Revenue Facts

ವರ್ಗಾವಣೆ ದಂಧೆಗೆ ಬ್ರೇಕ್: “ಅದರ ಫಲ ಸಮಾಜಕ್ಕೆ ಕೊಡಿ” ಕೃಷ್ಣಬೈರೇಗೌಡ

ವರ್ಗಾವಣೆ ದಂಧೆಗೆ ಬ್ರೇಕ್: “ಅದರ ಫಲ ಸಮಾಜಕ್ಕೆ ಕೊಡಿ” ಕೃಷ್ಣಬೈರೇಗೌಡ

#Krishnabyregowda #Revenue department #SubRegistrar transfer

ಬೆಂಗಳೂರು, ಅ. 30: ಉಪ ನೋಂದಣಾಧಿಕಾರಿಗಳ 25 ವರ್ಷದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳ ಸಮಸ್ಯೆಯನ್ನು ನೇರವಾಗಿ ಆಲಿಸಿ ಪರಿಹಾರ ಸೂಚಿಸಿದ್ದಾರೆ.ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಈವರೆಗೂ ಯಾವ ಸಚಿವರು ಉಪ ನೋಂದಣಾಧಿಕಾರಿಗಳನ್ನು ಒಂದಡೆ ಸೇರಿಸಿ ಇಲಾಖೆಯ ಸಮಸ್ಯೆಗಳನ್ನು ಸಚಿವರಾದವರು ಕೇಳಿದ ಪ್ರಸಂಗವೇ ಇರಲಿಲ್ಲ!. ಕಳೆದ ಭಾನುವಾರ ಯುವನಿಕ ಸಭಾಂಗಣದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಲ್ಲದೇ ನೋಂದಣಿ ಸೇವೆಯನ್ನು ಪಾರದರ್ಶಕವಾಗಿ ಜನರಿಗೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಆಡಿದ ಮಾತುಗಳು ಉಪ ನೋಂದಣಾಧಿಕಾರಿಗಳ ಮನಮುಟ್ಟುವಂತಿತ್ತು.

 

” ನಿಮಗೆಲ್ಲಾ ಗೊತ್ತಿದೆ. ಈ ಹಿಂದೆ ಉಪ ನೋಂದಣಾಧಿಕಾರಿಗಳ ವರ್ಗಾವಣೆ ಹೇಗಿತ್ತು ( ದಂಧೆ) ಎಂಬುದು. ನಾನು ಸಚಿವನಾದ ಮೇಲೆ ಯಾವ ರೀತಿ ಬದಲಾಗಿದೆ ಎಂಬುದು ತಮಗೆಲ್ಲರಿಗೂ ಗೊತ್ತಿದೆ. ಇದರ ಲಾಭ ಸಾರ್ವಜನಿಕರಿಗೆ ಸಿಗಬೇಕು ಎಂದು ಮಾರ್ಮಿಕವಾಗಿ ನುಡಿದರು. ಅಂದರೆ ಅನಾಯಸವಾಗಿ ವರ್ಗಾವಣೆಗಾಗಿ ಹಣ ಕೊಟ್ಟು ಉಪ ನೋಂದಣಾಧಿಕಾರಿಗಳು ಅದನ್ನು ಸಾರ್ವಜನಿಕರಿಂದ ಪಡೆಯಬೇಡಿ. ಸಾರ್ವಜನಿಕರಿಗೆ ಪಾರದರ್ಶಕವಾಗಿ ಸೇವೆ ಒದಗಿಸಿಕೊಡಿ ಎಂದು ಪರೋಕ್ಷವಾಗಿ ನುಡಿದರು. ಕೃಷ್ಣಬೈರೇಗೌಡ ಅವರ ಈ ಮನದಾಳದ ಮಾತು ಕೇಳಿದ ಉಪ ನೋಂದಣಾಧಿಕಾರಿಗಳ ಕರತಾಡನ ಮುಗಿಲು ಮುಟ್ಟಿತ್ತು. ಉಪ ನೋಂದಣಾಧಿಕಾರಿಗಳ ಇತಿಹಾಸದಲ್ಲಿ ಈ ರೀತಿ ಸಭೆ ಕರೆದು – ಸಮಸ್ಯೆಗಳನ್ನು ಅಲಿಸಿ ಪರಿಹಾರ ಕಂಡುಕೊಂಡ ಒಂದು ನಿರ್ದರ್ಶನ ಇಲ್ಲ. ಅದರೆ ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕಂದಾಯ ಸೇವೆ ಸಾರ್ವಜನಿಕರಿಗೆ ಭ್ರಷ್ಟಮುಕ್ತವಾಗಿ ಒದಗಿಸುವ ನಿಟ್ಟಿನಲ್ಲಿ ಸಚಿವರು ಅಡಿದ ಮಾತುಗಳು ಎಲ್ಲಡೆ ಪ್ರಶಂಸೆಗೆ ಒಳಗಾಗಿದೆ.

