Revenue Facts

ನಿವೃತ ಪಿ.ಎಸ್.ಐ ಜೈಲು ಪಾಲು :

ರಾಯಚೂರು: ಫೆ 22;ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ನಿವೃತ ಪಿ.ಎಸ್.ಐ ಚಂದ್ರಕಾಂತ ಹೆಚ್. ಜಂಗಮ್ ಎಂಬುವವರಿಗೆ ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ನೀಡದೆ ನಿರ್ಲಕ್ಷಿಸಿದ ಆರೋಪದ ಮೇಲೆ 15 ದಿನಗಳ ತಾತ್ಕಾಲಿಕ ಜೈಲು ಶಿಕ್ಷೆ ವಿಧಿಸಿದೆ. ಜೀವನಾಂಶ ನೀಡಲು 15 ದಿನಗಳ ಕಾಲಾವಕಾಶವನ್ನು ನೀಡಿ ಈ ಅವಧಿ ಮುಗಿಯುವವರೆಗೆ ನಿವೃತ ಪಿ.ಎಸ್.ಐ ರವರನ್ನು (ಮಾರ್ಚ್ 09) ರವರೆಗೆ ಜೈಲಿನಲ್ಲಿಯೇ ಇರಿಸಿ, ಮತ್ತೆ ಕೋರ್ಟ್ ಗೆ ಹಾಜರು ಪಡಿಸುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಿಗೆ ನ್ಯಾಯಾಧೀಶ ಜಗದೀಶ್ವರ ಅವರು ಮಂಗಳವಾರ(ಫೆ 21) ಆದೇಶ ನೀಡಿದ್ದಾರೆ.

ಮಹಾರಾಷ್ಟ್ರದ ಸೋಲ್ಲಾಪುರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಜಂಗಮ್ ಮತ್ತು ಪತ್ನಿ ಲಿಲಾವತಿ ರವರು ಮೂಲತಃ ರಾಯಚೂರಿನವರಾಗಿದ್ದು ಕೌಟುಂಬಿಕ ಸಮಸ್ಯೆಗಳಿಂದಾಗಿ 2018 ರಲ್ಲಿ ವಿಚ್ಚೇಧನ ಪಡೆದುಕೊಂಡಿದ್ದರು. ಮಾನ್ಯ ನ್ಯಾಯಾಲವು ಪತ್ನಿಗೆ ಪ್ರತಿ ತಿಂಗಳು 19,500/- ರೂ ಜೀವನಾಂಶ ನೀಡುವಂತೆ ಆದೇಶಿತ್ತು ಇದನ್ನು ಒಪ್ಪಿದ ಚಂದ್ರಕಾಂತ್ ರವರು ಜೀವನಾಂಶ ಕೋಡುತ್ತಾ ಬಂದಿದ್ದರು. ಆದರೆ ಈಚೆಗೆ ಜೀವನಾಂಶ ಕೊಡದೆ ನಿರ್ಲಕ್ಷಿಸಿದ್ದಕ್ಕೆ ಲೀಲಾವತಿ ಅವರು ಕೋರ್ಟ್ ಮೊರೆ ಹೋಗಿದ್ದರು.ಈ ಸಂಬಂಧ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ಜೀವನಾಂಶ ಕೋಡದೆ ಇದ್ದುದಕ್ಕೆ 15 ದಿನಗಳ ತಾತ್ಕಾಲಿಕ ಜೈಲು ಶಿಕ್ಷೆ ವಿಧಿಸಿ ಜೀವನಾಂಶ ನೀಡಲು 15 ದಿನಗಳ ಕಾಲಾವಕಾಶವನ್ನು ನೀಡಿದೆ.

Exit mobile version