Revenue Facts

K RERA Rules: ಬಿಲ್ಡರ್‌ ಗಳಿಗೆ ರೇರಾ ಎಚ್ಚರಿಕೆ ನೋಟಿಸ್ ! ಪ್ರಾಜೆಕ್ಟ್‌ ಹಣ ಬ್ಯಾಂಕ್ ಡೆಪಾಸಿಟ್ ಗೆ ಸೂಚನೆ

Real Estate

Karnataka Real Estate Regulatory Authority warns to Builders

Real Estate

#KRERA Rules #Real Estate #Karnataka Real Estate Regulatory Authority

ಬೆಂಗಳೂರು, ಆ. 04: ರಿಯಲ್ ಎಸ್ಟೇಟ್‌ ಪ್ರಾಜೆಕ್ಟ್‌ ಗಳಿಗೆ ಬ್ಯಾಂಕ್‌ ಗಳಿಂದ ಅಥವಾ ಗ್ರಾಹಕರಿಂದ ಪಡೆದ ಹಣವನ್ನು ಯೋಜನೆಗೆ ಅಧಿಸೂಚಿತ ಬ್ಯಾಂಕ್ ಅಕೌಂಟ್‌ ನಲ್ಲಿ ಡೆಪಾಸಿಟ್‌ ಮಾಡುವಂತೆ ಬಿಲ್ಡರ್‌ ಗಳಿಗೆ ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕರ್ನಾಟಕದಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜಾರಿಗೆ ಬಂದಿದೆ.

K RERA Rules and Real estate:

ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ ಸೆಕ್ಷನ್ 17 ರ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಏಜೆಂಟರಿಗೆ ಹಾಗೂ ಗ್ರಾಹಕರಿಗೆ ಕಾಲ ಕಾಲಕ್ಕೆ ಎಚ್ಚರಿಕೆ ಸಂದೇಶ ನೀಡಲು ಅವಕಾಶವಿದೆ. ಅದರಂತೆ, ಸಕಲ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಮೂಲಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಜವಾಬ್ದಾರಿ ನಿಗದಿ ಮಾಡಲಾಗುತ್ತಿದೆ.

Karnataka Real Estate Regulatory Authority warns to Builders

Real Estate Project Money Deposit

ಅದರಂತೆ ರಿಯಲ್ ಎಸ್ಟೇಟ್‌ ಪ್ರಾಜೆಕ್ಟ್ , ( ಲೇಔಟ್ ನಿರ್ಮಾಣ- ಅಪಾರ್ಟ್‌ ಮೆಂಟ್ ನಿರ್ಮಾಣ) ಗಳ ಅನುಷ್ಠಾನಕ್ಕೆ ಬ್ಯಾಂಕುಗಳಿಂದ ಇಲ್ಲವೇ, ಗ್ರಾಹಕರಿಂದ ಸಂಗ್ರಹಿಸಿದ ಪ್ರಾಜೆಕ್ಟ್‌ ನ ಹಣವನ್ನು ನಿರ್ವಹಣೆ ಮಾಡಲು ರಿಯಲ್ ಎಸ್ಟೇಟ್ ಕಂಪನಿಗಳು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದು ಅದರಲ್ಲಿ ಡೆಪಾಸಿಟ್ ಇಡಬೇಕು. ಅಲ್ಲದೇ ಆ ಹಣವನ್ನು ಆ ಯೋಜನೆಗಾಗಿ ಮಾತ್ರ ವಿನಿಯೋಗ ಮಾಡಬೇಕು. ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ಗಳಿಗಾಗಿ ಬ್ಯಾಂಕ್ ನಿಂದ ಪಡೆದ ಮಾರ್ಟ್‌ಗೇಜ್ ಸಾಲ ಅಥವಾ ಗ್ರಾಹಕರಿಂದ ಪಡೆದ ಹಣದಲ್ಲಿ ಶೇ. 70 ರಷ್ಟು ಭೂ ಮಾಲೀಕರಿಗಾಗಿ ಡೆಪಾಸಿಟ್‌ ಮಾಡಬೇಕು. ಆ ಹಣವನ್ನು ಅ ಯೋಜನೆಗಾಗಿ ವಿನಿಯೋಗ ಮಾಡಬೇಕು. ಈ ಕುರಿತು ಚಾರ್ಟ್‌ಟ್ ಅಕೌಂಟೆಂಟ್ ವಾರ್ಷಿಕ ಅಡಿಟ್ ವರದಿಯನ್ನು ರೆರಾಗೆ ಸಲ್ಲಿಸಬೇಕು.

