Revenue Facts

ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ ಸಾಧ್ಯತೆ

ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ 2019ರ ಏಪ್ರಿಲ್‌ಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆಯ ಗಡುವು ನ.17ರಂದು ಕೊನೆಯಾಗಲಿದ್ದು, ನಂಬರ್ ಪ್ಲೇಟ್ ಅಳವಡಿಕೆಗೆ ಸಾರ್ವಜನಿಕರು ನಿರಾಸಕ್ತಿ ತೋರುತ್ತಿರು ವುದರಿಂದ ಸರಕಾರ ಗಡುವು ವಿಸ್ತರಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ 2019ರ ಏಪ್ರಿಲ್‌ಗೆ ಮೊದಲು ನೋಂದಣಿ ಯಾಗಿರುವ 2 ಕೋಟಿ ಹಳೆಯ ವಾಹನಗಳ ಪೈಕಿ ಕೇವಲ 1.75 ಲಕ್ಷ (ಶೇ. 10ಕ್ಕಿಂತ ಕಡಿಮೆ) ವಾಹನಗಳಿಗೆ ಮಾತ್ರ ಹೊಸ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ ಗಡುವು ವಿಸ್ತರಿಸಿ, ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸಲು ಹೆಚ್ಚಿನ ಪ್ರಚಾರ ನೀಡುವ ಸಾಧ್ಯತೆಯಿದೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭದ್ರತೆ ಸೇರಿದಂತೆ, ವಾಹನಗಳ ದುರುಪಯೋಗ ತಡೆಯಲು ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಒಮ್ಮೆ ಅಳವಡಿಸಿದರೆ ನಂತರ ತೆಗೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಂಬರ್ ಪ್ಲೇಟ್‌ಗಳ ವಿನಿಮಯಕ್ಕೆ ಸಾಧ್ಯವಾಗುವುದಿಲ್ಲ,ಈ ಹಿಂದೆ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ವಿವಿಧ ವಾಹನ ಸಂಘಗಳು ಮನವಿ ಮಾಡಿದ್ದು, ಅವರ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದಿನ ರೀತಿಯಲ್ಲಿ ವಾಹನಗಳಿಗೆ ಹಳೆ ತೆರಿಗೆ ವ್ಯವಸ್ಥೆ ಮುಂದುವರಿಸುವಂತೆ ಸೂಚಿಸಿದ್ದಾರೆ.ವಿವಿಧ ಶ್ರೇಣಿಯ ವಾಹನಗಳ ತೆರಿಗೆ ಪರಿಷ್ಕರಣೆಯಿಂದ ಹೊರೆಯಾಗುತ್ತದೆ ಎಂದು ವಾಹನ ಸಂಘಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದವು. ವಾಹನಗಳಿಗೆ 5 ರಿಂದ 15 ಲಕ್ಷ ರೂ ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ಹಳದಿ ಬೋರ್ಡ್ ವಾಹನಗಳ ಮಾಲೀಕರು ಸಾಲ ಪಡೆಯುವುದು, ಹಳೆ ವಾಹನ ಖರೀದಿಸುವುದು ಸಾಮಾನ್ಯವಾಗಿದೆ.

Exit mobile version