Revenue Facts

ನಿಗದಿತ ಸಮಯಕ್ಕೆ ಫ್ಲಾಟ್ ಬಿಟ್ಟುಕೊಡದ ಡೆವಲಪರ್, ಅಸಲಿಗೆ ಬಡ್ಡಿ ಸೇರಿಸಿ ವಾಪಾಸ್ ಕೊಡಿ ಎಂದ ರೇರಾ

ಬೆಂಗಳೂರು ಜೂನ್ 30: ನಗರೀಕರಣ ಹೆಚ್ಚಾಗುತಿದ್ದಂತೆ, ಜನವಸತಿ ಕಟ್ಟಡಗಳ ನಿರ್ಮಾಣ, ಅವುಗಳ ಅಭಿವೃದ್ಧಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಅದರಲ್ಲೂ‌ ಮೆಟ್ರೋಪಾಲಿಟನ್ ಸಿಟಿಗಳಲ್ಲಂತೂ ಬೃಹತ್ ಕಟ್ಡಗಳು ತಲೆ ಎತ್ತಿರುವ ಆಹಾಗೆ ಅವುಗಳ ನಿರ್ಮಾಣ ಕಾರ್ಯ ಮಾಡುವ ಮತ್ತು ಜನಸಾಮಾನ್ಯರಿಗೆ ಒದಗಿಸುವ ಡೆವಲಪರ್, ರಿಯಲ್ ಎಸ್ಟೇಟ್ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತಿರುವುದು ಸತ್ಯ. ಹಾಗೇಯೇ ಕೆಲ ಅಪಾರ್ಟ್ಮೆಂಟ್ ಡೆವಲಪರ್ ಸಮಾನ್ಯ ಜನರಿಗೆ ಅವರು ಕೊಟ್ಟ ಮಾತಿನಂತೆ ಅವರು ಒಪ್ಪಂದದ ಪ್ರಕಾರ ಸಕಾಲಕ್ಕೆನೆಗಳು,ಫ್ಲಾಟ್, ಅಪಾರ್ಟ್ಮೆಂಟ್ ಗಳು ನಿರ್ಮಾಣ ಮಾಡಿ ಜನರಿಗೆ ವಸತಿ ಯೋಗ್ಯವಾದ ಕಟ್ಟಡಗಳುನ್ನು ಕೊಟ್ಟರೆ ಮತ್ತೆ ಕೆಲವರು ಅನೇಕ ಕಾರಣಗಳಿಂದಾಗಿ, ಕೊಟ್ಟ ಮಾತಿಗೆ ತಪ್ಪಿ ನಡೆದು ಕೊನೆಗೆ ದಂಡ ಕಟ್ಟಿ ಪಾರಾಗಬೇಕಾದ ಸಂಕಷ್ಟಗಳಿಗೂ ಸಿಲಿಕಿರುವುದು ಸತ್ಯಸಂಗತಿಗೆ ದೂರವಾದ ಮಾತಲ್ಲ. ಅಂತಹುದೇ ಪರಿಸ್ಥಿತಿಗೆ ಮತ್ತೊಂದು ಉದಾಹರಣೆಗಾರುವುದು, ಲಿಲ್ಲಿ ರಿಯಾಲಿಟಿ ಪ್ರವೈಟ್ ಲಿಮಿಟೆಡ್‌ ಡೆವಲಪರ್ ಕಂಪನಿ.

* ಫ್ಲಾಟ್ ಕಟ್ಟಿ ಕೊಡೋದಾಗಿ ಹೇಳಿ ಗ್ರಾಹಕರಿಗೆ ಉಂಡೆ ನಾಮ ಹಾಕಲು ಮುಂದಾಗಿದ್ದ ಕಂಪನಿಗೆ ಬಿತ್ತು ಭಾರಿ ದಂಡ*

* ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬಂತೆ, ಕೊಟ್ಟ ಮಾತಿಗೆ ತಪ್ಪಿಗೆ ದಂಡ ಕಟ್ಟಬೇಕಾದ ಪರಿಸ್ಥಿತಿಯಲ್ಲಿ ಲಿಲ್ಲಿ ರಿಯಾಲಿಟಿ ಪ್ರವೈಟ್ ಲಿಮಿಟೆಡ್‌ ಡೆವಲಪರ್ ಕಂಪೆನಿ*