ಕಾವೇರಿ ಸಮಸ್ಯೆ ಇತ್ಯರ್ಥ: ಕಾವೇರಿ 2 ತಂತ್ರಾಂಶದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಅವುಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಬಹುದು. ಮುಂದಿನ ಅರು ತಿಂಗಳಲ್ಲಿ ಕಾವೇರಿ 2 ರಲ್ಲಿನ ಸಮಸ್ಯೆಗಳು ಇತ್ಯರ್ಥವಾಗಲಿವೆ. ಇನ್ನು ಹ್ಯಾಕರ್‌ ಗಳು ಹ್ಯಾಕ್ ಮಾಡದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.

ಉಪ ನೋಂದಣಾಧಿಕಾರಿಗಳ ವರ್ಗಾವಣೆ ದಂಧೆ: ಉಪ ನೋಂದಣಾಧಿಕಾರಿಗಳ ವರ್ಗಾವಣೆ ಈ ಹಿಂದೆ ದೊಡ್ಡ ದಂಧೆಯಾಗಿ ಪರಿವರ್ತನೆಯಾಗಿತ್ತು. ಕೇವಲ ಹಣ ಕೊಡುವರಿಗೆ ಆಯಕಟ್ಟಿನ ಜಾಗ ಎಂಬಂತಾಗಿತ್ತು. ಹದಿಮೂರು ವರ್ಷಗಳಿಂದ ಈ ವರ್ಗಾವಣೆ ದಂಧೆಗೆ ಬ್ರೇಕ್ ಬಿದ್ದಿರಲಿಲ್ಲ. ಈ ದಂಧೆ ಯನ್ನು ಇಲಾಖೆಯಲ್ಲಿ ಕೆಲಸ ಮಾಡಿದ್ದ ನಿವೃತ್ತ ಇಂಜಿನಿಯರ್‌ ಸೇರಿ ಹಲವರು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಉಪ ನೋಂದಣಾಧಿಕಾರಿಯಾಗಿ ಒಂದು ವರ್ಷದ ನಂತರ ಅದೇ ಹುದ್ದೆಯಲ್ಲಿ ಮುಂದುವರೆಯಲು ಹಣ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮಿಗಿಲಾಗಿ ಒಂದು ಕಂದಾಯ ನಿವೇಶನ ನೋಂದಣಿ ಮಾಡಿದರೆ ಇಂತಿಷ್ಟು ಮೊತ್ತ ಉಪ ನೋಂದಣಾಧಿಕಾರಿಗಳು ಕಪ್ಪ ಕೊಡಬೇಕು ಎಂಬ ಅರೋಪವು ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿತ್ತು.

ಕೃಷ್ಣಬೈರೇಗೌಡ ಅವರು ಕಂದಾಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉಪ ನೋಂದಣಾಧಿಕಾರಿಗಳ ವರ್ಗಾವಣೆ ದಂಧೆಗೆ ಬ್ರೇಕ್ ಹಾಕಿದ್ದರು. ಕಿಂಗ್ ಪಿನ್‌ ಗಳನ್ನು ತಮ್ಮ ಬಾಗಿಲ ಬಳಿ ನುಸುಳಿಯಲು ಬಿಟ್ಟಿರಲಿಲ್ಲ. ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರಲು ಮಾಡಿದ ಪ್ರಯತ್ನ ಸಫಲವಾಗಿತ್ತು. ಅದನ್ನು ಉಲ್ಲೇಖಿಸಿಯೇ ಮಾತನಾಡಿರುವ ಕಂದಾಯ ಸಚಿವರು, ಅದರ ಲಾಭ ಸಮಾಜಕ್ಕೆ ಸಿಗಲಿ ಎಂದು ಹೇಳಿದ್ದಾರೆ. ಅಂದರೆ, ಹಣ ಕೊಟ್ಟು ಹುದ್ದೆ ಪಡೆಯಬೇಡಿ. ಅಂತಹ ವ್ಯವಸ್ಥೆ ಈಗ ಇಲ್ಲ. ಹೀಗಾಗಿ ನೋಂದಣಿಗೆ ಬರುವ ಸಾರ್ವಜನಿಕರಿಂದ ಹಣ ಪಡೆಯದೆ, ಅದರ ಲಾಭವನ್ನು ಸಮಾಜಕ್ಕೆ ನೀಡಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸಚಿವರ ಈ ಮಾತುಗಳು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಭಿನಂದನೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿಯಾಗುವ ದಸ್ತವೇಜುಗಳಿಂದ ಸರ್ಕಾರ 25 ಸಾವಿರ ಕೋಟಿ ಸಂಗ್ರಹಿಸಲು ಟಾರ್ಗೆಟ್ ನೀಡಲಾಗಿದೆ. ಇತ್ತೀಚೆಗೆ ಸ್ಥಿರಾಸ್ತಿಗಳ ಮೌಲ್ಯ ಹೆಚ್ಚಿಸಿದ ಬೆನ್ನಲ್ಲೇ ದಾಖಲೆ ಮಟ್ಟದಲ್ಲಿ ದಾಸ್ತವೇಜುಗಳು ನೋಂದಣಿಯಾಗಿದ್ದವು. ಟಾರ್ಗೆಟ್‌ ರೀಚ್ ಮಾಡಿದ ಉಪ ನೋಂದಣಾಧಿಕಾರಿಗಳನ್ನು ಇದೇ ಸಭೆಯಲ್ಲಿ ಅಭಿನಂದಿಸಲಾಯಿತು.

 

 

Exit mobile version