Revenue Facts

ಜಾಮೀನು ಮೊತ್ತವನ್ನು ಬರಿಸಲು ಸಾಧ್ಯವಾಗದ ಬಡ ಕೈದಿಗಳಿಗೆ ಅರ್ಥಿಕ ಬೆಂಬಲ ಘೋಷಸಿದ ನಿರ್ಮಲ ಸೀತಾರಾಮನ್.

ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಕಳೆದ ನವೆಂಬರ್ ನಲ್ಲಿ ನಡೆದ ಸಂವಿಧಾನ ದಿನಾಚಾರಣೆಯ ವೇಳೆ ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಅಲ್ಲಿ ನರಳುತ್ತಿರುವ ಬಡ ಕೈದಿಗಳಿಗೆ ಸಹಾಯ ಮಾಡಲು ಸಲಹೆ ನೀಡಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಅದರಂತೆ ಇಂದು ಈ ಬಗ್ಗೆ ಕ್ರಮವಹಿಸಿದ ಕೇಂದ್ರ ಸರ್ಕಾರವು ದಂಡ ಅಥವಾ ಜಾಮೀನು ಮೊತ್ತವನ್ನು ಭರಿಸಲಾಗದ ಬಡ ಕೈದಿಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ತನ್ನ ಬಜೆಟ್ ಭಾಷಣದಲ್ಲಿ ಘೋಷಿಸಿದೆ.

ಜೈಲುಗಳಲ್ಲಿರುವ ಮತ್ತು ದಂಡ ಅಥವಾ ಜಾಮೀನು ಮೊತ್ತವನ್ನು ಭರಿಸಲು ಸಾಧ್ಯವಾಗದ ಬಡ ವ್ಯಕ್ತಿಗಳಿಗೆ ಬೆಂಬಲದ ದೃಷ್ಟಿಯಿಂದ, ಅಗತ್ಯವಿರುವ ಹಣಕಾಸಿನ ನೆರವು ನೀಡಲಾಗುವುದು” ಎಂದು ಸೀತಾರಾಮನ್ ಹೇಳಿದರು.

ರಾಷ್ಟ್ರಪತಿಯವರ ಭಾಷಣದ ಕೆಲವು ದಿನಗಳ ನಂತರ, ಅಂತಹ ಖೈದಿಗಳ ಬಿಡುಗಡೆಗಾಗಿ ರಾಷ್ಟ್ರೀಯ ಯೋಜನೆಯನ್ನು ರೂಪಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (NALSA) 15 ದಿನಗಳಲ್ಲಿ ಅವರ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಜಾಮೀನು ನೀಡಿದ್ದರೂ ಸುಮಾರು 5,000 ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ತನ್ನ ವರದಿಯಲ್ಲಿ ತಿಳಿಸಿತ್ತು.

Exit mobile version