Revenue Facts

ನಂದಿನಿ ಹಾಲಿನ ಬೆಲೆ ಹೆಚ್ಚಾಗೋದು ಫಿಕ್ಸ್..! ಗ್ರಾಹಕರ ಜೇಬಿಗೆ ಕತ್ತರಿನೂ ಫಿಕ್ಸ್

ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ‌ ಹೆಚ್ಚಾಗುವಂತಹ ಸಾಧ್ಯತೆಗಳು ಸಾಕಷ್ಟಿವೆ ಎನ್ನಲಾಗುತ್ತಿದೆ. ಯಾಕೆಂದರೆ ನಂದಿನಿ ಹಾಲಿನ ದರವನ್ನ ಪುನಃ KMF ಬದಲಾವಣೆ ಮಾಡಲು ವಿಚಾರ ನಡೆಸುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಫಿಕ್ಸ್ ಎನ್ನಲಾಗುತ್ತಿದೆ.ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ ಎನ್ನಲಾಗುತ್ತಿದ್ದು, ಕೆಎಂಎಫ್ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆಯ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಸರ್ಕಾರಕ್ಕೆ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿರುವ KMF

ರಾಜ್ಯ ಕಾಂಗ್ರೆಸ್ ಸರ್ಕಾರ KMFನ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವಂತಹ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ

ಆರ್ಥಿಕ ಸಂಕಷ್ಟದ ಕಾರಣ 5 ರೂಪಾಯಿ ಹೆಚ್ಚು ಮಾಡುವಂತೆ ಬೇಡಿಕೆ

ಪ್ರಸ್ತುತ ವರ್ಷದಲ್ಲಿ ಆರ್ಥಿಕ ನಷ್ಟವಾಗಿರುವ ಹಿನ್ನೆಲೆಯಲ್ಲಿ 5 ರೂಪಾಯಿ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ, ಸರ್ಕಾರವು ಅಕ್ಟೋಬರ್‌ ನಲ್ಲಿ ಕೇವಲ 3ರೂಪಾಯಿ ಏರಿಕೆ ಮಾಡಿತ್ತಷ್ಟೆ. ಆದರೆ ಇವಾಗ 14 ಹಾಲು ಉತ್ಪಾದಕ ಒಕ್ಕೂಟ ಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ..ಒಟ್ಟಿನಲ್ಲಿ ಗ್ರಾಹಕರಿಗೆ ಹಾಲು ಕೊಳ್ಳುವಲ್ಲಿ ನಂದಿನಿ ಪುನಃ ಬರೆ ಹಾಕಲಿದೆ‌ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

 

Exit mobile version