Revenue Facts

PSI ಪ್ರಶ್ನೆ ಪತ್ರಿಕೆ ಸೋರಿಕೆ: ಸಬ್ ಇನ್ಸೆಕ್ಟರ್ ವಶಕ್ಕೆ

PSI ಪ್ರಶ್ನೆ ಪತ್ರಿಕೆ ಸೋರಿಕೆ: ಸಬ್ ಇನ್ಸೆಕ್ಟರ್ ವಶಕ್ಕೆ

#PSI #Question Paper# Leak# Sub Inspector #Seized

ಬೆಂಗಳೂರು: ಪಿಎಸ್ ಐ(PSI), ಸಿಟಿಐ(CTI) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ(Question paper leak case) ಸಂಬಂಧಿಸಿದಂತೆ ಪಿಎಸ್ ಎಸ್ ಐ ಲಿಂಗಯ್ಯನನ್ನು ವಶಕ್ಕೆ ಪಡೆದಿರುವ ಸಿಸಿಬಿ(CCB) ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂಟಲಿಜನ್ಸ್(Intelligence) ವಿಭಾಗದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಲಿಂಗಯ್ಯನನ್ನು ನಿನ್ನೆ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಲಿಂಗಯ್ಯ ವಾಟ್ಸಪ್ ಚಾಟ್ ನ ಒಂದಿಷ್ಟು ಸ್ಟ್ರೀನ್ ಶಾಟ್ ಗಳು ಕೂಡ ವೈರಲ್ ಆಗಿವೆ.ಯಾರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ,ಲಿಂಗಯ್ಯ ಜೊತೆ ಮಾತುಕತೆ ನಡೆಸಿದವರ ವಿಚಾರ ನಡೆಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.ಪಿ.ಎಸ್‌.ಐ.ಮತ್ತು ಸಿಟಿಐ ಪರೀಕ್ಷೆ ಪತ್ರಿಕೆ ಲೀಕ್ ಮಾಡಿರುವ ಆರೋಪ ಕೇಳಿ ಬಂದಿದೆ. ಇಂಟೆಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್ಸ್‌ ಪೆಕ್ಟ‌ರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಿಂಗಯ್ಯ ಎಂಬ ಅಧಿಕಾರಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ.ಹಣಕ್ಕೆ ಬೇಡಿಕೆ, ಪರೀಕ್ಷೆ ವಿಚಾರವಾಗಿ ಡೀಲ್ ಬಗ್ಗೆ ಲಿಂಗಯ್ಯ ಮಾತಾಡಿದ್ದಾರೆ ಎನ್ನುವ ಆಡಿಯೋ, ವಾಟ್ಸಾಪ್ ಚಾಟ್ ವೈರಲ್ ಹಿನ್ನೆಲೆ ಚಂದ್ರಾಲೇಔಟ್ ಠಾಣೆಯಲ್ಲಿ ಪರೀಕ್ಷಾರ್ಥಿಗಳು ದೂರು ನೀಡಿದ್ದಾರೆ.ಸಿಬಿಆರ್​​ಟಿ(CBRT) ಮೂಲಕ ಪರೀಕ್ಷೆ ನಡೆಸುವಂತೆ ಕಾಂತಕುಮಾರ್ ಆಗ್ರಹಿಸಿದ್ದಾರೆ. ಇತ್ತ ನೂರಾರು ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಆರೋಪಿಸಿ ದೂರು ದಾಖಲಿಸುತ್ತಿದ್ದಂತೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು ಪಿಎಸ್‌ಐ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಜ.21ರಂದು ಕಮರ್ಷಿಯಲ್ ಟ್ಯಾಕ್ಸ್ ಇನ್ಸ್​ಪೆಕ್ಟರ್ ಪರೀಕ್ಷೆ ಇದೆ. ಜ.23ರಂದು ನಡೆಯುವ ಪಿಎಸ್​ಐ ಪರೀಕ್ಷೆಗೆ ಸಂಚು ನಡೆಸಿದ್ದಾರೆ. ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದಾರೆ. ಒಂದು ಹುದ್ದೆಗೆ 80 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆಡಿಯೋದಲ್ಲಿ ಪವನ್ ಮತ್ತು ರಜತ್ ಎಂಬುವರ ಹೆಸರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

Exit mobile version