Revenue Facts

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾಗಿ ಎಂದು ಸೂಚನೆ ನೀಡಿದ ಕಂದಾಯ ಸಚಿವ

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾಗಿ ಎಂದು ಸೂಚನೆ ನೀಡಿದ ಕಂದಾಯ ಸಚಿವ

ಬೆಂಗಳೂರು, ಆ. 08 : ಶೀಘ್ರವಾಗಿ ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಪಟ್ಟಿಯನ್ನು ತಯಾರಿಸಿ ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ. ಸರ್ಕಾರಿ ಜಮೀನುಗಳ ಪ್ರಾಥಮಿಕ ಒತ್ತುವರಿಯನ್ನು ಕಂದಾಯ ಅಧಿಕಾರಿಗಳು ಪಟ್ಟಿ ಮಾಡಬೇಕು. ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರು ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ/ಗ್ರಾಮೀಣ ಜಿಲ್ಲಾಧಿಕಾರಿಗಳು, ಕಂದಾಯ ಆಯುಕ್ತರ ಜೊತೆಗೆ ಸಚಿವರು ಸಭೆ ನಡೆಸಿದರು.

ಸಭೆಯಲ್ಲಿ ಭೂಮಿ ಅತಿಕ್ರಮಣ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. ಸರ್ಕಾರಿ ಭೂಮಿ ಒತ್ತುವರಿ ದೊಡ್ಡ ಸಮಸ್ಯೆ ಆಗಿ ಪರಿಣಮಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಹಳ ನಷ್ಟವುಂಟು ಮಾಡುತ್ತಿದೆ. ಹಾಗಾಗಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಹಾಗಾಗಿ ಸಾಧ್ಯವಾದಷ್ಟು ಬೇಗ ಒತ್ತುವರಿ ಪಟ್ಟಿ ತಯಾರಿಸಿ, ಪ್ರತಿ ಶನಿವಾರ ಹಾಗೂ ಭಾನುವಾರದಂದು ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಸೂಚನೆ ನೀಡಿದರು.

ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರಿ ಜಮೀನುಗಳನ್ನು ರಕ್ಷಿಸುವ ಬಗ್ಗೆ ಮಾತು ನೀಡಲಾಗಿದೆ. ಸರ್ಕಾರಿ ಜಮೀನುಗಳ ಸುತ್ತ ಬೇಲಿ ಅಳವಡಿಸಬೇಕು. ಪ್ರತಿ ವಾರ ಸರ್ಕಾರಿ ಜಮೀನುಗಳಿಗೆ ಬೀಟ್‌ ಹಾಕುವ ಮೂಲಕ ಸರ್ಕಾರದ ಆಸ್ತಿಯನ್ನು ಕಾಪಾಡಬೇಕು. ಪ್ರತಿ ಸರ್ಕಾರಿ ಜಮೀನುಗಳನ್ನು ರೀ-ಸರ್ವೇ ಮಾಡಬೇಕು. ಇನ್ನು ವಸತಿ ಸಮುಚ್ಚಯಗಳಿಗೆ ನೋಂದಣಿಗೆ ಬಂದಾಗ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ, ಒತ್ತುವರಿಯಾಗಿದ್ದರೆ, ಕೂಡಲೇ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

Exit mobile version