Revenue Facts

PSI ನೇಮಕಾತಿ’ ಹಗರಣ,ಮಾಜಿ ಸಿಎಂ, ಶಾಸಕರಿಗೆ ನೋಟಿಸ್

PSI ನೇಮಕಾತಿ’ ಹಗರಣ,ಮಾಜಿ ಸಿಎಂ, ಶಾಸಕರಿಗೆ ನೋಟಿಸ್

ಬೆಂಗಳೂರು: ಪಿಎಸ್‌ ಐ(PSI) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಶಾಸಕ ಬಸವರಾಜ್ ದಢೇಸುಗೂರು,ಸತೀಶ್ ಜಾರಕಿಹೊಳಿ ಅವರಿಗೆೆ ನ್ಯಾಯಮೂರ್ತಿ ಬಿ. ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗ ಸಮನ್ಸ್(Summons) ಜಾರಿ ಮಾಡಲಾಗಿದೆ. ಸಾಕ್ಷಿ ಹೇಳಿಕೆ ನೀಡುವಂತೆ ಸೂಚಿಸಿದೆ.ಪಿಎಸ್ ಐ ನೇಮಕಾತಿ ಹಗರಣ(PSI Recruitment scam) ಸಂಬಂಧ ರಾಜ್ಯ ಸರ್ಕಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ಪ್ರಕರಣದ ವಿಚಾರಣೆಯನ್ನ ನ್ಯಾಯಮೂರ್ತಿ ಬಿ.ವೀರಪ್ಪ ಆಯೋಗ ನಡೆಸುತ್ತಿದೆ. ರಾಜಕೀಯ ನಾಯಕರು ತಮ್ಮ ಬಳಿ ಪಿಎಸ್‌ ಐ ನೇಮಕಾತಿ ಪರೀಕ್ಷೆ ಹಗರಣದ ಸಾಕ್ಷ್ಯಾಧಾರಗಳಿವೆ ಅಂತ ಹೇಳಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸಮನ್ಸ್ ಜಾರಿಗೊಳಿಸಿ, ಸಾಕ್ಷ್ಯಾಧಾರಗಳನ್ನು ಒದಗಿಸಲು ಸೂಚಿಸುವಂತೆ ದೂರುದಾರರು ಮನವಿ ಮಾಡಿದ್ದರು.ರಾಜ್ಯ ಸರ್ಕಾರ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಆಯೋಗ ರಚನೆ ಮಾಡಿದ್ದು, ಇದೀಗ ವೀರಪ್ಪ ನೇತೃತ್ವದ ಆಯೋಗ ಪ್ರಕರಣದ ತನಿಖೆ .ನ್ಯಾಯಮೂರ್ತಿ ಬಿ.ವೀರಪ್ಪ ಅವರ ಆಯೋಗ ಜಾರಿಗೊಳಿಸಿರುವಂತ ಸಮನ್ಸ್ ನಲ್ಲಿ ಪಿಎಸ್ಐ(PSI) ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿದ್ದರೆ ಒದಗಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಈಗ ರಾಜಕೀಯ ನಾಯಕರಿಗೂ ಸಂಕಷ್ಟ ತಂದಿಟ್ಟಿದೆ.

Exit mobile version