Revenue Facts

ಪಿ.ಎಸ್.ಐ ಸ್ಕ್ಯಾಮ್, ಮತ್ತೊಂದು ಬಂಧನ:

ಪಿ.ಎಸ್.ಐ ಸ್ಕ್ಯಾಮ್, ಮತ್ತೊಂದು ಬಂಧನ:

ಕಲಬುರಗಿ: ಫೆ-19,
ರಾಜ್ಯದ್ಯಾಂತ ಸುದ್ದಿಯಲ್ಲಿದ್ದ ಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರಿಗೆ ಬ್ಲೂಟೂತ್ ಉಪಕರಣ ಪೂರೈಸಿದ ಆರೋಪದ ಮೇಲೆ ಸಿಐಡಿ ಪೊಲೀಸರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ್ ಹೆಬ್ಬಾಳ್ಕರ್ ಎಂಬುವರನ್ನು ಶನಿವಾರ ಬಂಧಿಸಿದ್ದಾರೆ.

ಆರೋಪಿಯು ಪಿ.ಎಸ್.ಐ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸುಪ್ರಿಯಾ ಎಂಬುವರಿಗೆ ಬ್ಲೂಟೂತ್ ಪೂರೈಸಲು ಪಿ.ಎಸ್.ಐ ಪ್ರಕರಣದಲ್ಲಿ ಬ್ಲೂ ಟೂತ್ ಕಿಂಗ್ ಪಿನ್ ಎಂದು ಗುರುತಿಸಿಕೊಂಡಿದ್ದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ರವರಿಂದ ಹಣ ಪಡೆದು ಕಳೆದ ವರ್ಷದ ಅಕ್ಟೋಬರ್ 2 ರಂದು ರಾತ್ರಿ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಂಚಿನ ಕೆಳಗಡೆ ಬ್ಲೂಟೂತ್ ಇರಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಸಿ.ಐ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ನಾವದಗಿ ಗ್ರಾಮದ ಆರೋಪಿ ವಿಜಯಕುಮಾರ್ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು.

Exit mobile version