Revenue Facts

ಬೆಂಗಳೂರು ಸೇರಿದಂತೆ 41 ಕಡೆ NIA ದಾಳಿ;ಬೆಂಗಳೂರಿನಲ್ಲಿ ಶಂಕಿತ ಉಗ್ರ ವಶಕ್ಕೆ

ಬೆಂಗಳೂರು ಸೇರಿದಂತೆ 41 ಕಡೆ NIA ದಾಳಿ;ಬೆಂಗಳೂರಿನಲ್ಲಿ ಶಂಕಿತ ಉಗ್ರ ವಶಕ್ಕೆ

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಐಸಿಸ್‌ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ , ಮಹಾರಾಷ್ಟ್ರ‌ ಸೇರಿದಂತೆ ದೇಶದ 41 ಕಡೆ ದಾಳಿ ನಡೆಸಿದೆ .ಇಂದು ಮುಂಜಾನೆ ಎನ್‌ ಐಎ ದೇಶದ 41 ಕಡೆಗಳಲ್ಲಿ ಐಸಿಸ್‌ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದೆ.ನಗರದಲ್ಲಿ ಶಾಲೆ ನಡೆಸುತ್ತಿದ್ದ ಉಗ್ರನಿಂದ 16,42 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಶಾಲೆಯನ್ನು ನಡೆಸುವುದರ ಜೊತೆ ಡೇಟಾ ಕನ್ಸಲ್‌ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.ಐಸಿಸ್‌ (ISIS) ಉಗ್ರರ ಜೊತೆ ಸಂಪರ್ಕದಲ್ಲಿರುವ ಹಾಗೂ ವಾಸವಾಗಿರುವ ಶಂಕೆ ಹಿನ್ನೆಲೆ NIA ಬೆಂಗಳೂರಿನ ಪ್ರೇಜರ್ ಟೌನ್‌ನ ಮೋರ್ ರಸ್ತೆಯಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಅಧಿಕಾರಿಗಳು ಮಹಾರಾಷ್ಟ್ರದ ಪುಣೆ, ಥಾಣೆ ಗ್ರಾಮಾಂತರ, ಥಾಣೆ ನಗರ ಮತ್ತು ಮೀರಾ ಭಯಂದರ್‌ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು , ಈ ವೇಳೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾದ ಪುಣೆ ಮೂಲದ 15 ಮಂದಿಯನ್ನು ವಶ ಪಡೆದಿರುವುದಾಗಿ ತಿಳಿದುಬಂದಿದೆ .ಅಲ್-ಖೈದಾ ಮತ್ತು ಐಸಿಸ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತಕ್ಕೆ ಪ್ರತಿಜ್ಞೆ ಮಾಡಿದ ಮತ್ತು ಭಯೋತ್ಪಾದಕ ಗುಂಪನ್ನು ರಚಿಸಿದ ಆರೋಪಿಗಳು ಮತ್ತು ಅವರ ಸಹಚರರು ನಡೆಸಿದ ಕ್ರಿಮಿನಲ್ ಪಿತೂರಿಗೆ ಈ ಪ್ರಕರಣ ಸಂಬಂಧಿಸಿದೆ.

Exit mobile version