Revenue Facts

Ration Card :`ರೇಷನ್ ಕಾರ್ಡ್’ ತಿದ್ದುಪಡಿ, ಹೆಸರು ಸೇರ್ಪಡೆಗೆ ಮತ್ತೊಮ್ಮೆ ಅವಕಾಶ

Ration Card :`ರೇಷನ್ ಕಾರ್ಡ್’ ತಿದ್ದುಪಡಿ, ಹೆಸರು ಸೇರ್ಪಡೆಗೆ ಮತ್ತೊಮ್ಮೆ ಅವಕಾಶ

ಬೆಂಗಳೂರು : ಪಡಿತರ ಚೀಟಿದಾರರಿಗೆ(Rationcard) ಆಹಾರ ಇಲಾಖೆಯು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಅ.19-21ರವರೆಗೆ ಪಡಿತರ ಚೀಟಿಗಳ ತಿದ್ದುಪಡಿಗೆ ಆಹಾರ ಇಲಾಖೆ ಅವಕಾಶ ನೀಡಿತ್ತು.ಗ್ಯಾರಂಟಿ ಯೋಜನೆಗಳ ಜಾರಿ ಬೆನ್ನಲ್ಲೇ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಜನ ಮುಗಿಬಿದ್ದಿದ್ದಾರೆ.ಗ್ರಾಹಕರ ಒತ್ತಾಯದ ಮೇರೆಗೆ ತಿದ್ದುಪಡಿ ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸಲಾಗಿದೆ. ಈ ಹಿನ್ನೆಲೆ ನ.1ರಿಂದ ಪಡಿತರ ಚೀಟಿ ತಿದ್ದುಪಡಿಗೆ ಆಹಾರ ಇಲಾಖೆ ಮತ್ತೆ ಅವಕಾಶ ನೀಡಿದೆ. ಇನ್ನು ಹೆಸರು ತೆಗೆದುಹಾಕುವ ಅರ್ಜಿಗಳ ಮೇಲೆ ಇಲಾಖೆ ನಿಗಾ ಇಡಲಿದೆ.ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಅವಧಿಯನ್ನು ಮತ್ತಷ್ಟು ವಿಸ್ತರಿಸಿರುವುದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಸರ್ವರ್‌ ಸಮಸ್ಯೆಯನ್ನು ನಿವಾರಿಸುವ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಗ್ರಾಹಕರಿಗೆ ಅವಕಾಶ ನೀಡಲಾಗುವುದು. ಆನ್‌ಲೈನ್‌ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇವೆ ಪಡೆಯಬಹುದು, ತಿದ್ದುಪಡಿಗಳನ್ನು ಮಾಡಿಕೊಳ್ಳಲು ಆಹಾರ ಇಲಾಖೆಯು ನವೆಂಬರ್ 1 ರಿಂದ ಮತ್ತೊಮ್ಮೆ ಅವಕಾಶ ನೀಡಲು ಮುಂದಾಗಿದೆ.

Exit mobile version