#Notice # distribution # new BPL,APL cards # today # Minister KH Muniyappa
ಬೆಂಗಳೂರು ನ 3;ಇಂದಿನಿಂದ ಹೊಸದಾಗಿ APL, BPL ಪಡಿತರ ಕಾರ್ಡ್(Rationcard) ಅನುಮತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಹೊಸ ಪಡಿತರ ಚೀಟಿಗಾಗಿ ( New Ration Card ) ರಾಜ್ಯಾಧ್ಯಂತ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದಾವೆ. ಈ ಅರ್ಜಿಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತ್ರ ಶೀಘ್ರವೇ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.2.95 ಲಕ್ಷ ಬಾಕಿ ಇರುವ ಹೊಸ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಹೊಸ APL, BPL ಕಾರ್ಡ್ ವಿತರಿಸಲಾಗುತ್ತದೆ ಎಂದರು.ಕಟ್ಟುನಿಟ್ಟಾಗಿ ಪರಿಶೀಲನೆ ನಂತರ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುವುದು. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೆ ಪ್ರತಿ BPL ಕುಟುಂಬದ ಸದಸ್ಯರಿಗೆ 170 ಪ್ರತಿ ತಿಂಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪಡಿತರ ಸಂಘದ ಅಧ್ಯಕ್ಷರನ್ನು ಭೇಟಿಯಾಗಿದ್ದು, ಅವರು ಅಕ್ಕಿ ಬೇಕು ಎನ್ನುತ್ತಿದ್ದಾರೆ. ಅಕ್ಕಿ ಜೊತೆಗೆ ಬೇಳೆ ಕೊಡುವ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಹಣ ಕೊಡುವುದರಿಂದ ಪಡಿತರ ಸಂಘಕ್ಕೆ ಕಮಿಷನ್(Commission) ಸಿಗುತ್ತಿಲ್ಲ. ನಿಮ್ಮ ಕಮಿಷನ್ ಬಂದೇ ಬರುತ್ತದೆ. ಅಕ್ಕಿ ಬದಲಿಗೆ ಸದ್ಯ ನಾವು ಹಣ ಕೊಡುತ್ತಿದ್ದೇವೆ. ಮುಂದೆ ಅಕ್ಕಿ ಕೊಡುವ ವ್ಯವಸ್ಥೆ ಆಗುತ್ತಿದೆ ಎಂದರು.ಹೊಸ ಪಡಿತರ ಚೀಟಿ (Rationcard)ಕೋರಿ ಅರ್ಜಿಸಲ್ಲಿಸಿರೋರು ಬಹುತೇಕ ಬಿಪಿಎಲ್(BPL) ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ, ದಾಖಲಾತಿಗಳ ಆಧಾರದ ಮೇಲೆ ಬಿಪಿಎಲ್, ಎಪಿಎಲ್ ಎಂಬುದಾಗಿ ಬೇರ್ಪಡಿಸಿ, ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.ಅನರ್ಹರು BPL ಕಾರ್ಡ್ ಪಡೆದಿದ್ದರೇ ಅವುಗಳ ಪತ್ತೆ ಕಾರ್ಯಾಚರಣೆಯನ್ನು ಆಹಾರ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ. ಒಂದು ವೇಳೆ ಅದು ದೃಢಪಟ್ಟರೇ, ಅವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