Revenue Facts

One Nation One Election:2029ರಿಂದ ‘ಒಂದು ರಾಷ್ಟ್ರ- ಒಂದು ಚುನಾವಣೆ’ ಚುನಾವಣೆ

ನವದೆಹಲಿ;2029 ರಿಂದ ‘ಒಂದು ರಾಷ್ಟ್ರ- ಒಂದು ಚುನಾವಣೆ’ ನಡೆಸಲು ಕಾನೂನು ಆಯೋಗವು ಶೀಘ್ರದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಿದೆಯಂತೆ. ಇದಕ್ಕಾಗಿ ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲು ಆಯೋಗವು ತಿದ್ದುಪಡಿಗಳನ್ನು ಶಿಫಾರಸು ಮಾಡಲಿದೆ ಎಂದು ವರದಿಯಾಗಿದೆ. ‘ಒಂದು ರಾಷ್ಟ್ರ-ಒಂದು ಚುನಾವಣೆ’ ಜಾರಿಗೆ ತರಲು ಮುಂದಿನ ಐದು ವರ್ಷಗಳಲ್ಲಿ 3 ಹಂತಗಳಲ್ಲಿ ರಾಜ್ಯ ವಿಧಾನಸಭೆಯ ಅವಧಿಯನ್ನು ಸರಿಹೊಂದಿಸಲು ಆಯೋಗವು ಪ್ರಸ್ತಾಪಿಸಲಿದೆ ಎಂದು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿವೆ.ನಿವೃತ್ತ ನ್ಯಾಯಾಧೀಶ ನ್ಯಾ। ರಿತುರಾಜ್‌ ಅವಸ್ಥಿ ನೇತೃತ್ವದ ಕಾನೂನು ಆಯೋಗ, ಒಂದು ದೇಶ, ಒಂದು ಚುನಾವಣೆ ಜಾರಿ ಸಂಬಂಧ, ಸಂವಿಧಾನಕ್ಕೆ ಹೊಸ ಅಧ್ಯಾಯವೊಂದನ್ನು ಸೇರ್ಪಡೆ ಮಾಡಿ, 2029ರಿಂದ ಯೋಜನೆ ಜಾರಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ಹರ್ಯಾಣ, ಜಾರ್ಖಂಡ್‌. 2025ಕ್ಕೆ ಬಿಹಾರ, ದೆಹಲಿ. 2026ಕ್ಕೆ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಕೇರಳ. 2027ಕ್ಕೆ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ. 2028ಕ್ಕೆ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌, ಕರ್ನಾಟಕ, ಮಿಜೋರಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ.ಅಸೆಂಬ್ಲಿ ಅವಧಿಯು ಐದು ವರ್ಷಗಳವರೆಗೆ ಇರುತ್ತದೆ. ಆದ್ರೆ, ಮೂರು ಅಥವಾ ಆರು ತಿಂಗಳೊಳಗೆ ಅವಧಿ ಮುಗಿಯುವ ರಾಜ್ಯಗಳನ್ನ ಪರಿಗಣಿಸಿ ಮೊದಲ ಹಂತದಲ್ಲಿ ಚುನಾವಣೆ ನಡೆಸಲು ಕಾನೂನು ಆಯೋಗ ಮುಂದಾಗಿದೆ. ಹೀಗಿರುವಾಗ ಅವಿಶ್ವಾಸ ಗೊತ್ತುವಳಿ ಮಂಡನೆಯಿಂದ ಸರ್ಕಾರ ಪತನವಾದರೂ, ಆ ವೇಳೆಗೆ ಒಗ್ಗಟ್ಟಿನ ಸರ್ಕಾರ ರಚನೆಯಾಗಬೇಕು. ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನ ಆಯ್ಕೆ ಮಾಡಿ ಈ ಸರ್ಕಾರ ರಚಿಸಲು ಸೂಚಿಸಿದೆ. ಒಗ್ಗಟ್ಟಿನ ಸರ್ಕಾರದ ಕಲ್ಪನೆ ಯಶಸ್ವಿಯಾಗದಿದ್ದರೆ, ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.

Exit mobile version