Revenue Facts

ಆಸ್ತಿ ತೆರಿಗೆಯಲ್ಲಿ ಶೇ.5 ರಷ್ಟು ರಿಯಾಯಿತಿ ಅನ್ನು ವಿಸ್ತರಿಸಿದ ಬಿಬಿಎಂಪಿ

ಬೆಂಗಳೂರು, ಜೂ. 03 : ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಪಾವತಿಸುವವರು ಶೇ. 5 ರಷ್ಟು ರಿಯಾಯಿತಿ ಅನ್ನು ಪಡೆಯಲು ಇನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 30ರೊಳಗೆ ತೆರಿಗೆ ಪಾವತಿಸಿದರೆ ಶೆ. 5ರಷ್ಟು ರಿಯಾಯಿತಿ ಕೊಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಅದನ್ನು ಈಗ ಬಿಬಿಎಂಪಿ ವಿಸ್ತರಣೆ ಮಾಡಿದೆ. ಬಿಬಿಎಂಪಿ ಆಸ್ತಿ ಮಾಲೀಕರು ಜೂನ್ 30ರವರೆಗೂ ಸಮಯವನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ವಿಸ್ತರಣೆ ಮಾಡಲಾಗಿದೆ.

ದಂಡ ಇಲ್ಲದೇ ರಿಯಾಯಿತಿ ಮೇಲೆ ಆಸ್ತಿ ತೆರಿಗೆ ಪಾವತಿಗೆ ಜೂನ್ 30 ಕೊನೆಯ ದಿನವಾಗಿದೆ. ಅದಾದ ಬಳಿಕ ಪಾವತಿಸಿದರೆ ಶೇ. 10ರಷ್ಟು ವಾರ್ಷಿಕ ಬಡ್ಡಿಯನ್ನ ದಂಡವಾಗಿ ಸೇರಿಸಿ ಪಾವತಿಸಬೇಕಾಗುತ್ತದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು https://bbmptax.karnataka.gov.in/ ವೆಬ್ಸೈಟ್ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಆನ್ಲೈನ್ನಲ್ಲಿ ಆಸ್ತಿ ತೆರಿಗೆ ಪಾವತಿ ಬಹಳ ಸರಳ. ಅಪ್ಲಿಕೇಶನ್ ನಂಬರ್ ಅಥವಾ ಪಿಐಡಿ ಸಂಖ್ಯೆ ನಮೂದಿಸಿದರೆ ಆಸ್ತಿ ವಿವರ ತೆರೆದುಕೊಳ್ಳುತ್ತದೆ.

ಅದರಲ್ಲೇ ತೆರಿಗೆ ವಿವರವೆಲ್ಲವೂ ಗಣಿತವಾಗಿ ನಮೂದಾಗಿರುತ್ತದೆ. ಆ ಮೊತ್ತವನ್ನು ಪಾವತಿಸಲು ಯುಪಿಐ ಪೇಮೆಂಟ್, ನೆಟ್ ಬ್ಯಾಂಕಿಂಗ್ ಇತ್ಯಾದಿ ಅವಕಾಶವನ್ನು ಕೊಡಲಾಗಿದೆ. ಒಂದು ವೇಳೆ, ಆಸ್ತಿಯಲ್ಲಿ ಬದಲಾವಣೆ ಆಗಿದ್ದರೆ, ಅಂದರೆ ಆಸ್ತಿಯಲ್ಲಿರುವ ಕಟ್ಟಡದ ವಿಸ್ತೀರ್ಣದಲ್ಲಿ ಬದಲಾವಣೆ ಆಗಿದ್ದರೆ ಆಗ ಮ್ಯಾನುಯಲ್ ಆಗಿ ಡೇಟಾ ಎಂಟ್ರಿ ಮಾಡಬೇಕು. ಕಳೆದ ವರ್ಷವೂ ಕೂಡ ಬಿಬಿಎಂಪಿ ಈ ರಿಬೆಟ್ ಆಫರ್ ಅನ್ನು ನೀಡಿತ್ತು. ಈ ವರ್ಷವೂ ಕೂಡ ಆಫರ್ ನೀಡಿದ್ದು, ಅಧಿಕೃತವಾಗಿ ಮಾಹಿತಿ ನೀಡಿದೆ.

ಈ ವರ್ಷ ಬೆಂಗಳೂರಿನಲ್ಲಿ 313 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆದರೆ ಹಿಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ 600ಕ್ಕೂ ಹೆಚ್ಚು ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ ಎಷ್ಟು ತೆರಿಗೆ ಸಂಗ್ರಹವಾಗುತ್ತದೆ ಎಂಬುದನ್ನು ಮುಂದೆ ನೋಡಬೇಕಿದೆ.

Exit mobile version