Revenue Facts

ಹೊಸ ಮನೆ ಖರೀದಿಸುವ ಯೋಚನೆ ಇದ್ದರೆ, ತಪ್ಪದೇ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ಇರಲಿ..

ಬೆಂಗಳೂರು, ಡಿ. 29 : ಪ್ರತಿಯೊಬ್ಬ ವ್ಯಕ್ತಿಗೂ ತಾವು ವಾಸವಿರಲು ಒಂದು ಪುಟ್ಟ ಮನೆಯಾದರೂ ಸರಿಯೇ ಅದು ಸ್ವಂತದ್ದಾಗಿರಬೇಖು ಎಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ತಾವು ದುಡಿಯುವ ಹಣವನ್ನು ಆದಷ್ಟು ಕೂಡಿಡಲು ಪ್ರಯತ್ನಿಸುತ್ತಾರೆ. ಮನೆ ಮತ್ತು ಫ್ಲಾಟ್‌ ಬೆಲೆಗಳಂತೂ ಗಗನಕ್ಕೇರಿದೆ. ಖರೀದಿಸಬೇಕೆಂದರೆ ಹರಸಾಹಸವನ್ನೇ ಪಡಬೇಕು. ನಗರಗಳಲ್ಲಿ ಮನೆ, ಫ್ಲಾಟ್‌ ಹಾಗೂ ಸೈಟ್‌ ಎಲ್ಲದರ ಬೆಲೆಯೂ ಕೋಟಿಯಲ್ಲೇ ಇವೆ. ಹೀಗಾಗಿ ಸ್ವಂತ ಮನೆ ಬೇಕೆನ್ನುವವರು ತಮ್ಮ ಜೀವನದ ದುಡಿಮೆಯ ಹಣವನ್ನು ಎಷ್ಟು ಕೂಡಿಟ್ಟರೂ ಕಡಿಮೆಯೇ. ಮನೆ ಖರೀದಿಸಲು ಬಯಸುವವರು ಕಾನೂನು ಬಗ್ಗೆಯೂ ಅರಿವಿರಬೇಕು.

ಮನೆ ಖರೀದಿಸಲು ಯಾವೆಲ್ಲಾ ಕಾನೂನು ನಿಯಮಗಳನ್ನು ಪಾಲಿಸಬೇಕು. ಆಸ್ತಿ ತೆರಿಗೆಯನ್ನು ಕಟ್ಟಬೇಕಾ ಎಂಬ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ. ಮನೆ ಖರೀದಿಸುವ ಪ್ರತಿಯೊಬ್ಬರೂ ಆಸ್ತಿ ತೆರಿಗೆ, ಕಾನೂನು ನಿಯಮಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ. ಆಸ್ತಿ ತೆರಿಗೆ ಹೇಗೆ ಕಟ್ಟಬೇಕು? ಎಲ್ಲಿ ಕಟ್ಟಬೇಕು.? ತೆರಿಗೆ ಕಟ್ಟಲು ಯಾರನ್ನು ಸಂಪರ್ಕಿಸಬೇಕು.? ತೆರಿಗೆಯನ್ನು ಹೇಗೆ ವಿಧಿಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ಹಾಗಾದರೆ ಬನ್ನಿ ಮನೆ ಖರೀದಿಸುವ ಮುನ್ನ ಯಾವೆಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಯೋಣ.

 

ಆಸ್ತಿ ತೆರಿಗೆ: ಸ್ಥಳೀಯ ಆಡಳಿತ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಿ ವಿಧಿಸುತ್ತದೆ. ಸಂಗ್ರಹವನ್ನೂ ಮಾಡುತ್ತದೆ. ಇದನ್ನು ಮುನ್ಸಿಪಲ್‌ ಇಲ್ಲವೇ ಮನೆ ತೆರಿಗೆ ಎಂದು ಕರೆಯುತ್ತೇವೆ. ನೀವು ಮನೆಯನ್ನು ಖರೀದಿಸಬೇಕು ಎಂದಿದ್ದರೆ ಇವರನ್ನು ಸಂಪರ್ಕಿಸಲೇ ಬೇಕು.
ಆಸ್ತಿ ತೆರಿಗೆಯನ್ನು ಮನೆ, ಕಚೇರಿ ಅಥವಾ ಭೂಮಿಯ ಮೇಲೆ ವಿಧಿಸಲಾಗುತ್ತದೆ. ಇದರ ಮಾಲೀಕ ಸ್ಥಳೀಯ ಆಡಳಿತ ಸಂಸ್ಥೆಗೆ ತೆರಿಗೆಯನ್ನು ಕಟ್ಟಬೇಕು. ವಾರ್ಷಿಕ ಇಲ್ಲವೇ ಅರೆ ವಾರ್ಷಿಕವಾಗಿ ತೆರಿಗೆಯನ್ನು ಕಟ್ಟಬಹುದು.