* ಫ್ಲಾಟ್ ಖರೀದಿಗೆ 98,35,799 ರೂಪಾಯಿ‌ ಕಟ್ಟಿದ್ದ ದೂರುದಾರ*

* 98,35,799 ರೂಪಾಯಿ‌ ಅಸಲಿಗೆ 10 ವರ್ಷಗಳಿಗೆ 94,65,626 ಬಡ್ಡಿ ಸೇರಿ ಒಟ್ಟು 1,93,01,425 ರೂ. ಹಣ 60 ದಿನಗಳೊಳಗಾಗಿ ವಾಪಾಸ್ ಕೊಡಲು ಡೆವಲಪರ್ ಗೆ ರೇರಾ ಕೋರ್ಟ್ ಆದೇಶ*

ಪ್ರಕರಣ ಸಾರಾಂಶ ಏನೆಂದರೆ ?

ಲಿಲ್ಲಿ ರಿಯಾಲಿಟಿ ಪ್ರವೈಟ್ ಲಿಮಿಟೆಡ್‌ ಡೆವಲಪರ್ ಕಂಪೆನಿಯು, ಬೆಂಗಳೂರು ನಗರ ವ್ಯಾಪ್ತಿಯ, ವಾರ್ಡ್ ನಂಬರ್ 52 ಬಟ್ಟರಹಳ್ಳಿ ಗ್ರಾಮ, ಬಿದರಹಳ್ಳಿ ಹೋಬಳಿ ಹಳೆ ಮದ್ರಾಸ್‌ ರಸ್ತೆಯ ಸಮೀಪದಲ್ಲಿ ಖಾತೆ ಸಂಖ್ಯೆ 149ರಲ್ಲಿ ಪಶ್ಚಿಮವಾಹಿನಿ ವಾಟರ್ ಫ್ರಂಟ್ ಮೊದಲ ಹಂತ ಎಂಬ ಹೆಸರಿನಡಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ, ವಸತಿ ಸಮುಚ್ಚಯ ನಿರ್ಮಾಣ ಮಾಡಿ ಫ್ಲಾಟ್ ಮಾರಾಟದ ಕೆಲಸಕ್ಕೆ ಮುಂದಾಗಿದ್ದರು. ಇದರ ಮುಂದುವರಿದ ಭಾಗವಾಗಿ ಫ್ಲಾಟ್ ಬುಕ್ಕಿಂಗ್ ಓಪನ್ ಮಾಡಿದ್ದು, ಅಗತ್ಯವುಳ್ಳವರು ಖರೀದಿ ಮಾಡಲು ಅವಕಾಶವಿದೆ ಎಂದು ಪ್ರಚಾರ ಕಾರ್ಯ ಕೊಡ ನಡೆಸಿದ್ದರು, ಈ ವೇಳೆ ಮಹಾರಾಷ್ಟ್ರದ ಪುಣೆ ಮೂಲದ ಆನಂದ್ ಧರಿಯಾ ಎಂಬುವವರು ಫ್ಲಾಟ್ ಖರೀದಿಗೆ ಮನಸ್ಸು ಮಾಡಿ, ಡೆವಲಪರ್ ಅವರುಗಳ ಎಲ್ಲಾ ಷರುತ್ತಳಿಗೆ ಒಪ್ಪಿ ಹಣ ಹೋಡಿಕೆ ಮಾಡಿದ್ದರು.