ಕೆಲವು ಬಿಲ್ಡರ್‌ ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ಹೆಸರಿನಲ್ಲಿ ಪಡೆದ ಸಾಲ ಮತ್ತು ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದು ನಿಯಮ ಬಾಹಿರವಾಗಿದ್ದು, ರಿಯಲ್ ಎಸ್ಟೇಟ್ ಉದ್ದೇಶಿತ ಯೋಜನೆಗೆ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಅದೇ ಉದ್ದೇಶಗಳಿಗೆ ಬಳಕೆ ಮಾಡಬೇಕು.

ಹೀಗಾಗಿ ಉದ್ದೆಶಿತ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ಗಳಿಗೆ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಅಥವಾ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅದೇ ಯೋಜನೆಗೆ ಬಳಸುವ ಉದ್ದೇಶದಿಂದ ಬ್ಯಾಂಕ್ ನಲ್ಲಿ ಉದ್ದೆಶಿತ ಯೋಜನೆ ಹೆಸರಿನಲ್ಲಿ ಖಾತೆ ತೆರೆದು ಡೆಪಾಸಿಟ್ ಮಾಡಬೇಕು.

Real Estate Project money Rules

ಸೆಕ್ಷನ್ 3(2) ರ ಅನ್ವಯ ಹಂತ ಹಂತವಾಗಿ ಯೋಜನೆಯ ಹಣವನ್ನು ಯೋಜನೆಗೆ ವಿನಿಯೋಗಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬಳಕೆ ಮಾಡಿದ ಹಣದ ವಿವರಗಳನ್ನು ( ಬ್ಯಾಂಕ್ ಸ್ಟೇಟ್‌ ಮೆಂಟ್ ) ಗಳನ್ನು ಕೆ ರೆರಾ ವೆಬ್‌ ನಲ್ಲಿ ಪ್ರಕಟಿಸಬೇಕು. ಸಾಲ ಕೊಡುವ ಹನಕಾಸು ಸಂಸ್ಥೆಗಳು, ಸಾಲಗಾರರು ಸಹ ಯೋಜನೆಯ ಉದ್ದೇಶಿತ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು. ಯೋಜನೆಯ ಚಾರ್ಟೆಡ್ ಅಕೌಂಟೆಂಟ್ ಉದ್ದೇಶಿತ ಯೋಜನೆಗೆ ಹಣ ಬಳಕೆ ಸಂಬಂಧ ವಿವರಗಳನ್ನು ನಿರ್ವಹಣೆ ಮಾಡಿರಬೇಕು. ಈಗಾಗಲೇ ಚಾಲ್ತಿಯಲ್ಲಿರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳು ಆಗಿದ್ದರೆ, ಅಂತಹ ಯೋಜನೆಗಳಿಗೆ ಪಡೆದ ಸಾಲವನ್ನು ಯೋಜನೆಗೆ ಬಳಸದೇ ಇದ್ದ ಪಕ್ಷದಲ್ಲಿಮೂರು ತಿಂಗಳ ಒಳಗೆ ಯೋಜನೆಯ ಅಧಿಸೂಚಿತ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು.

KRERA Warns to Real Estate Builders

ಈ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ರೇರಾ ಯಾವುದೇ ಕ್ಷಣ ನೋಟಿಸ್ ನೀಡಿ ದಾಖಲೆಗಳ ಹಾಜರಾತಿಗೆ ಸೂಚಿಸಬಹುದು ಎಂದು ರೇರಾ ಕಾರ್ಯದರ್ಶಿ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

Exit mobile version