Revenue Facts

Mysore Bangalore Express Highway;ಟೋಲ್ ದರ ಹೆಚ್ಚಳ,ಆದೇಶ ವಾಪಸ್ ಪಡೆದ NHAI

Mysore Bangalore Express Highway;ಟೋಲ್ ದರ ಹೆಚ್ಚಳ,ಆದೇಶ ವಾಪಸ್ ಪಡೆದ NHAI

Mysore#Banglore#Expressway#socialmedia#pratapsimha
ಬೆಂಗಳೂರು: ಮೈಸೂರು – ಬೆಂಗಳೂರು ಎಕ್ಸ್ಪ್ರೆಸ್ ವೇ ಟೋಲ್ ಬೆಲೆ ಏರಿಕೆಗೆ ತಡೆಹಿಡಿಯಲಾಗಿದೆ.ಎಂದು ಈ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದ  ಮೂಲಕ ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ದರ ಪರಿಷ್ಕರಣೆಯಾಗಿದ್ದು, ಇಂದಿನಿಂದ ಏಪ್ರಿಲ್ 1ರಿಂದ ಏರಿಕೆಯಾಗಿದೆ. ತೀವ್ರವಾಗಿ ವಿರೋಧಿಸಿದ್ದ ಪ್ರಯಾಣಿಕರು, ಹೆದ್ದಾರಿಯಲ್ಲಿ ಶುಲ್ಕ ಸಂಗ್ರಹಿಸಲು ಆರಂಭವಾದ ಕೇವಲ 17 ದಿನಕ್ಕೇ ಶುಲ್ಕವನ್ನು ಪರಿಷ್ಕರಿಸಿರುವುದರ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಪ್ರಯಾಣಿಕರ ಹಗಲು ದರೋಡೆಗೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಪ್ರಾಧಿಕಾರವು(ಎನ್‌ಎಚ್‌ಎಐ) ತನ್ನ ಆದೇಶವನ್ನು ವಾಪಸ್ ಪಡೆದುಕೊಂಡಿದೆ.ನಿನ್ನೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಮಾರ್ಚ್ 14 ರಂದು ಟೋಲ್ ದರ ಹೆಚ್ಚಿಸಿದಾಗ ಬೆಂಗಳೂರಿನಿಂದ 135 ರೂ. ಇಂದಿನಿಂದ ಜಾರಿಗೆ ಬರುವಂತೆ 165 ರೂ.ಗೆ ಹೆಚ್ಚಿಸಲಾಗಿದೆ.ಇಡೀ ದೇಶಾದ್ಯಂತ ಇರುವ ಎಲ್ಲ ಟೋಲ್ ರಸ್ತೆಗಳಲ್ಲಿ ಶೇಕಡಾ 7ರಿಂದ ಒಂದಷ್ಟು ನಿಖರ ಬೆಲೆಯವರೆಗೆ ಹೆಚ್ಚಳ ಮಾಡಲಾಗಿದೆ. ಇದು ಕೇವಲ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಗೆ ಮಾತ್ರ ಅನ್ವಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Exit mobile version