Revenue Facts

ಹೊಸ ಮನೆಗೆ ಟ್ರೆಂಡಿ ಪೀಠೋಪಕರಣಗಳನ್ನು ಆಯ್ಕೆ ಮಾಡುವಾಗ ಇರಲಿ ಎಚ್ಚರ!!

ಬೆಂಗಳೂರು, ಮೇ. 02 : ಮನೆಯ ಜಾಗ ಚಿಕ್ಕದು. ನಾವು ನಮಗೆ ಬೇಕಾದಂತೆ ಪೀಠೋಪಕರಣಗಳನ್ನು ಬಳಸಲು ಸಾಧ್ಯವಿಲ್ಲವಲ್ಲ ಎಂದು ಯೋಚಿಸಬೇಡಿ. ಮಾರುಕಟ್ಟೆಯಲ್ಲಿ ಜಾಗ ಕಡಿಮೆ ಇದ್ದರೂ ಬಳಸುವಂತಹ ಫೀಠೋಪಕರಣಗಳಿವೆ. ಅಂತಹ ಸಂದರ್ಭದಲ್ಲಿ ಟು ಇನ್ ಒನ್ ಪೀಠೋಪಕರಣಗಳನ್ನು ಬಳಸಬಹುದು. ಜನರ ಅನುಕೂಲತೆ ಹಾಗೂ ಅಗತ್ಯತೆಗೆ ತಕ್ಕ ಹಾಗೆ ಈಗ ಪೀಠೋಪಕರಣಗಳನ್ನು ತಯಾರಿಸಲಾಗುತ್ತದೆ. ಇಂತಹ ಪ್ರವೃತ್ತಿಯನ್ನು ಫರ್ನಿಚರ್ ಕಂಪನಿಗಳು ಬೆಳೆಸಿಕೊಂಡಿವೆ.

ಈ ಬಗ್ಗೆ ಈಗಾಗಲೇ ನೀವು ಸಾಕಷ್ಟು ವೀಡಿಯೋಗಳನ್ನು ಕೂಡ ನೋಡಿರುತ್ತೀರಾ. ಆದರೆ, ಅದರ ಲಭ್ಯತೆ ಬಗ್ಗೆ ನಿಮಗೆ ಹೆಚ್ಚಿನಮಾಹಿತಿ ಇರುವುದಿಲ್ಲ ಅಷ್ಟೇ. ಟು ಇನ್ ಒನ್ ಪೀಠೋಪಕರಣಗಳ ಫಲವಾಗಿ ಸೋಫಾ ಕಮ್ ಬೆಡ್, ಟೇಬಲ್ ಕಮ್ ಸ್ಲ್ಯಾಬ್ ಟೇಬಲ್ ಕಮ್ ಸ್ಟ್ಯಾಂಡ್ ಮತ್ತು ದಿವಾನ್ ಕಮ್ ಬೆಡ್ ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಇದರಲ್ಲಿ ಬ್ಯಾಕ್ ರೆಸ್ಟ್ ಇರುವ ಹಾಗೂ ಇಲ್ಲದಿರುವ ಆಯ್ಕೆಗಳು ಕೂಡ ನಿಮಗೆ ಸಿಗುತ್ತವೆ.

ಸೋಫಾ ಕಮ್ ಬೆಡ್ ಅನ್ನು ಖರೀದಿಸಿದರೆ, ಕಡಿಮೆ ಸ್ಥಳ ಸಾಕಾಗುತ್ತದೆ. ನಾಲ್ಕು ಜನ ಕೂರುವಂತಹ ಸೋಫಾದಲ್ಲೇ, ರಾತ್ರಿ ಇಬ್ಬರು ಮಲಗಬಹುದು. ಸಾಮಾನ್ಯವಾಗಿ ಇವನ್ನು ಗಟ್ಟಿಯಾದ ಮರದಿಂದ ತಯಾರಿಸಲಾಗುತ್ತದೆ. ರಬ್ಬರ್ವುಡ್ ಹಾಗೂ ಎಂ.ಡಿ.ಎಫ್, ಫ್ಲೈವುಡ್ ಅನ್ನು ಬಳಸುತ್ತಾರೆ. ತಳಭಾಗದಲ್ಲಿ ಆಧಾರಕ್ಕಾಗಿ ಕಬ್ಬಿಣದ ಫ್ರೇಮ್ಗಳನ್ನು ಅಳವಡಿಸಲಾಗುತ್ತದೆ. ಹೊರನೋಟಕ್ಕೆ ಸೋಫಾ ಸೆಟ್ನಂತೆ ಕಾಣುತ್ತದೆ. ಆದರೆ. ಇದರ ಕೆಳಗೆ ಬೆಡ್ ಕೂಡ ಇರುತ್ತದೆ.

ಹಗಲಿನಲ್ಲಿ ಸೋಫಾ ಮಾಡಿಕೊಂಡು ಕೂತುಕೊಳ್ಳಬಹುದು. ಅದೇ ರಾತ್ರಿ ವೇಳೆ ಕೆಳಗಿರು ಅರ್ಧ ಭಾಗದ ಬೆಡ್ ಅನ್ನು ಎಳೆದು ಜೋಡಿಸಿ ಮಲಗಲೂ ಬಹುದು. ಇಂತಹ ಸೋಫಾ ಸೆಟ್ ಗಳು ಮಾರುಕಟ್ಟೆಯಲ್ಲಿ ತರಹೇವಾರಿ ಡಿಸೈನ್ ಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ ಅಳತೆಯಲ್ಲಿನ ಸೋಫ್ ಕಮ್ ಬೆಡ್ ಪೀಠೋಪಕರಣವೊಂದು ಮಡಚಿರುವಾಗ ಉದ್ದಗಲ 2.5×6 ಅಡಿಗಳಿರುತ್ತದೆ. ಅದನ್ನು ಅಗಲಿಸಿದಾಗ 6×5 ಅಡಿ ಅಳತೆಯ ಸ್ಥಳವನ್ನು ಮಾತ್ರ ಆವರಿಸುತ್ತವೆ.

ಹೀಗಾಗಿ ಚಿಕ್ಕ ಮನೆಯ ಆವರಣಕ್ಕೆ ಇಂಥಹ ಪೀಠೋಪಕರಣಗಳು ಹೊಂದಿಕೊಳ್ಳುತ್ತವೆ. ಇದನ್ನು ನಿರ್ವಹಿಸುವುದು ಕಷ್ಟವೇನೂ ಅಲ್ಲ. ಹಸಿ ಬಟ್ಟೆಯಿಂದ ಶುಚಿಗೊಳಿಸಲುಬಹುದು. ಅಗತ್ಯ ಬಿದ್ದಾಗ ಫಾಲಿಶ್ ಮಾಡಿಸಿದರೆ ಆಯ್ತು. ಕುಷನ್ ಗಳನ್ನು ಅವಶ್ಯಕತೆ ಬಿದ್ದಾಗ ಬದಲಾಯಿಸಬಹುದು. ದೀರ್ಘಕಾಲಕ್ಕೆ ಇವು ಬಾಳಿಕೆಗೆ ಬರುತ್ತವೆ. ಕೆಲವೊಂದು ಫರ್ನಿಚರ್ ಶೋರೂಂಗಳು ಇಂತಿಷ್ಟು ವರ್ಷಗಳಿಗೆಂದು ಗ್ಯಾರಂಟಿ ಕೂಡ ಕೊಡುತ್ತಾರೆ.

Exit mobile version