ದೂರುದಾರ ಆನಂದ್ ಧರಿಯಾ ಒಂದು ಫ್ಲಾಟ್ ಖರೀದಿಗೆ ಒಟ್ಟು ಮೊತ್ತು 1,10,00,000 ರೂಪಾಯಿಗೆ ಪಡೆಯಲು ಒಪ್ಪಿ ಮೊದಲ ಸಲ ಬುಕ್ಕಿಂಗ್ ವೇಳೆ 5ಲಕ್ಷರೂಪಾಯಿ‌ ಹಣ ಹೋಡಿಕೆ‌ಮಾಡಿದ್ದಾರೆ, ಬಳಿಕ 28-06-2012ರಂದು ತಮ್ಮ ಫ್ಲಾಟ್ ಖರೀದಿಗೆ ಐಸಿಐಸಿಐ ಬ್ಯಾಂಕ್ ನಿಂದ ಸಾಲ ಪಡೆದು ಲ, ಒಟ್ಟು 65,55,051ಲಕ್ಷ ರೂಪಾಯಿ ಡೆವಲಪರ್ ಅವರ ಕಂಪನಿಗೆ ನಿಡಿರುವುದಾಗಿ ತಿಳಿಸಿದ್ದಾರೆ, ಬಳಿಕ ಅದೇ ವರ್ಷದ ಸೆಪ್ಟೆಂಬರ್ 15ರಂದು ಬಂದ ಡಿಮಾಂಡ್ ನೋಟೀಸ್ ಗೆ ತಕ್ಕಂತೆ ಸೆಪ್ಟೆಂಬರ್ 28ಸರಂದು 16,85,016 ಹಣ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಅದು ಕೋಡ ಕಟ್ಟಡದ ಸೇಲ್ ಅಗ್ರಿಮೆಂಟ್ ಮತ್ತು ಕಟ್ಟಡದ ನಿರ್ಮಾಣ ಕರಾರು ಆಗಿರುತ್ತದೆ, ಅಷ್ಟೇ ಅಲ್ಲದೆ ಡೆವಲಪರ್ ಕಂಪನಿಯು ಕಟ್ಟಡದ ಕಾಮಗಾರಿ ಪೂರ್ಣಗೊಲೀಸುವ ಮೊದಲೇ ಬಾಕಿ ಮತ್ತದ ಹಣಕ್ಕೆ ಬಡ್ಡಿ ಸಮೇತ ನೀಡುವಂತೆ ಬೇಡಿಕೆಯಿಟ್ಟದರಂತೆ. ಈ ವೇಳೆ‌ ದೂರುದಾರ ಡೆವಲಪರ್ ಕಂಪನಿಯ ನಂಬಿಕೆಯನ್ನು ಪರೀಕ್ಷಿಸಲು ಮುಂದಾಗಿದ್ದಾರೆ, ಫ್ಲಾಟ್ ಖರೀದಿಗೆ ಹಣ ಹೋಡಿಕೆ ಮಾಡಿದ್ದ ಆನಂದ್ ಧರಿಯಾ ಕಂಪನಿಯರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ರೆರಾ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್ ಆದೇಶ ಉಲ್ಲೇಖ ಮಾಡಿ ತ್ವರಿತಗತಿಯಲ್ಲಿ ದೂರುದಾರರಿಗೆ ಆಸರೆ ಆದ ಕರ್ನಾಟಕ ರೇರಾ

ಕರ್ನಾಟಕ ರೆರಾ ಕಾಯಿದೆ ಸೆಕ್ಷನ್ 31ರ ಅಡಿಯಲ್ಲಿ ತ್ವರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ತೀರ್ಪು ಕೊಟ್ಟಿರುವ ರೇರಾ

ಪ್ಲಾಟ್ ಖರೀದಿ ಕುರಿತ ಸೇಲ್ ಅಗ್ರಿಮೆಂಟ್ ಹಾಗೂ ಕಟ್ಟಡ ನಿರ್ಮಾಣ ಅಗ್ರಿಮೆಂಟ್ ದಿನಾಂಕದ ಉಲ್ಲೇಖದ ಪರಿಗಣನೆ, 2012ರ‌ ಅಕ್ಟೋಬರ್4 ರಂದು ಆಗಿದ್ದ ಒಪ್ಪಂದ, ಇನ್ನು ದೂರು ದಾರ ನೀಡಿದ್ದ, ಬ್ಯಾಂಕ್ ದಾಖಲೆ, ಸೇಲ್ ಅಗ್ರಿಮೆಂಟ್, ಡಿಡಿ ಚಲನ್, ಪಾವತಿ ಬಿಲ್ ಗಳು, ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ರೆರಾ ಕೋರ್ಟ್, ಸುಪ್ರೀಂ ಕೋರ್ಟ್ ಸೆಕ್ಷನ್ 18(1), ಅಡಿಯಲ್ಲಿ ನೀಡಿರುವ ಅಪೀಲು ನಂಬರ್ 6750-57/2021 ಮಿಸ್ ನೆಟ್ವಕ್ ಪ್ರಮೋಟರ್ಸ್ v/s ದಿ ಸ್ಟೇಟ್ ಉತ್ತರ ಪ್ರದೇಶ ಹಾಗೂ ಅಪೀಲು ನಂಬರ್
3581-3590/2020 ಪ್ಯಾರಾ ನಂಬರ್ 23ರಂತೆ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ v/s ಅನಿಲ್ ಪಾಟ್ನಿ ಮತ್ತು ಇತರರು ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಚನ್ 18(1)ರ ಅಡಿಯಲ್ಲಿ ನಿಗದಿತ ಸಮಯಕ್ಕೆ ಬಿಲ್ಡರ್ಸ್, ಅಥವಾ ಪ್ರಮೋಟರ್ಸ್ ಪ್ಲಾಟ್ ನಿರ್ಮಾಣ, ಮತ್ತು ಹಸ್ತಾಂತರ ಮಾಡದ ಕಾರಣಕ್ಕೆ ನೀಡಲಾಗಿರುವ ತೀರ್ಪುನ್ನು ಉಲ್ಲೇಖ ಮಾಡಿ ಕರ್ನಾಟಕ ರೇರಾ ಕೋರ್ಟ್ ಆದೇಶಿಸಿದೆ.

