Revenue Facts

ವಿದೇಶಿ ಹಿಂದೂ ಪ್ರಜೆ ಹಿಂದೂ ವಿವಾಹ ಕಾಯ್ದೆ ಅಡಿ ವಿವಾಹ ನೋಂದಣಿ ಮಾಡಿಸಬಹುದು: ಕೋರ್ಟ್ ತೀರ್ಪು

#Registration of Hindu Marriage #Rajasthan High Court #Law #Fundamental Rights,

ಬೆಂಗಳೂರು, ಡಿ. 11: ವಿದೇಶಿ ಪತಿಯ ಮದುವೆಯನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡದೇ ಇರುವುದು ಸಮಾನತೆ ಹಕ್ಕಿನ ಉಲ್ಲಂಘನೆ. ಮೂಲಭೂತ ಹಕ್ಕಾದ ಸಮಾನತೆ ಹಕ್ಕು ಕೇವಲ ಭಾರತೀಯರಿಗೆ ಮಾತ್ರ ಅನ್ವಯಿಸುವುದಿಲ್ಲ. ವಿದೇಶಿಯರಿಗೂ ಅನ್ವಯಿಸುತ್ತದೆ ಎಂದು ಅಶ್ವಿನಿ ಶರದ್‌ ಪೆಂಡಸೇ ಪ್ರಕರಣದಲ್ಲಿ ರಾಜಸ್ಥಾನ್ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸಾಮಾನ್ಯವಾಗಿ ವಿದೇಶಿ ಪ್ರಜೆಯನ್ನು ಭಾರತೀಯ ವಧು ಮದುವೆಯಾದರೆ ವಿದೇಶಿ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ಭಾರತದಲ್ಲಿ ನೋಂದಣಿ ಮಾಡುವುದಾದರೆ ವಿಶೇಷ ವಿವಾಹ ಕಾಯ್ದೆ ಅಡಿ ವಿವಾಹ ನೋಂದಣಿ ಮಾಡಲಾಗುತ್ತದೆ. ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲು ನೋಂದಣಾಧಿಕಾರಿಗಳು ನಿರಾಕರಿಸುತ್ತವೆ. ಹೀಗಾಗಿ ಎಷ್ಟೋ ಹಿಂದೂಗಳು ತಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಿದ್ದಾರೆ. ಆದರೆ ವಿದೇಶಿ ವರನನ್ನು ವರಿಸಿದ ಭಾರತೀಯ ವಧು ಹಿಂದೂ ವಿವಾಹ ಕಾಯ್ದೆ ಅಡಿ ತನ್ನ ವಿವಾಹ ನೊಂದಣಿ ಮಾಡಲು ಹೋದಾಗ ನೋಂದಣಾಧಿಕಾರಿಗಳು ನಿರಾಕರಿಸಿದ್ದರು. ನೋಂದಣಾಧಿಕಾರಿಗಳ ಈ ತೀರ್ಮಾನ ವಿರುದ್ಧ ನ್ಯಾಯಾಂಗ ಸಮರ ಸಾರಿ ಹಿಂದೂ ವಿವಾಹ ಕಾಯ್ದೆ ಅಡಿ ವಿವಾಹ ನೋಂದಣಿ ಮಾಡಿಸುವಲ್ಲಿ ಜಯ ಗಳಿಸಿದ್ದಾರೆ.

ಬೆಲ್ಜಿಯಂ ಮೂಲದ ಪತಿಯನ್ನು ವರಿಸಿದ್ದ ರಾಜಸ್ಥಾನದ ಪತ್ನಿ ತನ್ನ ವಿವಾಹವನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲು ಮನವಿ ಸಲ್ಲಿಸಿದ್ದರು. ಆದರೆ ವಿವಾಹ ನೋಂದಣಾಧಿಕಾರಿಗಳು ವಿದೇಶಿ ಪ್ರಜೆಯ ಮದುವೆಯನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲು ನಿರಾಕರಿಸಿದ್ದರು.ಈ ಪ್ರಕರಣ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್‌ ನ್ಯಾ. ಅನೂಪ್ ಕುಮಾರ್‌ ಧಾಂದ್‌, ವಿದೇಶಿ ಗಂಡ ಎಂಬ ಕಾರಣಕ್ಕೆ ವಿವಾಹ ನೊಂದಣಾಧಿಕಾರಿಗಳು ವಿವಾಹ ನೋಂದಣಿ ನಿರಾಕರಿಸುವಂತಿಲ್ಲ. ವರ ವಿದೇಶೀಯ ಎಂಬ ಕಾರಣಕ್ಕೆ ವಿವಾಹ ನೋಂದಣಿ ನಿರಾಕರಣೆ ಮಾಡುವುದು ಸಮಾನತೆಯ ಹಕ್ಕಿನ ಉಲ್ಲಂಘನೆ. ಮೂಲಭೂತ ಹಕ್ಕುಗಲ್ಲಿ ಸಮಾನತೆ ಕೂಡ ಒಂದು ಹಕ್ಕು. ಅದು ಕೇವಲ ಭಾರತೀಯರಿಗೆ ಮಾತ್ರ ವಲ್ಲ ವಿದೇಶಿ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಮಹತ್ವದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ತೀರ್ಪಿನಲ್ಲಿ ವಿವಾಹ ಕುರಿತು ವ್ಯಾಖ್ಯಾನ ಮಾಡಿರುವ ನ್ಯಾಯಮೂರ್ತಿಗಳು, ಮದುವೆ ಎಂಬುದು ಕೇವಲ ದೈಹಿಕ ಸಂಪರ್ಕ ಹೊಂದುವ ಸಂಬಂಧವಲ್ಲ. ಮಾನಸಿಕವಾಗಿಯೂ ಕೂಡ ಒಂದು ಬಾಂಧವ್ಯ. ಮದುವೆ ಎಂಬುದು ಒಬ್ಬರೊನ್ನಬ್ಬರು ನೋಡಿಕೊಳ್ಳಲು ಮಾಡಿಕೊಂಡಿರುವ ಕಾನೂನು ಬದ್ಧ ಒಪ್ಪಂದ. ಮದುವೆ ಎಂಬುದು ಇಬ್ಬರು ವ್ಯಕ್ತಿಗಳ, ಎರಡು ಹೃದಯಗಳ ಹಾಗೂ ಎರಡು ಕುಟುಂಬಗಳ ನಡುವಿನ ಬಾಂಧವ್ಯ ಎಂದು ಅಭಿಪ್ರಾಯ ಪಟ್ಟಿದೆ.ಹಿಂದೂ ವಿವಾಹ ಕಾಯ್ದೆ 1995 ಸೆಕ್ಷನ್ 8 ಹಿಂದೂ ವಿವಾಹ ಕಾಯ್ದೆ ನೋಂದಣಿ ಬಗ್ಗೆ ಹೇಳುತ್ತದೆ. ಅದರಲ್ಲಿ ವಿದೇಶಿ ಹಿಂದೂ ಪ್ರಜೆ ಭಾರತದಲ್ಲಿ ಹಿಂದೂ ವಿವಾಹ ಕಾಯ್ದೆ ಅಡಿ ವಿವಾಹ ನೋಂದಣಿ ಮಾಡುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ಹಿಂದೂ ವಿವಾಹ ಕಾಯ್ದೆ ಅಡಿ ವಿವಾಹ ನೋಂದಣಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.ಮೂಲಭೂತ ಹಕ್ಕುಗಳ ( Indian Constitution Artical 14 ) ಸಮಾನತೆ ಹಕ್ಕು ವಿದೇಶಿ ಪ್ರಜೆಗಳಿಗೂ ಅನ್ವಯಿಸುತ್ತದೆ.

