Revenue Facts

7ನೇ ವೇತನ ಆಯೋಗಕ್ಕೆ 6 ತಿಂಗಳು ವಿಸ್ತರಿಸಿ ಆದೇಶ

#order #extend #7thpaycommission #6months

ಬೆಂಗಳೂರು: ವೇತನ ಪರಿಷ್ಕರಣೆಯಾಗಿ(Pay Revision) ಹೆಚ್ಚುವೇತನ ಸಿಗುವ ಸಂತಸದಲ್ಲಿರುವ ರಾಜ್ಯ ಸರಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ಏಳನೇ ವೇತನ ಆಯೋಗ(7th pay commission)ದ ಗಡುವನ್ನು ಆರು ತಿಂಗಳ ಕಾಲ ವಿಸ್ತರಣೆ(Extend) ಮಾಡಿ ಸರಕಾರ ಆದೇಶಿಸಿದೆ. ಇದರಿಂದ ಇನ್ನೇನು ವೇತನ ಹೆಚ್ಚಳವಾಗಲಿದೆ ಎಂದು ಭಾವಿಸಿದ್ದ ಲಕ್ಷಾಂತರ ಸರಕಾರಿ ನೌಕರರು(Government employees) ಮತ್ತೆ ಕೆಲ ತಿಂಗಳ ಕಾಲ ಕಾಯಬೇಕಾಗಿದೆ. ರಾಜ್ಯ ಸರಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಬಿಜೆಪಿ ಸರಕಾರವು 2022 ರ ನವೆಂಬರ್ 19 ರಂದು ಒಂದು ಆಯೋಗವನ್ನು ರಚನೆ ಮಾಡಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಈ ಆಯೋಗ ರಚನೆಯಾಗಿತ್ತು. 6 ತಿಂಗಳಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ನವೆಂಬರ್ 19 ಅ೦ತ್ಯವಾಗಲಿದೆ. ಸೆಪ್ಟೆಂಬರ್ 29ರಂದು ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿತ್ತು. ಹಣಕಾಸು ಖಾತೆ ಸಚಿವರೂ ಸಹ ಮುಖ್ಯಮಂತ್ರಿಗಳೇ ಆಗಿರುವುದರಿಂದ ಆಯೋಗ ವರದಿ ನೀಡುವ ಕುರಿತು ಚರ್ಚೆ ಮಾಡಲಾಗಿತ್ತು.ಅವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.ಈಗಾಗಲೇ ಶೇ 17ರಷ್ಟು ಮಧ್ಯಂತರ ಪರಿಹಾರ ನೀಡಿರುವ ಕಾರಣ ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಹಿಂದಿನ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದಾಗ ಶೇ 30ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಈಗ ಅಷ್ಟೇ ಹೆಚ್ಚಳ ಮಾಡಿದರೂ, ₹8 ಸಾವಿರ ಕೋಟಿ ಹೆಚ್ಚುವರಿ ನೀಡಬೇಕಾಗುತ್ತದೆ. ಹಾಗಾಗಿ, ತಕ್ಷಣ ವರದಿ ಪಡೆದು ಜಾರಿಮಾಡಬೇಕು.

Exit mobile version