Revenue Facts

ಕಾವೇರಿ ನೀರು ಬಿಡುಗಡೆ: ಇಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್

ಕಾವೇರಿ ನೀರು ಬಿಡುಗಡೆ: ಇಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್

#Release # Cauvery water # Bangalore-Mysore #highway #closed

ಮಂಡ್ಯ ಆಗಸ್ಟ್ 22;ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ ಇಂದು ರೈತಸಂಘದಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರಸ್ ವೇನಲ್ಲಿ ವಾಹನ ಸಂಚಾರವನ್ನು ತಡೆದು ರೈತರು ಪ್ರತಿಭಟನೆ ಮಾಡಲಿದ್ದಾರೆ, ರೈತ ಸಂಘದ ಮೂಲ ಸಂಘಟನೆಯಿಂದ ದಶಪಥ ಹೆದ್ದಾರಿ ತಡೆಗೆ ಕರೆ ನೀಡಲಾಗಿದ್ದು, ಮಂಡ್ಯದ ಇಂಡುವಾಳು ಬಳಿ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ.ಟ್ಯಾಕ್ಟರ್, ಎತ್ತಿನಗಾಡಿ ಹಾಗೂ ಜಾನುವಾರುಗಳ ಜತೆ ರೈತರು ಹೆದ್ದಾರಿಗೆ ಇಳಿಯಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡಲಿದ್ದಾರೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡಲಿದ್ದಾರೆ. ರೈತರ ಹಿತ ಕಾಪಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರಿಂದು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.ಬೆಂಗಳೂರು ಮಹಾನಗರಕ್ಕೆ 24 ಟಿಎಂಸಿ ಅಡಿ, ಮೈಸೂರು, ರಾಮನಗರ ಜಿಲ್ಲೆಗಳಿಗೆ 20 ಟಿಎಂಸಿ ಅಡಿ ಸೇರಿ ರಾಜ್ಯಕ್ಕೆ 124 ಟಿಎಂಸಿ ಅಡಿ ನೀರು ಅಗತ್ಯವಿದೆ. ಕೆಆರ್​ಎಸ್ 22 ಟಿಎಂಸಿ ಅಡಿ, ಕಬಿನಿ- 6.5, ಹಾರಂಗಿ-7 ಹಾಗೂ ಹೇಮಾವತಿ-20 ಟಿಎಂಸಿ ಅಡಿ ಸೇರಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಟ್ಟು 55 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಸಾಮಾನ್ಯ ವರ್ಷದಲ್ಲಿ ಆ.20ರ ತನಕ ಹರಿಸಬೇಕಾದ ನೀರಿನ ಪ್ರಮಾಣ ಬಿಳಿಗೊಂಡ್ಲು ಬಳಿಯಲ್ಲಿ 70.07 ಟಿಎಂಸಿ ದಾಖಲಾಗಬೇಕು. ಕಳೆದ ವರ್ಷ 284.862 ಟಿಎಂಸಿ ನೀರು ಹರಿದು ಹೋಗಿತ್ತು. ಈ ವರ್ಷ 24.056 ಟಿಎಂಸಿ ನೀರು ಹೋಗಿರುವುದು ದಾಖಲಾಗಿದೆ.

Exit mobile version