Revenue Facts

PSI ನೇಮಕಾತಿಗೆ ಮರು ಪರೀಕ್ಷೆ: ಹೈಕೋರ್ಟ್‌ ಆದೇಶ

PSI ನೇಮಕಾತಿಗೆ ಮರು ಪರೀಕ್ಷೆ: ಹೈಕೋರ್ಟ್‌ ಆದೇಶ

#Re-examination # PSI appointment #High Court #order

ಬೆಂಗಳೂರು; 545 PSI ನೇಮಕಾತಿಯ ಮರು ಪರೀಕ್ಷೆಗೆ ಹೈಕೋರ್ಟ್(highcourt) ಆದೇಶಿಸಿದೆ. ನೇಮಕಾತಿ ಅಕ್ರಮವಾದ ಹಿನ್ನಲೆ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ 269 ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ತನ್ನ ಕಾಯ್ದಿರಿಸಿದ್ದಂತ ತೀರ್ಪನ್ನು(judgment) ಇಂದು ಪ್ರಕಟಿಸಿದ್ದು, 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್(PSI) ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತ ಆದೇಶ ಹೊರಡಿಸಿದೆ. ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.ಅಂದಹಾಗೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಂತ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮ(illegal) ಎಸಗಿದವರನ್ನು ಪ್ರತ್ಯೇಕಿಸಿ, ಅಕ್ರಮದಲ್ಲಿ ಭಾಗಿಯಾಗಿರದೇ ಇರುವವರನ್ನು ನೇಮಕಾತಿ ಅಂತಿಮಗೊಳಿಸುವಂತೆ ಕೋರಿದ್ದರು. ಈ ಅರ್ಜಿಗೆ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಮಹತ್ವದ ತೀರ್ಪನ್ನು ಹೊರಡಿಸಿದೆ.

Exit mobile version