Revenue Facts

ಆಸ್ತಿ ನೋಂದಣಿ: ಸರ್ಕಾರದಿಂದ ಮುದ್ರಾಂಕ ಶುಲ್ಕ ಇಳಿಕೆ

ಆಸ್ತಿ ನೋಂದಣಿಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲಿ ಸರ್ಕಾರವು ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡಿದೆ. ಈ ಘೋಷಣೆ ಪ್ರಕಾರ, 35ರಿಂದ 45ಲಕ್ಷದವರೆಗಿನ ಆಸ್ತಿ ನೋಂದಣಿಗೆ ಶೇಕಡ 3ರಷ್ಟು, 45 ಲಕ್ಷಕ್ಕಿಂತ ಮೇಲ್ಪಟ್ಟ ಆಸ್ತಿಗೆ ಈ ಮುಂಚಿನಂತೆ ಶೇಕಡ 5ರಷ್ಟು ಮುದ್ರಾಂಕ ಶುಲ್ಕ ವಿಧಿಸಿದೆ. ರಿಜಿಸ್ಟ್ರೇಷನ್‌ ಶುಲ್ಕದಲ್ಲಿ ಯಾವುದೇ ಬದಲಾವಣೆಯನ್ನು ಘೋಷಣೆ ಮಾಡಿಲ್ಲ.

ರಾಜ್ಯದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಪ್ರೋತ್ಸಾಹಿಸಲು ಸರ್ಕಾರವು ಮುದ್ರಾಂಕ ಶುಲ್ಕ ಕಾಯ್ದೆ 1957 ತಿದ್ದುಪಡಿಯನ್ನು ಅಂಗೀಕರಿಸಿದ್ದು, 35ರಿಂದ 45 ಲಕ್ಷ ರೂಪಾಯಿಯ ಆಸ್ತಿಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಶೇಕಡ 5ರಿಂದ 3ಕ್ಕೆ ಕಡಿತಗೊಳಿಸಿದೆ. ಈ ರಿಯಾಯಿತಿ ಮೊದಲ ಬಾರಿಗೆ ಆಸ್ತಿ ನೋಂದಾವಣೆಗೆ ಮಾತ್ರ ಅನ್ವಯಿಸುತ್ತದೆ.

ಕಳೆದ ವರ್ಷ ರಾಜ್ಯ ಸರ್ಕಾರವು ರೂ 35 ಲಕ್ಷಕ್ಕಿಂತ ಕಡಿಮೆ ಬೆಲೆಯ ಆಸ್ತಿಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಿತ್ತು. ಈಗಿನ ನಿಯಮ ಪ್ರಕಾರ, 45 ಲಕ್ಷ ರೂಪಾಯಿಗಿಂತ ಹೆಚ್ಚಿನ ಆಸ್ತಿಗೆ ಒಟ್ಟು ಆಸ್ತಿಯ ಶೇಕಡ 5ರಷ್ಟು ಮುದ್ರಾಂಕ ಶುಲ್ಕ ಹಾಗೂ ನೋಂದಾಯಿತ ಆಸ್ತಿ ಮೌಲ್ಯದ ಶೇಕಡ 1ರಷ್ಟು ನೋಂದಣಿ ಶುಲ್ಕವಾಗಿ ಬೆಂಗಳೂರಿನಲ್ಲಿ ಪಾವತಿಸಬೇಕು.

ಬೆಂಗಳೂರಿನಲ್ಲಿ ಮುದ್ರಾಂಕ ಶುಲ್ಕ
ಇಲ್ಲಿ ಶೇಕಡ 10 ಸೆಸ್‌ ಹಾಗೂ ಶೇಕಡ 2 ಅಧಿಕ ತೆರಿಗೆ (ಸರ್‌ಚಾರ್ಜ್‌) ಪಾವತಿಸಬೇಕಾಗುವುದರಿಂದ 45 ಲಕ್ಷಕ್ಕಿಂತ ಮೇಲಿನ ಆಸ್ತಿ ನೋಂದಣಿಗೆ ಒಟ್ಟು ಶೇಕಡ 5.6ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸರ್‌ಚಾರ್ಜ್‌ ಶೇಕಡ 3ರಷ್ಟು ಆಗಿರುವುದರಿಂದ ಒಟ್ಟು ಮುದ್ರಾಂಕ ಶುಲ್ಕ ಶೇಕಡ 5.65ರಷ್ಟು ಪಾವತಿಸಬೇಕಾಗುತ್ತದೆ.

Exit mobile version