Revenue Facts

ಬೆಂಗಳೂರು ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ

ಬೆಂಗಳೂರು ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ

#NIA raids # more than 20 places # Bengaluru city

ಬೆಂಗಳೂರು;ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ (NIA-National Investigation Agency) ಬೆಳ್ಳಂಬೆಳಗ್ಗೆಯೇ ಭರ್ಜರಿ ದಾಳಿ ನಡೆಸಿದೆ.ಇತ್ತೀಚೆಗೆ ಶಂಕಿತ ಉಗ್ರ ಅಲಿ ಅಬ್ಬಾಸ್ ಬಂಧನ ಬೆನ್ನಲ್ಲೇ ಎನ್ ಐಎ(NIA) ಅಧಿಕಾರಿಗಳು ಸರಣಿ ದಾಳಿ ಮುಂದುವರೆಸಿದ್ದು, ಭಯೋತ್ಪಾದನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಆರ್‌ಟಿ ನಗರ, ಸುಲ್ತಾನ್‌ ಪಾಳ್ಯ, ಶಿವಾಜಿ ನಗರ, ಪುಲಿಕೇಶಿ ನಗರ, ಜೆ.ಸಿ. ನಗರ, ಚಿನ್ನಪ್ಪ ಗಾರ್ಡನ್ ಸೇರಿದಂತೆ 20ಕ್ಕೂ ಹೆಚ್ಚು ಕಡೆ ದಾಳಿಯಾಗಿದೆ. ತನಿಖಾ ತಂಡಕ್ಕೆ ಮಹತ್ವದ ಸುಳಿವು ಸಿಕ್ಕಿರುವ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕ ಶಂಕೆ ಹಿನ್ನೆಲೆ ಡಿಸೆಂಬರ್ 9 ರಂದು ಪುಲಿಕೇಶಿನಗರದಲ್ಲಿರುವ ಮೋರ್ ರಸ್ತೆಯ ಅಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್​ಐಎ(NIA), 16 ಲಕ್ಷಕ್ಕೂ ಹೆಚ್ಚು ನಗದು ಹಾಗೂ ಲ್ಯಾಪ್ ಟಾಪ್, ಪೆನ್ ಡ್ರೈವ್ ಜಪ್ತಿ ಮಾಡಿದ್ದರು. ಅದರಂತೆ ಅಲಿ ಅಬ್ಬಾಸ್ ಮೊಬೈಲ್, ಲ್ಯಾಪ್ ಟಾಪ್ ರಿಟ್ರೀವ್ ಮಾಡಲಾಗಿತ್ತು. ಈ ವೇಳೆ ಮಹತ್ವದ ಮಾಹಿತಿ ಕಲೆ ಹಾಕಿದ್ದ ಎನ್​ಐಎ ಅಧಿಕಾರಿಗಳು, ಇಂದು ಮತ್ತೆ ನಗರದ ಹಲವೆಡೆ ದಾಳಿ ನಡೆಸಿದ್ದಾರೆ.

Exit mobile version