* ಒಪ್ಪಂದದ ಪ್ರಕಾರ ಗ್ರಾಹಕರಿಗೆ ಫ್ಲಾಟ್ ನೀಡದ ಡೆವಲಪರ್*

* ಕೊಟ್ಟ ಮಾತಿಗೆ ತಪ್ಪಿದ ಲಿಲ್ಲಿ ರಿಯಾಲಿಟಿ ಪ್ರವೈಟ್ ಲಿಮಿಟೆಡ್‌ ಡೆವಲಪರ್ ಕಂಪೆನಿ*

ಕೇವಲ‌ ವರ್ಷದೊಳಗೆ ಪ್ರಕರಣದ ವಾದವಿವಾದಗಳನ್ನು ಆಲಿಸ ಆದೇಶವನ್ನು ಘೋಷಣೆ ಮಾಡಿದ ರೆರಾ

ಕೋರ್ಟ್ ದಿಕ್ಕು ತಪ್ಪಿಸಲು ಮುಂದಾಗಿದ್ದ, ಡೆವಲಪರ್ ಕಂಪನಿ, ಈ ಮೊದಲೇ ಒಪ್ಪಂದ ಮಾಡಿಕೊಂಡಿದ್ದತೆ, ಒಟ್ಟು ಮತ್ತೊದಲ್ಲಿ ದೂರುದಾರ ಕೊಡಬೇಕಾಗಿದ್ದ ಬಾಕಿ‌ಹಣ ಕಟ್ಟಿಲ್ಲವೆಂದು ಕೋರ್ಟ್ ಎದುರು ಸಬೂಬು ಹೇಳಿದ್ದ ಡೆವಲಪರ್ ಕಂಪನಿ, ತಾನು ಬಾಕಿ‌ ಉಳಿಸಿಕೊಂಡಿರುವ 13,39,918 ರೂಪಾಯಿ ಕೊಡಲು ಸಿದ್ದನಿದ್ದೇನೆ ಡಿಡಿ ಸಿದ್ದವಾಗಿದೆ ಎಂದು ಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದ ದೂರುದಾರ, ಆದ್ರೆ ತಾವು ಕೊಟ್ಟ ಮಾತಿನಂತೆ ನಿಗದಿತ ಸಮಯಕ್ಕೆ ಫ್ಲಾಟ್ ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದ ಬಿಲ್ಡರ್ಸ್ ಕಂಪನಿ, ಅಲ್ಲದೆ ತಾನು ಫ್ಲಾಟ್ ಖರೀದಿ ಮಾಡಲು ಐಸಿಐಸಿಐ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದ, ಹಾಗೂ ಆ ಸಾಲದ ಮೊತ್ತವನ್ನು 2019ರ ವೇಳೆಗೆ ತಾನು ವಾಪಾಸ್ ಕಟ್ಟಿ ಬ್ಯಾಂಕ್ ನಿಂದ ಕ್ಲೀಯರೆನ್ಸ್ ಪಡೆದುಕೊಂಡಿದ್ದ ದೂರು ದಾರ ಎಲ್ಲಾ ದಾಖಲೆಗಳನ್ನು ಕರ್ನಾಟಕ ರೇರಾ ಕೋರ್ಟ್ ಬೆಂಚ್ ಮುಂದೆ ಇಟ್ಟಿದ್ದ,‌ ಆದ್ರೆ ಲಿಲ್ಲಿ ರಿಯಾಲಿಟಿ ಪ್ರವೈಟ್ ಲಿಮಿಟೆಡ್‌ ಡೆವಲಪರ್ ಕಂಪೆನಿ ಮಾತ್ರ ತಾನು ಮಾಡಿಕೊಂಡಿದ್ದ ಒಪ್ಪಂದದಂತೆ ಗ್ರಾಹಕರಿಗೆ ಬಿಟ್ಟು ಕೊಡಲು ವಿಫಲವಾದ ಕಾರಣ ಕರ್ನಾಟಕ ರೇರಾ ಕೋರ್ಟ್ ತ್ವರಿತ ಹಾಗೂ ಮಹತ್ವದ ತೀರ್ಪನ್ನು ನೀಡಿ ಆದೇಶ ಹೊರಡಿಸಿದೆ.