 

ಹೀಗಾಗಿ ಅವರ ಮದುವೆ ನೋಂದಣಿ ನಿರಾಕರಣೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ 12 ರಿಂದ 35 ವರೆಗಿನ ವಿಧಿಗಳು ಎಲ್ಲಾ ನಾಗರಿಕರಿಗೂ ಮಾನವ ಹಕ್ಕುಗಳನ್ನು ನೀಡಿವೆ. ಆರ್ಟಿಕಲ್ 15 ರ ಪ್ರಕಾರ ಜಾತಿ, ಮತ ಧರ್ಮದ ತಾರತಮ್ಯ ಮಾಡಬಾರದು. ಮೂಲ ಭೂತ ಹಕ್ಕುಗಳು ಕೇವಲ ಭಾರತೀಯರಿಗೆ ಮಾತ್ರವಲ್ಲ, ಭಾರತೀಯರಲ್ಲದ ವಿದೇಶಿಯರಿಗೂಉ ಅನ್ವಯಿಸುತ್ತದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಬಹುತೇಕ ದೇಶಗಳು ನೈಸರ್ಗಿಕ ನ್ಯಾಯ ತತ್ವದ ಅನ್ವಯ ವಿದೇಶಿ ಪ್ರಜೆಗಳಿಗೂ ಮೂಲಭೂತ ಹಕ್ಕುಗಳನ್ನು ನಿಡಿವೆ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೇ ಹಿಂದೂ ವಿವಾಹ ಕಾಯ್ದೆ ವಿವಾಹ ನೋಂದಣಿ ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ವಧು ಮತ್ತು ವರ ಭಾರತೀಯ ನಾಗರಿಕರೇ ಆಗಿರಬೇಕು ಎಂದು ಉಲ್ಲೂ ಉಲ್ಲೇಖಿಸಿಲ್ಲ. ಹೀಗಾಗಿ ವರ ಭಾರತೀಯನಲ್ಲ ಎಂಬ ಕಾರಣಕ್ಕೆ ವಿವಾಹ ನೋಂದಣಿ ನಿರಾಕರಣೆ ಮಾಡಿರುವುದು ಮೂಲಭತ ಹಕ್ಕಿನ ಉಲ್ಲಂಘನೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಸಕ್ಷಮ ಪ್ರಾಧಿಕಾರಿಗಳು ಭಾರತೀಯ ಪ್ರಜೆ ಅಲ್ಲ ಎಂಬ ಕಾರಣಕ್ಕೆ ವಿವಾಹ ನೋಂದಣಿ ನಿರಾಕರಣೆ ಮಾಡುವಂತಿಲ್ಲ. ಭಾರತ ರಾಜ್ಯ ಕ್ಷೇತ್ರದಲ್ಲಿ ವಿವಾಹ ವಾಗಿದ್ದರೆ, ಅವರು ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ, ಯಾವುದರಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸುತ್ತಾರೋ ಅವರ ವಿವಾಹವನ್ನು ನೋಂದಣಿ ಮಾಡಬೇಕು. ನಿರಾಕರಣೆ ಮಾಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಇದಲ್ಲದೇ ಹಿಂದೂ ವಿವಾಹ ಕಾಯ್ದೆ ಹಾಗೂ ವಿಶೇಷ ವಿವಾಹ ಕಾಯ್ದೆ ಅಡಿ ವಿವಾಹ ನೊಂದಣಿ ನಿಯಮಗಳ ಬಗ್ಗೆ ಅಧಿಕಾರಿಗಳು ತಮ್ಮ ವೆಬ್ ತಾಣದಲ್ಲಿ ಪ್ರಚುರ ಪಡಿಸಿ ಬೇಕಾಗಿರುವ ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ಮಾಡಬೇಕು ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.

Exit mobile version