Revenue Facts

ಡೆವಲಪರ್‌ ಗಳೇ ಮನೆ ಖರೀದಿದಾರರ ಸಂಘ ರಚಿಸಬೇಕು ಎಂದ ರೇರಾ ಕೋರ್ಟ್

ಬೆಂಗಳೂರು, ಆ. 10 : ಕೆಲ ಅಪಾರ್ಟ್‌ ಮೆಂಟ್‌ ಗಳಲ್ಲಿ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಡೆವಲಪರ್‌ ಗಳು ಫ್ಲಾಟ್‌ ಗಳನ್ನು ಮಾರಾಟ ಮಾಡಿದರೂ, ಕೆಲ ಮೂಲಭೂತ ಸೌಕರ್ಯಗಳಲ್ಲಿ ಕೊರತೆ ಉಂಟು ಮಾಡಿರುತ್ತಾರೆ. ಹೀಗಾಗಿ ಡೆವಲಪರ್‌ ಗಳೇ ಅಪಾರ್ಟ್‌ ಮೆಂಟ್‌ ನಲ್ಲಿ ಮನೆ ಖರೀದಿದಾರರು ಅಥವಾ ಮನೆ ಮಾಲೀಕರ ಸಂಘವನ್ನು ರಚಿಸಬೇಕು ಎಂದು ಕರ್ನಾಟಕ ರೇರಾ ಸೂಷನೆ ನೀಡಿದೆ. ಇಷ್ಟಾರ್ಥ ಎಂಬ ಬೆಂಗಳೂರಿನ ಅಪಾರ್ಟ್‌ ಮೆಂಟ್‌ ಮಾಲೀಕರೊಬ್ಬರು ಡೆಲವಪರ್ ವಿರುದ್ಧ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

 

ಅದರ ಪ್ರಕಾರ 2018ರ ಜುಲೈ ತಿಂಗಳಿನಲ್ಲಿ ಡೆವಲಪರ್ 64 ಲಕ್ಷ ರೂಪಾಯಿಗೆ ಸೇಲ್ ಡೀಡ್ ಮಾಡಿದ್ದರು. ಹಾಗಿದ್ದರೂ ಕೂಡ ನಾಲ್ಕು ವರ್ಷ ಕಳೆದರೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಮಾಲೀಕರೊಬ್ಬರು ಈ ಬಗ್ಗೆ ಆರೋಪಿಸಿ ದೂರು ನೀಡಿದ್ದರು. ಡೆವಲಪರ್‌ ಗಳು ಪ್ರತಿ ತಿಂಗಳೂ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ. ಆದರೆ, ಲಿಫ್ಟ್‌, ಪಾರ್ಕಿಂಗ್‌ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಉಂಟಾಗಿದೆ ಎಂದಿದ್ದರು. ಅಷ್ಟೇ ಅಲ್ಲದೇ, ವಿದ್ಯುತ್ ಬಿಲ್ ಅನ್ನು ಕೂಡ ಮನೆ ಖರೀದಿದಾರರ ಹೆಸರಿಗೆ ವರ್ಗಾಯಿಸಿರಲಿಲ್ಲ.

ಇಷ್ಟು ವರ್ಷವಾದರೂ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘವೂ ಇರಲಿಲ್ಲ. ಈ ಬಗ್ಗೆ ರೇರಾಗೆ ದೂರು ನೀಡಿದಾಗ ಇದರ ವಿಚಾರಣೆ ನಡೆಸಿದ ರೇರಾ 60 ದಿನಗಳೊಳಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಬೇಕು. ಹಾಗೂ ಆದಷ್ಟು ಬೇಗ ಅಪಾರ್ಟ್‌ ಮೆಂಟ್‌ ನಿವಾಸಿಗಳ ಸಂಘವನ್ನು ಡೆವಲಪರ್‌ ಗಳೇ ರಚಿಸಿ ನೋಂದಾಯಿಸಬೇಕು ಎಂದು ಹೇಳಲಾಗಿದೆ. ಜೊತೆಗೆ ಮನೆ ಖರೀದಿದಾರರಿಗೆ ಇಷ್ಟು ಸಮಯ ಕಿರಿ ಕಿರಿ ಉಂಟು ಮಾಡಿದ್ದಕ್ಕೆ 5ಲಕ್ಷ ರೂಪಾಯಿ ಅನ್ನು ಪಾವತಿ ಮಾಡಬೇಕು ಎಂದು ಆದೇಶ ನೀಡಲಾಗಿದೆ

Exit mobile version