ಬಹಳ ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ರೇರಾ ಕೋರ್ಟ್ ಉಲ್ಲೇಖ ಮಾಡಿದ್ದು, ರೇರಾ ಕಾಯ್ದೆ 2016ರ ಸೆಕ್ಷನ್ 31ರ ಅಡಿಯಲ್ಲಿ ದೂರದಾರ ನೀಡಿದ್ದ ದೂರವನ್ನು CMP/201227/0007336 ಅನ್ನು ಪರಿಗಣಿಸಿ ವಿಚಾರಣೆ ನಡಿಸಿದ್ದು, ಬಿಲ್ಡರ್ ಕಂಪನಿಯು ದೂರುದಾರನಿಗೆ 60ದಿನಗಳ‌ ಒಳಗೆ ಬಡ್ಡಿ ಸೇರಿದಂತೆ ಒಟ್ಟು ಮೊತ್ತ 1,93,01425 ರೂಪಾಯಿ ಸಲ್ಲಿಸಬೇಕು ಯಾವುದೇ ರೀತಿಯ ಆದೇಶವನ್ನು ಉಲ್ಲಂಘನೆ ಮಾಡುವಂತಿಲ್ಲವೆಂದು ಆದೇಶ ನೀಡಿದೆ. ಇನ್ನು‌ ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಪ್ರಸಾದ್ ಕೆ ಆರ್ ರಾವ್ ಹಾಗೂ ಇಂದಿರಾ ಪ್ರಿಯದರ್ಶಿನಿ ವಾದವನ್ನು ಮಂಡಿಸಿದ್ದಾರೆ.

ಉದ್ದೇಶ ಇಷ್ಟೇ ರಾತ್ರಿ ಹಗಲು ಎನ್ನದೆ ದುಡಿದ ದುಡ್ಡು‌ ಮಾತ್ರವಲ್ಲದೆ, ಸಾಲ ಮಾಡಿ ಸೂರು ಕೊಂಡು‌ಕೊಳ್ಳುವ ಕನಸು ಹೊತ್ತು ಹೋಡಿಕೆ ಮಾಡಿದ ಗ್ರಾಹಕರಿಗೆ ಉಂಡೆ ನಾಮ‌ ಹಾಕಲು ಮುಂದಾಗುವ ಕೆಲವು ಡೆವಲಪರ್, ಪ್ರಮೋಟರ್, ಕಟ್ಟಡ ನಿರ್ಮಾಣ ಮಾರಾಟದ ರಿಯಲ್ ಎಸ್ಟೇಟ್ ಕಂಪನಿಗಳ ಬಗ್ಗೆ ಸಮಾನ್ಯ ಜನರಿಗೆ ಸಾಕಷ್ಟು ಅರಿವು ಇರಬೇಕು ಅಷ್ಟು ಮಾತ್ರವಲ್ಲದೆ, ಗ್ರಾಹಕ‌ರ ಹೋಡಿಕೆ ಕಾನೂನು ಬದ್ಧವಾಗಿ ಕೋಡಿದ್ದಾಗ ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ನೆಲೆಯಿಲ್ಲ ಕಾನೂನು ಎಲ್ಲರಿಗೂ ಒಂದೆ ಎಂಬತೆ ನ್ಯಾಯ ಸಿಗುವುದಂತ ಪಕ್ಕಾ ಅನ್ನೋದನ್ನು, ಈ ಒಂದು ಪ್ರಕರಣದಿಂದ ನಾವು ಅರಿತುಕೊಳ್ಳ ಬೇಕಾಗಿರುವ ವಾಸ್ತವಿಕ ಸಂಗತಿ ಅಂದರೆ ಬಹುಶಃ ತಪ್ಪಾಗಲಿಕೆ‌ ಇಲ್ಲ.

Exit mobile version