿಕವೂ ನೋಟಿಸ್ ನೀಡಿ ಅ ನಂತರ ಸಹ ನ್ಯಾಯಾಲಯದಲ್ಲಿ ನ್ಯಾಯ ಕೋರಿ ದಾವೆ ಸಲ್ಲಿಸಲು ಅವಕಾಶ ಇರುತ್ತದೆ.

Exit mobile version