Revenue Facts

ಇಂದು ವಿದ್ಯಾರ್ಥಿಗಳ ಜತೆ ಮೋದಿ ಪರೀಕ್ಷಾ ಪೆ ಚರ್ಚಾ,ಗೆ 38 ಲಕ್ಷ ನೋಂದಣಿ,ಎಲ್ಲಿ ವೀಕ್ಷಿಸಬಹುದು?

ಇಂದು ವಿದ್ಯಾರ್ಥಿಗಳ ಜತೆ ಮೋದಿ ಪರೀಕ್ಷಾ ಪೆ ಚರ್ಚಾ,ಗೆ 38 ಲಕ್ಷ ನೋಂದಣಿ,ಎಲ್ಲಿ ವೀಕ್ಷಿಸಬಹುದು?

ನವ ದೆಹಲಿ: “ಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರ ಬಂದು ಆಸಕ್ತಿಯಿಂದ, ಖುಷಿಯಿಂದ ಪರೀಕ್ಷೆ ಬರೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಡೆದುಕೊಳ್ಳಬೇಕು” ಎಂದು ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು (ಜ.27) ಪರೀಕ್ಷಾ ಪೇ ಚರ್ಚಾ 2023ರ ವಾರ್ಷಿಕ ಕಾರ್ಯಕ್ರಮದಲ್ಲಿ ಬೋರ್ಡ್ ಪರೀಕ್ಷೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿಗಳು ಹೆಚ್ಚಾಗಿವೆ. ಈ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಸುಮಾರು 38.80 ಲಕ್ಷ ಜನರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಹಾಗೂ 1.95 ಲಕ್ಷ ಪೋಷಕರು ಪರೀಕ್ಷಾ ಪೇ ಚರ್ಚಾ ಗೆ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 2023 ರ ಬೋರ್ಡ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಅವರಿಗೆ ಒತ್ತಡ-ಮುಕ್ತ ಮಂತ್ರಗಳನ್ನು ನೀಡಲಿದ್ದಾರೆ. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಕ್ಷಾ ಪೇ ಚರ್ಚಾ 2023 ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. 16 ಲಕ್ಷಕ್ಕೂ ಹೆಚ್ಚು ರಾಜ್ಯ ಮಂಡಳಿಗಳಿಂದ ಬಂದಿದ್ದು, 155 ದೇಶಗಳಿಂದ ನೋಂದಣಿ ಮಾಡಲಾಗಿದೆ.

ಈವೆಂಟ್ ಅನ್ನು ಶಿಕ್ಷಣ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿ ಇವುಗಳಿಂದ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಶಿಕ್ಷಣ ಸಚಿವಾಲಯದ ಅಧಿಕೃತ ವೆಬ್‌ಸೈಟ್, education.gov.in ಈ ಎಲ್ಲಾ ನೇರ ಪ್ರಸಾರಗಳಿಗೆ ಲಿಂಕ್‌ಗಳನ್ನು ಹೊಂದಿದೆ.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜನವರಿ 25 ರಂದು 2023 ರ ಪರೀಕ್ಷೆಯ ಚರ್ಚೆಯ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಪ್ರಧಾನ್, ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಹೊರಬರಲು ಪರೀಕ್ಷೆಗಳ ಕುರಿತು ಚರ್ಚೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಮೊದಲ ಬಾರಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಈ ಕಾರ್ಯಕ್ರಮದ ಮೂಲಕ ಪ್ರಧಾನಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದಾರೆ.

ಜನವರಿ 27 ರಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ
ಜನವರಿ 27 ರಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಪುಸ್ತಕವನ್ನು ಇದುವರೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲಾಗಿದೆ, ಜೊತೆಗೆ ಹಿಂದಿ ಮತ್ತು ಇಂಗ್ಲಿಷ್‌ನ ಪರಿಷ್ಕೃತ ಆವೃತ್ತಿಗಳು ಲಭ್ಯವಿದೆ. ಇದರಲ್ಲಿ ಪ್ರಧಾನಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಶಿಕ್ಷಣ ಸಚಿವಾಲಯವು ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ.

ಪುತ್ರರು ಹಾಗೂ ಪುತ್ರಿಯರ ನಡುವೆ ಯಾವುದೇ ತಾರತಮ್ಯ ಮಾಡದೆ ಸಮಾನ ಅವಕಾಶಗಳನ್ನು ಸಮಾಜ ನೀಡಬೇಕು. ಬಾಲಕಿಯರ ಸಾಮರ್ಥ್ಯವನ್ನು ಗುರುತಿಸುವಲ್ಲಿ ಸಮಾಜ ವಿಫಲವಾದರೆ, ಅಂತಹ ಸಮಾಜ ಎಂದಿಗೂ ಪ್ರಗತಿ ಸಾಧಿಸದು. ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ನೀಡಿದರೆ, ಹೆಣ್ಣುಮಕ್ಕಳೇ ಉತ್ತಮ ಸಾಧನೆ ಮಾಡುತ್ತಾರೆ. ಪೋಷಕರನ್ನು ನೋಡಿಕೊಳ್ಳಲು ವಿವಾಹವನ್ನೇ ಆಗದ ಹೆಣ್ಣುಮಕ್ಕಳನ್ನು ನಾನು ನೋಡಿದ್ದೇನೆ. ಮಗ ಸಂತೋಷವಾಗಿ ಬಾಳುತ್ತಿದ್ದರೂ ವೃದ್ಧಾಶ್ರಮದಲ್ಲಿ ದಿನದೂಡುತ್ತಿರುವ ಪೋಷಕರನ್ನೂ ಕಂಡಿದ್ದೇನೆ ಎಂದು ಮೋದಿ ಹೇಳಿದ್ದರು.

ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಆರ್. ವಿಶಾಲ್ ಹಾಗೂ ಸಮಗ್ರ ಕರ್ನಾಟಕ ಯೋಜನಾ ನಿರ್ದೇಶಕರಾದ ಕಾವೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ವರ್ಷ ಏಪ್ರಿಲ್‌ 1ರಂದು ಪರೀಕ್ಷಾ ಪೇ ಚರ್ಚಾ ನಡೆದಿತ್ತು. ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚಾವನ್ನು 2018 ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಪ್ರಧಾನ ಮಂತ್ರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ನೇರವಾಗಿ ಸಂವಾದ ಮಾಡುತ್ತಾರೆ. ದೇಶದಲ್ಲಿ ಪರೀಕ್ಷೆಯ ಪ್ರಾರಂಭದಲ್ಲಿಈ ಕಾರ್ಯಕ್ರಮ ನಡೆಯುತ್ತದೆ.

Exit mobile version