ಬೆಂಗಳೂರು26;ಗಣರಾಜ್ಯೋತ್ಸವ ಈ ದಿನವನ್ನು ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ದೆಹಲಿಯ ಕೆಂಪುಕೋಟೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ಭವ್ಯ ಮೆರವಣಿಗೆ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೇನಾ ಪಡೆಯ ರಾಜಪಥ ನೋಡುಗರ ಮನಸ್ಸು ಗೆಲ್ಲುತ್ತದೆ. ರಾಜ್ಯ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಪಥದ ಮೆರವಣಿಗೆ ನೋಡಲೆಂದೆ ದೇಶ ವಿದೇಶಗಳಿಂದ ಜನರು ದೆಹಲಿಗೆ ಆಗಮಿಸುತ್ತಾರೆ. .ಅದೆಷ್ಟೋ ಜಾತಿ, ಧರ್ಮ, ಮತ-ಪಂತ-ಪಂಗಡ, ಕ್ರೀಡೆ ಹೀಗೆ ನಾನಾ ವಿಶೇಷತಗಳನ್ನೊಳಗೊಂಡ ಪ್ರಜಾಪ್ರಭುತ್ವ ದೇಶ.
1947ರಲ್ಲಿ ಬ್ರಿಟಿಷರ ಕೈ ಮುಷ್ಠಿಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಭಾರತ, ಅಂದಿನಿಂದ ಇಂದಿನ ವರೆಗೂ ಕಾನೂನಿನ ಚೌಕಟ್ಟಿನಲ್ಲಿ ಎತ್ತರಕ್ಕೆ ಬೆಳೆಯುತ್ತ ಸಾಗುತ್ತಿದೆ. ಪ್ರತಿ ದೇಶದ ಬೆಳವಣಿಗೆಯಲ್ಲಿ ಆ ದೇಶದ ಸಂವಿಧಾನದ ಪಾತ್ರ ಪ್ರಬಲ ಹಾಗೂ ಪ್ರಮುಖವಾಗಿ ಕಾಣಿಸುತ್ತದೆ. ಪ್ರತಿ ವರ್ಷ ಜನವರಿ 26ರಂದು ಭಾರತವು ಅತ್ಯಂತ ಸಡಗರದಿಂದ ಗಣರಾಜ್ಯೋತ್ಸವನ್ನು ಆಚರಿಸುತ್ತದೆ ಇದೇ ವೇಳೆ, ರಾಷ್ಟ್ರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರನ್ನು ಗುರುತಿಸಿ ಅವರಿಗೆ ನಾಗರಿಕ ಪ್ರಶಸ್ತಿಗಳನ್ನು ಕೂಡ ಘೋಷಣೆ ಮಾಡಲಾಗುತ್ತದೆ. ಇದರ ಜತೆಗೆ, ಶೌರ್ಯ, ಸಾಹಸ ಪ್ರದರ್ಶಿಸಿದ ಸೇನಾ ಯೋಧರು, ಅಧಿಕಾರಿಗಳು ಮತ್ತು ಪೊಲೀಸರಿಗೂ ಕ್ರಮವಾಗಿ ಸೇನಾ ಹಾಗೂ ಪೊಲೀಸ್ ಪದಕ, ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಯಾವೆಲ್ಲ ಪ್ರಶಸ್ತಿ, ಪದಕ, ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ,
ಭಾರತ ರತ್ನ
ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. ಭಾರತದ ಪ್ರಧಾನಿಗಳ ಶಿಫಾರಸು ಆಧರಿಸಿ, ರಾಷ್ಟ್ರಪತಿಗಳು ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿತ್ತಾರೆ. ಭಾರತೀಯರು ಹಾಗೂ ವಿದೇಶಿ ಪ್ರಜೆಗಳಿಗೂ ಘೋಷಣೆ ಮಾಡಬಹುದು.
ಗ್ಯಾಲಂಟ್ರಿ ಅವಾರ್ಡ್ಸ್
ಈ ಪ್ರಶಸ್ತಿಗಳನ್ನು ಶೌರ್ಯ ತೋರಿಸಿದ ಸೇನಾಧಿಕಾರಿಗಳು, ಯೋಧರಿಗೆ ನೀಡಿ ಗೌರವಿಸಲಾಗುತ್ತದೆ. 1950ರಲ್ಲಿ ಮೊದಲ ಬಾರಿಗೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಎಂಬ ಮೂರು ಗ್ಯಾಲಂಟ್ರಿ ಪ್ರಶಸ್ತಿ ಸ್ಥಾಪಿಸಲಾಯಿತು. ಮತ್ತೆ 1952ರಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಅಶೋಕ ಚಕ್ರ, ಕ್ಲಾಸ್ 1, ಕ್ಲಾಸ್ 2 ಮತ್ತು ಕ್ಲಾಸ್ 3 ಗ್ಯಾಲಂಟ್ರಿ ಪ್ರಶಸ್ತಿ ನೀಡಲಾರಂಭಿಸಿತು. ಆ ನಂತರ, ಈ ಪ್ರಶಸ್ತಿಗಳಿಗೆ ಕ್ರಮವಾಗಿ ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಎಂದು ಹೆಸರಿಸಲಾಯಿತು.
ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ಸ್
ಈ ಪ್ರಶಸ್ತಿಗಳನ್ನು 1951 ಮಾರ್ಚ್ 1ರಂದು ಸ್ಥಾಪಿಸಲಾಯಿತು. ಯಾವುದೇ ಶ್ರೇಣಿ ಅಥವಾ ಸೇವಾ ಹಿರಿತನವನ್ನು ಲೆಕ್ಕಕ್ಕೆ ಪರಿಗಣಿಸದೇ, ಕೇವಲ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಈ ಪದಕಗಳನ್ನು ಪೊಲೀಸರಿಗೆ ಘೋಷಣೆ ಮಾಡಲಾಗುತ್ತದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
18 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಅತ್ಯುತ್ತಮ ಸಾಧನೆ ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತದೆ. ಸಂಶೋಧನೆ, ಶೈಕ್ಷಣಿಕ ಅಥವಾ ಸಾಮಾಜಿಕ ಸೇವೆಗಳಾದ ಕಲೆ, ಶೌರ್ಯ ಅಥವಾ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ನೀಡಿ ಗೌರವಿಸಲಾಗುತ್ತದೆ.
ಕರೆಕ್‌ಷನಲ್ ಸರ್ವೀಸ್ ಮೆಡಲ್ಸ್
ವಿಶಿಷ್ಟ ಸೇವೆ, ಶ್ಲಾಘನೀಯ ಸೇವೆ ಹಾಗೂ ಗ್ಯಾಲಂಟ್ರಿಯಾಗಿ ಈ ಕರೆಕ್‌ಷನಲ್ ಸರ್ವೀಸ್ ಪದಕಗಳನ್ನು ಘೋಷಿಸಲಾಗುತ್ತದೆ. ಭಾರತದ ರಾಷ್ಟ್ರಪತಿಗಳು ಜೈಲು ಸಿಬ್ಬಂದಿಗೆ ಈ ಪ್ರಶಸ್ತಿಗಳನ್ನು ಪ್ರಕಟಿಸುತ್ತಾರೆ.