ಆಸ್ತಿ ತೆರಿಗೆ ವಿಧಿಸುವುದು ಏಕೆ..? : ಒಂದು ಪ್ರದೇಶದಲ್ಲಿ ಅಲ್ಲಿನ ಮೂಲ ಸೌಕರ್ಯವನ್ನು ಒದಗಿಸುವ ಕಾರ್ಯವನ್ನು ಆಡಳಿತ ಸಂಸ್ಥೆ ನಿರ್ವಹಿಸುತ್ತದೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್‌ ಇದ್ದರೆ, ನಗರದಲ್ಲಿ ಪಾಲಿಕೆಗಳು ಇರುತ್ತವೆ. ಇವು ಸ್ಥಳೀಯ ಪ್ರದೇಶದ ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಇವನ್ನು ನಿಭಾಯಿಸಲು ಸಂಸ್ಥೆಗಳು ಆಸ್ತಿ ತೆರಿಗೆಯನ್ನು ವಿಧಿಸುತ್ತವೆ. ರಸ್ತೆ ಸ್ವಚ್ಛತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಕ್ಕೆ ಆಸ್ತಿ ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ವೇಯಿಸುತ್ತದೆ.

 

ತೆರಿಗೆಯನ್ನು ಯಾವ ಲೆಕ್ಕದಲ್ಲಿ ವಿಧಿಸಲಾಗುತ್ತೆ : ಸಾಮಾನ್ಯವಾಗಿ ಆಸ್ತಿ ತೆರಿಗೆಯನ್ನು ಮನೆ ಯಾವ ಪ್ರದೇಶದಲ್ಲಿದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಜೊತೆಗೆ ಅದರ ಮೌಲ್ಯ, ಕಟ್ಟಡದ ಅಂತಸ್ತು, ಕಟ್ಟಡದ ವಯಸ್ಸು, ಕಟ್ಟಡದ ವರ್ಗ ಹಾಗೂ ಬಳಕೆ, ವಾಣಿಜ್ಯಕ್ಕೆ ಬ:ಳಕೆಯಾಗುತ್ತಿದೆಯೇ ಎಂಬ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಳಿಕ ಅದಕ್ಕೆ ಸೂಕ್ತವಾದ ಮೊತ್ತವನ್ನು ನಿಗಧಿಪಡಿಸಲಾಗುತ್ತದೆ. ಇದು ರಾಜ್ಯದಿಂದ ರಾಜ್ಯಗಳಿಗೆ ಬದಲಾಗುತ್ತದೆ.

ಆಸ್ತಿ ತೆರಿಗೆ ಪರಿಶೀಲಿಸಿ : ಇನ್ನು ನೀವು ಮನೆಯನ್ನು ಖರೀದಿಸುವ ಮುನ್ನ ಆಸ್ತಿ ತೆರಿಗೆ ಬಗ್ಗೆ ಗಮನಿಸಿ. ನೀವು ಖರೀದಿಸುತ್ತಿರುವ ಮನೆಗೆ ಎಷ್ಟು ಆಸ್ತಿ ತೆರಿಗೆ ಬೀಳಬಹುದು ಎಂಬುದನ್ನು ಲೆಕ್ಕ ಹಾಕಿ. ಇದು ನೀವು ಮುಂದೆ ತೆರಿಗೆ ಕಟ್ಟುವಾಗ ಸಮಸ್ಯೆಯಾಗುವುದಿಲ್ಲ. ನಿಮ್ಮ ಬಜೆಟ್‌ ಬಗ್ಗೆ ಗಮನವಿಡಬಹುದು.

ಎಲ್ಲಿ ತೆರಿಗೆ ಕಟ್ಟಬೇಕು: ಆಸ್ತಿ ತರಿಗೆಯನ್ನು ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯಲ್ಲಿ ಕಟ್ಟಬಹುದು. ನೀವು ಇರುವ ಪ್ರದೇಶ ಯಾವ ಪುರಸಭೆಗೆ ಬರುತ್ತದೆ ಎಂಬುದನ್ನು ತಿಳಿದರೆ ಸೂಕ್ತ. ಇನ್ನು ಈಗ ಎಲ್ಲವನ್ನೂ ಆನ್‌ ಲೈನ್‌ ನಲ್ಲೇ ಪಾವತಿಸುವ ಅವಕಾಶವಿರುವುದರಿಂದ ಕಚೇರಿಯನ್ನು ಹುಡುಕುವ ಪ್ರಮೇಯ ಬರುವುದಿಲ್ಲ. ಮನೆ ಖರೀದಿಸುವಾಗ ಹೇಗಿದ್ದರೂ ಪುರಸಭೆಗೆ ಭೇಟಿ ಕೊಟ್ಟಿರುತ್ತೀರಾ.

Exit mobile version